IPL 2026: PBKS vs RR ಪಂದ್ಯದ ವೇಳೆ ನಿಷೇಧಿತ ಇ-ಸಿಗರೇಟ್ ಸೇದಿ ಸಿಕ್ಕಿಬಿದ್ದ ರಿಯಾನ್ ಪರಾಗ್!
ಮುಲ್ಲನ್‌ಪುರದಲ್ಲಿ ನಡೆದ ಪಿಬಿಕೆಎಸ್ ವಿರುದ್ಧದ ಪಂದ್ಯದಲ್ಲಿ ಆರ್‌ಆರ್‌ನ ರನ್-ಚೇಸ್‌ನ 15ನೇ ಓವರ್ ವೇಳೆ ಈ ಘಟನೆ ಸಂಭವಿಸಿದೆ.
ಮಂಗಳವಾರ ನಡೆದ ಐಪಿಎಲ್ 2026 ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಪಂದ್ಯದ ವೇಳೆ ರಾಜಸ್ಥಾನ ರಾಯಲ್ಸ್ (ಆರ್‌ಆರ್) ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್ ಒಳಗೆ ವೇಪಿಂಗ್ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (ಪಿಇಸಿಎ) 2019ರ ಅಡಿಯಲ್ಲಿ ಭಾರತದಲ್ಲಿ ಇ-ಸಿಗರೇಟ್ ಅಥವಾ ವೇಪಿಂಗ್ ಸಾಧನದ ಬಳಕೆಯನ್ನು ನಿಷೇಧಿಸಲಾಗಿದೆ. ಪಂದ್ಯದ ಸ್ವಲ್ಪ ಸಮಯದ ನಂತರ ಆರ್‌ಆರ್‌ನ ರಿಯಾನ್ ಪರಾಗ್ ವೇಪ್/ಇ-ಸಿಗರೇಟ್ ಬಳಸುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆಟಗಾರ ಮತ್ತು ತಂಡದ ನಿರ್ವಹಣೆ ಕುರಿತು ಅಭಿಮಾನಿಗಳು ಟೀಕಿಸಿದ್ದಾರೆ.
ಮುಲ್ಲನ್‌ಪುರದಲ್ಲಿ ನಡೆದ ಪಿಬಿಕೆಎಸ್ ವಿರುದ್ಧದ ಪಂದ್ಯದಲ್ಲಿ ಆರ್‌ಆರ್‌ನ ರನ್-ಚೇಸ್‌ನ 15ನೇ ಓವರ್ ವೇಳೆ ಈ ಘಟನೆ ಸಂಭವಿಸಿದೆ. ವೈರಲ್ ಆಗಿರುವ ಘಟನೆಯ ದೃಶ್ಯಗಳಲ್ಲಿ, ಪರಾಗ್ ಡ್ರೆಸ್ಸಿಂಗ್ ಕೋಣೆಯಲ್ಲಿ ಕುಳಿತು ವೇಪ್ ಸಾಧನವನ್ನು ಬಳಸುತ್ತಿರುವುದು ಮತ್ತು ಅವರ ತಂಡದ ಸದಸ್ಯರು ಕೂಡ ಅವರು ಸುತ್ತಲೂ ಕುಳಿತಿರುವುದನ್ನು ಕಾಣಬಹುದಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತದೆ. ಈ ನಿಟ್ಟಿನಲ್ಲಿ ಆರ್‌ಆರ್ ಆಡಳಿತ ಮಂಡಳಿ ಮತ್ತು ರಿಯಾನ್ ಪರಾಗ್ ವೇಪ್ ಬಳಕೆ ಬಗ್ಗೆ ಉತ್ತರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕಾಗುತ್ತದೆ. ಇದನ್ನು ನಿಷೇಧಿಸಲಾಗಿದೆ ಎಂದು ಮೂಲವೊಂದು ಹೇಳಿದೆ. ಡ್ರೆಸ್ಸಿಂಗ್ ಕೊಠಡಿ ಮತ್ತು ಕ್ರೀಡಾಂಗಣದ ಆವರಣದಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ ಮತ್ತು ಗೊತ್ತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ಇದನ್ನು ಅನುಮತಿಸಲಾಗಿದೆ.
'ಸಿಗರೇಟ್ ಸೇದುವುದಕ್ಕಿಂತ ಭಿನ್ನವಾಗಿ, ವೇಪಿಂಗ್ ಮಾಡುವಾಗ ನೀವು ಏನು ಉಸಿರಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿರುವುದಿಲ್ಲ. ದೇಶದಲ್ಲಿ ಇದನ್ನು ನಿಷೇಧಿಸಲು ಒಂದು ಕಾರಣವಿದೆ ಮತ್ತು ಅದರೊಳಗಿನ ಪದಾರ್ಥಗಳ ಬಗ್ಗೆ ಮತ್ತು ಅದು ಸುರಕ್ಷತಾ ಮಾರ್ಗಸೂಚಿಗಳನ್ನು ಪೂರೈಸುತ್ತದೆಯೇ ಎಂಬುದರ ಬಗ್ಗೆ ಯಾರಿಗೂ ಯಾವುದೇ ಸುಳಿವು ಇರುವುದಿಲ್ಲ. ವಿಶೇಷವಾಗಿ ಯಾವುದೇ ಕ್ರೀಡಾಪಟು ಇದನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಈ ರೀತಿಯ ಘಟನೆಯ ಬಗ್ಗೆ ಬಿಸಿಸಿಐ ಮೃದು ಧೋರಣೆ ತಾಳದಿರುವುದರಿಂದ ಫ್ರಾಂಚೈಸಿ ಮತ್ತು ನಾಯಕ ಸಿದ್ಧವಾಗಿರಬೇಕಾಗುತ್ತದೆ' ಎಂದು ಮೂಲಗಳು ತಿಳಿಸಿವೆ.
2026ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಆರ್ ಮತ್ತು ಅವರ ತಂಡದ ಆಡಳಿತ ಮಂಡಳಿ ವಿವಾದಕ್ಕೆ ಸಿಲುಕಿರುವುದು ಇದೇ ಮೊದಲಲ್ಲ. ಈ ತಿಂಗಳ ಆರಂಭದಲ್ಲಿ, ಆರ್‌ಆರ್ ತಂಡದ ವ್ಯವಸ್ಥಾಪಕ ರೋಮಿ ಭಿಂದರ್ ತಂಡದ ಡಗೌಟ್‌ನಲ್ಲಿ ಕುಳಿತು ಮೊಬೈಲ್ ಫೋನ್ ಬಳಸುತ್ತಿರುವುದು ಕಂಡುಬಂದಿತ್ತು. ಈ ವೇಳೆ ಯುವ ಆಟಗಾರ ವೈಭವ್ ಸೂರ್ಯವಂಶಿ ಕೂಡ ಅವರ ಪಕ್ಕದಲ್ಲಿ ಕುಳಿತು ಫೋನ್ ನೋಡುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿತ್ತು. ಬಳಿಕ ಬಿಸಿಸಿಐ ಭಿಂದರ್ ಅವರಿಗೆ ನಾಮಮಾತ್ರ ದಂಡ ವಿಧಿಸಿದೆ. ಆದರೆ, ಆರ್‌ಆರ್ ಮೂಲಗಳು ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಅವರು ಫೋನ್ ಬಳಸುತ್ತಿದ್ದರು ಎಂದು ಹೇಳಿಕೊಂಡಿವೆ.
ಪಿಬಿಕೆಎಸ್ vs ಆರ್‌ಆರ್ ಪಂದ್ಯದ ಬಗ್ಗೆ ಹೇಳುವುದಾದರೆ, ರಾಯಲ್ಸ್ ತಂಡವು ಐಪಿಎಲ್ 2026ರಲ್ಲಿ ಕಿಂಗ್ಸ್ ತಂಡದ ಅಜೇಯ ಓಟಕ್ಕೆ ಬ್ರೇಕ್ ಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

