ಕ್ರಿಕೆಟ್‌ನಲ್ಲಿ ಭಾರತ, ಪಾಕ್ ನಿಂದಾಗದ ದಾಖಲೆ ಮಾಡಿದ ಸ್ಪೇನ್! ಆಸ್ಟ್ರೇಲಿಯಾ ರೆಕಾರ್ಡ್ ನುಚ್ಚುನೂರು; ಯಾವ ದಾಖಲೆ ಅದು?
ಕ್ರಿಕೆಟ್‌ನ ಶ್ರೇಷ್ಠ ತಂಡಗಳು ಅಂದರೆ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಸೌತ್ ಆಫ್ರಿಕಾ ಹೀಗೆ ದೊಡ್ಡ ತಂಡಗಳ ಹೆಸರು ಕೇಳಿರುಬರುತ್ತದೆ. ಆದರೆ, ಈ ದೈತ್ಯ ತಂಡಗಳು ಮಾಡದ ಒಂದು ದಾಖಲೆಯನ್ನ, ಕ್ರಿಕೆಟ್‌ನಲ್ಲಿ ಅಂಬೆಗಾಲು ಇಡುತ್ತಿರುವ ರಾಷ್ಟ್ರವೊಂದು ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ಪ್ರಸ್ತುತ ಕ್ರಿಕೆಟ್‌ನ ಶ್ರೇಷ್ಠ ತಂಡಗಳು ಅಂದರೆ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಸೌತ್ ಆಫ್ರಿಕಾ ಹೀಗೆ ದೊಡ್ಡ ದೊಡ್ಡ ತಂಡಗಳ ಹೆಸರು ಕೇಳಿರುಬರುತ್ತದೆ. ಆದರೆ, ಈ ದೈತ್ಯ ತಂಡಗಳು ಮಾಡದ ಒಂದು ದಾಖಲೆಯನ್ನ, ಕ್ರಿಕೆಟ್‌ನಲ್ಲಿ ಅಂಬೆಗಾಲು ಇಡುತ್ತಿರುವ ರಾಷ್ಟ್ರವೊಂದು ಆಸ್ಟ್ರೇಲಿಯಾ ತಂಡದ 23 ವರ್ಷಗಳ ಹಳೆಯ ದಾಖಲೆಯನ್ನು ನುಚ್ಚುನೂರು ಮಾಡಿದೆ.
ಹೌದು, ಫುಟ್‌ಬಾಲ್ ಮತ್ತು ಬುಲ್‌ಫೈಟ್‌ಗೆ ಜಗತ್ಪ್ರಸಿದ್ಧವಾಗಿರುವ ದೇಶವೊಂದು ಕ್ರಿಕೆಟ್ ಅಂಗಳದಲ್ಲಿ ಇಂತಹದೊಂದು ಅಚ್ಚರಿಯ ಇತಿಹಾಸ ಸೃಷ್ಟಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸಾಂಪ್ರದಾಯಿಕ ಬಲಿಷ್ಠ ತಂಡಗಳಾದ ಭಾರತ, ಇಂಗ್ಲೆಂಡ್ ಅಥವಾ ಪಾಕಿಸ್ತಾನ ಮಾಡಲಾಗದ ಅದ್ಭುತ ಸಾಧನೆಯನ್ನು ಸ್ಪೇನ್ ಕ್ರಿಕೆಟ್ ತಂಡ ಮಾಡಿ ತೋರಿಸಿದೆ. ಅದುವೇ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸತತ ಗೆಲುವು ಸಾಧಿಸಿದ ತಂಡ ಎಂಬ ವಿಶ್ವ ದಾಖಲೆಯನ್ನು ಸ್ಪೇನ್ ತನ್ನ ಮುಡಿಗೇರಿಸಿಕೊಂಡಿದೆ. ಆ ಕುರಿತ ವರದಿ ಇಲ್ಲಿದೆ:
ಯಾವ ದಾಖಲೆ ಅದು?
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ಗೆಲುವಿನ ಸುಂಟರಗಾಳಿ ಎಬ್ಬಿಸಿರುವ ಸ್ಪೇನ್ ರಾಷ್ಟ್ರೀಯ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ತಂಡದ 23 ವರ್ಷಗಳ ಹಳೆಯ ವಿಶ್ವದಾಖಲೆಯನ್ನು ಧೂಳೀಪಟ ಮಾಡಿದೆ. ಅದುವೇ, ಸ್ಪೇನ್ ಕ್ರಿಕೆಟ್ ತಂಡವು ಪುರುಷರ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಪಂದ್ಯಗಳನ್ನು ಸತತವಾಗಿ ಗೆಲವು ಸಾಧಿಸುವ ಮೂಲಕ ಸಾರ್ವಕಾಲಿಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
ಹೌದು, 2028ರ ಟಿ20 ವಿಶ್ವಕಪ್‌ನ ಯುರೋಪ್ ಸಬ್-ರೀಜನಲ್ ಕ್ವಾಲಿಫೈಯರ್ ಪಂದ್ಯಾವಳಿಯಲ್ಲಿ ಫಿನ್ಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸ್ಪೇನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 21ನೇ ಜಯ ದಾಖಲಿಸಿ ಈ ಹೊಸ ಇತಿಹಾಸ ಸೃಷ್ಟಿಸಿತು. ಪ್ರಸ್ತುತ ತನ್ನ ಗೆಲುವಿನ ಓಟವನ್ನು ಮುಂದುವರಿಸಿರುವ ಸ್ಪೇನ್, ಸತತ 24 ಪಂದ್ಯಗಳನ್ನು ಗೆದ್ದು ವಿಶ್ವದಾಖಲೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಆಸ್ಟ್ರೇಲಿಯಾದ ಆಲ್-ಟೈಮ್ ರೆಕಾರ್ಡ್ ನುಚ್ಚುನೂರು!
ಇದುವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ (ಎಲ್ಲಾ ಮಾದರಿಗಳನ್ನು ಒಳಗೊಂಡಂತೆ) ಸತತವಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ರಿಕಿ ಪಾಂಟಿಂಗ್ ಮತ್ತು ಸ್ಟೀವ್ ವಾ ನೇತೃತ್ವದ ಬಲಿಷ್ಠ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. 2003ರಲ್ಲಿ ಆಸ್ಟ್ರೇಲಿಯಾ ತಂಡವು ಟೆಸ್ಟ್ ಮತ್ತು ಏಕದಿನ ಮಾದರಿಗಳನ್ನು ಒಳಗೊಂಡಂತೆ ಸತತ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆದ್ದು ಇತಿಹಾಸ ಬರೆದಿತ್ತು. ಆದರೆ, ಇತ್ತೀಚೆಗೆ, ಫಿನ್ಲೆಂಡ್ ವಿರುದ್ಧ ಗೆಲ್ಲುವ ಮೂಲಕ ಸ್ಪೇನ್ ತನ್ನ 21ನೇ ಸತತ ಜಯದೊಂದಿಗೆ ಆಸಿಸ್ ದಾಖಲೆ ಮುರಿಯಿತು. ಆ ಬಳಿಕ ಐಲ್ ಆಫ್ ಮ್ಯಾನ್, ಲಕ್ಸೆಂಬರ್ಗ್ ಮತ್ತು ಬಲ್ಗೇರಿಯಾ ತಂಡಗಳನ್ನು ಮಣಿಸಿ ಸದ್ಯ ತನ್ನ ಗೆಲುವಿನ ಸರಪಳಿಯನ್ನು 24 ಪಂದ್ಯಗಳಿಗೆ ವಿಸ್ತರಿಸಿದೆ.
ಭಾರತ, ಪಾಕಿಸ್ತಾನಕ್ಕೂ ಸಾಧ್ಯವಾಗಿಲ್ಲ ಈ ಸಾಧನೆ!
ವಿಶ್ವ ಕ್ರಿಕೆಟ್ ಅನ್ನು ಆಳುತ್ತಿರುವ ಭಾರತವಾಗಲಿ ಅಥವಾ ಬಲಿಷ್ಠ ಎನಿಸಿಕೊಂಡಿರುವ ಪಾಕಿಸ್ತಾನವಾಗಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸತತವಾಗಿ ಇಷ್ಟು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ಐಸಿಸಿ ಪುರುಷರ ಟಿ20 ಶ್ರೇಯಾಂಕದಲ್ಲಿ ಪ್ರಸ್ತುತ 28ನೇ ಸ್ಥಾನದಲ್ಲಿರುವ ಸ್ಪೇನ್ ತಂಡದ ಈ ಸತತ ಗೆಲುವಿನ ಓಟವು ಇಡೀ ಕ್ರಿಕೆಟ್ ಜಗತ್ತನ್ನು ಆಶ್ಚರ್ಯಚಕಿತಗೊಳಿಸಿದೆ.
3 ವರ್ಷಗಳಿಂದ ಅಜೇಯ ಯಾನ!
ಸ್ಪೇನ್ ತಂಡದ ಈ ಅದ್ಭುತ ಗೆಲುವಿನ ಯಾನವು 2023ರ ಫೆಬ್ರವರಿಯಲ್ಲಿ ಐಲ್ ಆಫ್ ಮ್ಯಾನ್ ವಿರುದ್ಧದ ಸರಣಿಯಿಂದ ಆರಂಭವಾಗಿತ್ತು. ಕಳೆದ 3 ವರ್ಷಗಳಿಂದ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೋಲನ್ನೇ ಕಾಣದ ಸ್ಪೇನ್, ಕ್ರೊಯೇಷಿಯಾ, ಜೆರ್ಸಿ, ಗ್ರೀಸ್, ಜೆಕ್ ಗಣರಾಜ್ಯ, ಫಿನ್ಲೆಂಡ್ ಮತ್ತು ಬಲ್ಗೇರಿಯಾ ತಂಡಗಳನ್ನು ಸತತವಾಗಿ ಧೂಳೀಪಟ ಮಾಡುತ್ತಾ ಬಂದಿದೆ.
ಒಟ್ಟಾರೆಯಾಗಿ, ಫುಟ್‌ಬಾಲ್ ಲೋಕದಲ್ಲಿ ಸದಾ ಮುಂಚೂಣಿಯಲ್ಲಿರುವ ಸ್ಪೇನ್ ದೇಶ, ಈಗ ಕ್ರಿಕೆಟ್‌ನಲ್ಲೂ ಇಂತಹದೊಂದು ದೈತ್ಯ ಜಾಗತಿಕ ದಾಖಲೆ ಬರೆದಿರುವುದು ಕ್ರೀಡಾ ಲೋಕದ ಹೊಸ ಸಂಚಲನವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



