IPL 2026: ನಿನ್ನೆ ಎನ್ಗಿಡಿ, ಇಂದು Akeal Hosein; GT ವಿರುದ್ಧದ ಪಂದ್ಯದಲ್ಲಿ CSK ಸ್ಟಾರ್ ಗೆ ಗಂಭೀರ ಪೆಟ್ಟು!
ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಶುಭ್‌ಮನ್ ಗಿಲ್ ಭಾರಿಸಿದ ಚೆಂಡನ್ನು ಆಫ್-ಸೈಡ್‌ನಲ್ಲಿ ಭಾರಿಸಿದಾಗ ಅಕೇಲ್ ಹೊಸೇನ್ ಕ್ಯಾಚ್ ಪೂರ್ಣಗೊಳಿಸಲು ಬಲಕ್ಕೆ ಓಡಿದರು.

ಚೆನ್ನೈ: ಐಪಿಎಲ್ 2026 ಟೂರ್ನಿಯಲ್ಲಿ ಡೆಲ್ಲಿ ತಂಡದ ಲುಂಗಿ ಎನ್ಗಿಡಿ ಗಾಯದ ವಿಚಾರ ಹಸಿರಾಗಿರುವಂತೆಯೇ ಇಂದೂ ಕೂಡ ಮತ್ತೋರ್ವ ಆಟಗಾರ ಗಂಭೀರ ಪೆಟ್ಟು ಮಾಡಿಕೊಂಡಿದ್ದಾರೆ.
ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ 2026 ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಅಕೇಲ್ ಹೊಸೇನ್ (Akeal Hosein) ದೊಡ್ಡ ಗಾಯಕ್ಕೆ ತುತ್ತಾಗಿದ್ದಾರೆ.
ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಶುಭ್‌ಮನ್ ಗಿಲ್ ಭಾರಿಸಿದ ಚೆಂಡನ್ನು ಆಫ್-ಸೈಡ್‌ನಲ್ಲಿ ಭಾರಿಸಿದಾಗ ಅಕೇಲ್ ಹೊಸೇನ್ ಕ್ಯಾಚ್ ಪೂರ್ಣಗೊಳಿಸಲು ಬಲಕ್ಕೆ ಓಡಿದರು. ಈ ವೇಳೆ ಚೆಂಡನ್ನು ಕ್ಯಾಚ್ ಪಡೆಯಲು ಯತ್ನಿಸಿ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಹೊಸೇನ್ ಕೆನ್ನೆ ನೆಲಕ್ಕೆ ಬಡಿದಿದೆ. ಈ ವೇಳೆ ಅಕೇಲ್ ಹೊಸೇನ್ ನೋವಿನಿಂದ ಒದ್ದಾಡಿದರು.
ಕೂಡಲೇ ಮೈದಾನಕ್ಕೆ ತಂಡದ ಫಿಸಿಯೋಗಳು ದೌಡಾಯಿಸಿ ತಪಾಸಣೆ ಮಾಡಿದರು. ಬಳಿಕ ಹೊಸೆನ್ ಗೆ ಪ್ರಥಮ ಚಿಕಿತ್ಸೆ ನೀಡಿದ ಸ್ವಲ್ಪ ಸಮಯಕ್ಕೆ ಅವರು ಚೇತರಿಸಿಕೊಂಡರು. ಬಳಿಕ ಆಟ ಪುನಾರಂಭಗೊಂಡಿತು.
ಲುಂಗಿ ಎನ್ಗಿಡಿ ಪ್ರಕರಣ
ನಿನ್ನೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಲುಂಗಿ ಎನ್‌ಗಿಡಿ ಅವರ ತಲೆಗೆ ಬಲವಾದ ಗಾಯವಾಗಿತ್ತು. ಇದು ಅಭಿಮಾನಿಗಳಲ್ಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿತ್ತು. ಐಪಿಎಲ್ ನ ಎಲ್ಲ ಫ್ರಾಂಚೈಸಿಗಳು ಎನ್ಗಿಡಿ ಆರೋಗ್ಯ ಚೇತರಿಕೆಗೆ ಹಾರೈಸಿದ್ದರು.
ಇದೀಗ ಚತೇರಿಸಿಕೊಂಡಿರುವ ಎನ್ಗಿಡಿ ತಮ್ಮ ಸಾಮಾಜಿಕ ಖಾತೆಯಲ್ಲಿ 'ಸಂದೇಶಗಳಿಗೆ ಧನ್ಯವಾದಗಳು, ಎಲ್ಲವೂ ಚೆನ್ನಾಗಿದೆ" ಎಂದು ಅವರು ಬರೆದಿದ್ದಾರೆ. ಅಂತೆಯೇ ಭಯದ ನಂತರ ಅಭಿಮಾನಿಗಳು ನೀಡಿದ ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



