RCB ವಿರುದ್ಧ DC ಸೋಲು: CSK ಮುಖ್ಯ ಕೋಚ್ ಟೀಕಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೋಚ್; 'ಈಗ ಬಾಯಿ ಮುಚ್ಚಿಕೊಂಡಿರಿ' ಎಂದ ಮಾಜಿ ಆಟಗಾರ!
ಸ್ಟೀಫನ್ ಫ್ಲೆಮಿಂಗ್ ಅವರನ್ನೇ ಹೇಮಾಂಗ್ ಬದನಿ ಕೂಡ ಹಿಂಬಾಲಿಸುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಬದನಿ ಅವರಿಗೆ ತಾನು ಏನು ಹೇಳುತ್ತಿದ್ದೇನೆ ಎಂಬುದರ ಮೇಲೆ ಗಮನ ಇರಬೇಕು ಎಂದು ಶ್ರೀಕಾಂತ್ ಸಲಹೆ ನೀಡಿದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿರುವುದರಿಂದ, ಕೋಚ್ ಹೇಮಾಂಗ್ ಬದನಿಯನ್ನು ಇದೀಗ ಹಲವರು ಗುರಿಯಾಗಿಸಿಕೊಂಡಿದ್ದಾರೆ. ಈ ಹಿಂದೆ, ಫ್ರಾಂಚೈಸಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಪಾತ್ರವನ್ನು ಪ್ರಶ್ನಿಸಿದ್ದ ಬದನಿ, ಇದೀಗ ತಮ್ಮ ತಂಡದ ಪ್ರದರ್ಶನದಿಂದ ಭಾರಿ ಮುಖಭಂಗ ಎದುರಿಸುತ್ತಿದ್ದಾರೆ. ಈಗ ಫ್ರಾಂಚೈಸಿ ಏನು ಸಾಧಿಸಿದೆಯೋ ಅದು ಎಂಎಸ್ ಧೋನಿಯಿಂದಾಗಿ ಹೊರತು ಫ್ಲೆಮಿಂಗ್ ಯಾವುದೇ ಪ್ರಭಾವ ಬೀರಿಲ್ಲ ಎಂದಿದ್ದ ಬದನಿ, ಇದೀಗ ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸ್ಟೀಫನ್ ಫ್ಲೆಮಿಂಗ್ ಅವರನ್ನೇ ಹೇಮಾಂಗ್ ಬದನಿ ಕೂಡ ಹಿಂಬಾಲಿಸುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಬದನಿ ಅವರಿಗೆ ತಾನು ಏನು ಹೇಳುತ್ತಿದ್ದೇನೆ ಎಂಬುದರ ಮೇಲೆ ಗಮನ ಇರಬೇಕು ಎಂದು ಶ್ರೀಕಾಂತ್ ಸಲಹೆ ನೀಡಿದರು. ಸೋಮವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಡಿಸಿ ತಂಡವು 75 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊದಲ್ಲಿ ಮಾತನಾಡಿದ ಶ್ರೀಕಾಂತ್, 'ಹೇ ಹೇಮಾಂಗ್. ಇತರರ ಬಗ್ಗೆ ಮಾತನಾಡುವ ಮೊದಲು ನಿಮ್ಮ ಬಗ್ಗೆ ಕಾಳಜಿ ವಹಿಸಿ. 'ಜೀವನದಲ್ಲಿ, ಹೆಚ್ಚು ಮಾತನಾಡಬೇಡಿ' ಎಂದೇ ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಅವರು ತುಂಬಾ ಮಾತನಾಡುತ್ತಿದ್ದರು. ಈಗ, ಅವರು ಬಾಯಿ ಮುಚ್ಚಿಕೊಂಡು ನಡೆಯುತ್ತಿರುವ ವಿಷಯಗಳನ್ನು ನೋಡಬೇಕಾಗಿದೆ' ಎಂದರು.
'ಎಲ್ಲರೂ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಅವರನ್ನು ಟೀಕಿಸುತ್ತಿದ್ದಾರೆ. ಇತರರ ಬಗ್ಗೆ ಏಕೆ ಮಾತನಾಡಬೇಕು? ನೀವು ನಿಮ್ಮ ಕೆಲಸದ ಬಗ್ಗೆ ಎಚ್ಚರದಿಂದಿರಬೇಕಿತ್ತು. ಸ್ಟೀಫನ್ ಫ್ಲೆಮಿಂಗ್ ಎಂಎಸ್ ಧೋನಿಯಿಂದಾಗಿ ಗೆದ್ದರು ಎಂದು ಹೇಳಲು ನೀವು ಯಾರು? ನೀವು ಏನು ಮಾಡಿದ್ದೀರಿ? ಏನಾದರೂ ವಿಶೇಷ? ಏನೂ ಇಲ್ಲ' ಎಂದು ಕಿಡಿಕಾರಿದರು.
ಪೃಥ್ವಿ ಶಾ ಅವರಂತಹ ಅನುಭವಿ ಆಟಗಾರನನ್ನು ಕಡೆಗಣಿಸಿ ಆರ್‌ಸಿಬಿ ವಿರುದ್ಧ ಚೊಚ್ಚಲ ಆಟಗಾರ ಸಾಹಿಲ್ ಪರಾಖ್ ಅವರನ್ನು ಆಡಿಸುವ ಡಿಸಿ ಕೋಚ್ ನಿರ್ಧಾರವನ್ನು ಶ್ರೀಕಾಂತ್ ಪ್ರಶ್ನಿಸಿದ್ದರು.
'ಕೆಎಲ್ ರಾಹುಲ್‌ಗಿಂತ ಮೊದಲು ಸಾಹಿಲ್‌ಗೆ ಸ್ಟ್ರೈಕ್ ತೆಗೆದುಕೊಳ್ಳಲು ಏಕೆ ಅವಕಾಶ ನೀಡಬೇಕು?' ಎಂದು ಶ್ರೀಕಾಂತ್ ಪ್ರಶ್ನಿಸಿದರು.
ಸ್ಟೀಫನ್ ಫ್ಲೆಮಿಂಗ್ ಬಗ್ಗೆ ಹೇಮಾಂಗ್ ಬದನಿ ಹೇಳಿದ್ದೇನು?
ಶ್ರೀಕಾಂತ್ ಪ್ರಕಾರ, ಈ ಹಿಂದೆ ಬದನಿ ಸಿಎಸ್‌ಕೆ ತಂಡದ ಎಲ್ಲ ಯಶಸ್ಸಿಗೆ ಫ್ರಾಂಚೈಸಿಯ ಮಾಜಿ ನಾಯಕ ಎಂಎಸ್ ಧೋನಿ ಕಾರಣ ಎಂದು ಹೇಳಿದ್ದರು. ಫ್ಲೆಮಿಂಗ್ ಉತ್ತಮ ಕೋಚ್ ಕೂಡ ಅಲ್ಲ ಎಂದು ಹೇಳಿ ಅವರನ್ನು ಅಪಹಾಸ್ಯ ಮಾಡಿದ್ದರು.
'ಫ್ಲೆಮಿಂಗ್ ಅಷ್ಟು ದೊಡ್ಡ ತರಬೇತುದಾರರಾಗಿದ್ದರೆ, ಅವರು ಐಪಿಎಲ್ ಹೊರತುಪಡಿಸಿ ಬೇರೆಲ್ಲಿಯೂ ಏಕೆ ಗೆದ್ದಿಲ್ಲ? ಎಂದು ಬದನಿ ಈ ಹಿಂದೆ ಫ್ಲೆಮಿಂಗ್ ಅವರ SA20, ದಿ ಹಂಡ್ರೆಡ್ ಮತ್ತು ಬಿಗ್ ಬ್ಯಾಷ್ ಲೀಗ್‌ನ ಅನುಭವಗಳನ್ನು ತೋರಿಸುತ್ತಾ ಕೇಳಿದ್ದರು. 'ಧೋನಿಯಿಂದಾಗಿ ಸಿಎಸ್‌ಕೆ ಗೆಲ್ಲುತ್ತಿದೆ. ಧೋನಿ ಕಿಂಗ್‌ಪಿನ್... ಫ್ಲೆಮಿಂಗ್ ಉತ್ತಮ ತರಬೇತುದಾರ ಎಂದು ಯಾರಾದರೂ ಹೇಳಿದರೆ, ನಾನು ಅದನ್ನು ಒಪ್ಪುವುದಿಲ್ಲ' ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


