India vs Sri Lanka: DRS ತೆಗೆದುಕೊಳ್ಳುವಂತೆ ಒತ್ತಾಯಿಸಿದ ಕನ್ನಡಿಗ ದೇವದತ್ ಪಡಿಕ್ಕಲ್ ಜೊತೆ ಕೆ.ಎಲ್ ರಾಹುಲ್ Bromance!
ಮೊದಲ ಇನಿಂಗ್ಸ್‌ನಲ್ಲಿ 462 ರನ್‌ಗಳಿಸಿದ್ದ ಭಾರತ, ಎರಡನೇ ಇನಿಂಗ್ಸ್‌ನಲ್ಲಿ 193 ರನ್‌ಗಳಿಗೆ ಆಲೌಟ್ ಆಯಿತು. ಮಂಗಳವಾರ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡಕ್ಕೆ ಗೆಲ್ಲಲು 372 ರನ್‌ಗಳ ಗುರಿಯನ್ನು ನಿಗದಿಪಡಿಸಿತು.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 4ನೇ ದಿನದಂದು ಎರಡನೇ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ನಿರ್ಗಮಿಸಿದ ನಂತರ, ಮೊದಲ ಇನಿಂಗ್ಸ್‌ನಲ್ಲಿ ಶಕತ ಸಿಡಿಸಿ ಮಿಂಚಿದ್ದ ದೇವದತ್ ಪಡಿಕ್ಕಲ್ ಮತ್ತು ಕೆಎಲ್ ರಾಹುಲ್ ಭಾರತವನ್ನು ಉತ್ತಮ ವೇಗದಲ್ಲಿ ಮುನ್ನಡೆಸಿದರು. ಪಂದ್ಯ ಆರಂಭವಾದ ಮೊದಲ ಗಂಟೆಯಲ್ಲಿಯೇ ಭಾರತ 225 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. ರಾಹುಲ್ ಅಂತಿಮವಾಗಿ 35 ರನ್‌ಗಳಿಗೆ ಔಟಾದರು. ಆದರೆ, ಪಡಿಕ್ಕಲ್ ಅವರ ಸಕಾಲಿಕ ಹಸ್ತಕ್ಷೇಪವಿಲ್ಲದಿದ್ದರೆ ಅದಕ್ಕೂ ಮುನ್ನವೇ ಅವರು ನಿರ್ಗಮಿಸಬೇಕಾಗಿತ್ತು.
ಭಾರತದ ಇನಿಂಗ್ಸ್‌ನ 11 ನೇ ಓವರ್‌ನ ಕೊನೆಯ ಎಸೆತದಲ್ಲಿ, ಶ್ರೀಲಂಕಾದ ಬೌಲರ್ ಪ್ರಭತ್ ಜಯಸೂರ್ಯ ಎಸೆದ ಚೆಂಡನ್ನು ಕೆಎಲ್ ರಾಹುಲ್ ಮುಂದಕ್ಕೆ ಚಲಿಸುವ ಮೂಲಕ ಅದನ್ನು ರಕ್ಷಣಾತ್ಮಕ ಆಟವಾಡಲು ಪ್ರಯತ್ನಿಸಿದರು. ಆದರೆ, ಆ ಚೆಂಡು ಅವರ ಪ್ಯಾಡ್‌ಗೆ ಬಡಿಯಿತು. ಆಗ ಅಂಪೈರ್ ಎಲ್‌ಬಿಡಬ್ಲ್ಯು (ಲೆಗ್ ಬಿಫೋರ್ ವಿಕೆಟ್) ಆಗಿದೆ ಎಂದು ರಾಹುಲ್ ಔಟ್ ಎಂಬ ತೀರ್ಪು ನೀಡಿದರು. ರಾಹುಲ್ ಆರಂಭದಲ್ಲಿ ಔಟ್ ಎಂದು ಭಾವಿಸಿ ಪೆವಿಲಿಯನ್‌ಗೆ ಹಿಂತಿರುಗಬೇಕು ಎನ್ನುವಷ್ಟರಲ್ಲಿ ಅವರ ಬ್ಯಾಟಿಂಗ್ ಪಾಲುದಾರ ದೇವದತ್ ಪಡಿಕ್ಕಲ್ ಅವರನ್ನು ಡಿಆರ್‌ಎಸ್ ರಿವ್ಯೂ ತೆಗೆದುಕೊಳ್ಳುವಂತೆ ಮನವೊಲಿಸಿದರು.
ರೀಪ್ಲೆ ವೇಳೆ ಬ್ಯಾಟ್‌ಗೆ ಚೆಂಡು ತಗುಲಿರಲಿಲ್ಲ ಮತ್ತು ಇಂಪ್ಯಾಕ್ಟ್ ಇನ್ ಲೈನ್ ಆಗಿತ್ತು. ಆದಾಗ್ಯೂ, ಎಸೆತದ ಎತ್ತರದಿಂದಾಗಿ, ಚೆಂಡು ಸ್ಟಂಪ್‌ಗಳನ್ನು ಮೀರಿ ಹೋಗಿತ್ತು. ಬಳಿಕ ನಾಟೌಟ್ ಎಂದು ತೀರ್ಪು ನೀಡಲಾಯಿತು. ಆಗ ಸಮಾಧಾನಗೊಂಡ ರಾಹುಲ್, ಪಡಿಕ್ಕಲ್ ಅವರಿಗೆ ದೊಡ್ಡ ಅಪ್ಪುಗೆ ನೀಡಿದರು.
ಸೋಮವಾರ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸೋನಲ್ ದಿನುಷಾ ಅವರ ಚೊಚ್ಚಲ ಟೆಸ್ಟ್ ಶತಕದ ನೆರವಿನಿಂದ ಶ್ರೀಲಂಕಾ ತಂಡ 284 ರನ್‌ಗಳಿಗೆ ಆಲೌಟ್ ಆಗಿತ್ತು. ದಿನುಷಾ 168 ಎಸೆತಗಳಲ್ಲಿ 100 ರನ್ ಗಳಿಸಿದರು. ಇದರಲ್ಲಿ ನಾಲ್ಕು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು. ನಿರೋಷನ್ ಡಿಕ್ವೆಲ್ಲಾ (80) ಅವರೊಂದಿಗೆ ಆರನೇ ವಿಕೆಟ್‌ಗೆ 146 ರನ್‌ಗಳ ಜೊತೆಯಾಟವಾಡಿದರು.

'ಅತ್ಯಂತ ವಿಶೇಷ': 167 ರನ್ ಗಳಿಸಿದ ದೇವದತ್ ಪಡಿಕ್ಕಲ್; ಕರ್ನಾಟಕದ ಸಹ ಆಟಗಾರನನ್ನು ಹೊಗಳಿದ ಕೆಎಲ್ ರಾಹುಲ್!
ಬಳಿಕ ಎರಡನೇ ಇನಿಂಗ್ಸ್‌ನಲ್ಲಿ 193 ರನ್‌ಗಳಿಗೆ ಆಲೌಟ್ ಆದ ಭಾರತ, ಮಂಗಳವಾರ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡಕ್ಕೆ ಗೆಲ್ಲಲು 372 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ಮೊದಲ ಇನಿಂಗ್ಸ್‌ನಲ್ಲಿ 462 ರನ್‌ಗಳಿಸಿದ್ದ ಭಾರತ, ಸೋಮವಾರ ಶ್ರೀಲಂಕಾವನ್ನು 284 ರನ್‌ಗಳಿಗೆ ಆಲೌಟ್ ಮಾಡಿ 174 ರನ್‌ಗಳ ನಿರ್ಣಾಯಕ ಮುನ್ನಡೆ ಸಾಧಿಸಿತ್ತು.
ಮಂಗಳವಾರ ಕ್ರೀಸ್‌ಗೆ ಮರಳಿದ ಪ್ರವಾಸಿ ತಂಡ, ಶ್ರೀಲಂಕಾದ ಮೊತ್ತವನ್ನು ಮೀರಿದ ಮೊತ್ತವನ್ನು ಕಲೆಹಾಕುವ ಗುರಿಯೊಂದಿಗೆ ಆಕ್ರಮಣಕಾರಿ ವಿಧಾನವನ್ನು ಅಳವಡಿಸಿಕೊಂಡಿತು. ಭಾರತವು ಊಟದ ಸಮಯದ ವೇಳೆಗೆ 4 ವಿಕೆಟ್‌ಗೆ 116 ರನ್ ಗಳಿಸಿತ್ತು. ಆರಂಭಿಕ ಕೆಎಲ್ ರಾಹುಲ್ (35) ಮತ್ತು ದೇವದತ್ ಪಡಿಕ್ಕಲ್ (44) 64 ರನ್‌ಗಳ ಪಾಲುದಾರಿಕೆಯೊಂದಿಗೆ ಇನಿಂಗ್ಸ್ ಅನ್ನು ಸ್ಥಿರಗೊಳಿಸಿದರು.
ನಂತರ ರಿಷಭ್ ಪಂತ್ ಶ್ರೀಲಂಕಾದ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. 69 ಎಸೆತಗಳಲ್ಲಿ ಎರಡು ಸಿಕ್ಸರ್‌ಗಳು ಸೇರಿದಂತೆ 66 ರನ್ ಗಳಿಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಮತ್ತು ಈ ಮೈಲಿಗಲ್ಲು ತಲುಪಿದ ವಿಶ್ವದ ಅತ್ಯಂತ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

