ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್‌ಗೆ ಹೀನಾಯ ಸೋಲು; LSG ನಾಯಕ ರಿಷಭ್ ಪಂತ್ ಹಳೇ ಹೇಳಿಕೆ ವೈರಲ್
ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಮಾತನಾಡಿದ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್, ಈ ಆವೃತ್ತಿಯಲ್ಲಿ ಆಡುತ್ತಿರುವ ಆಕ್ರಮಣಕಾರಿ ಕ್ರಿಕೆಟ್‌ಗಾಗಿ ಪಂಜಾಬ್ ಕಿಂಗ್ಸ್ ಅನ್ನು ಶ್ಲಾಘಿಸಿದರು.

ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ತನ್ನ ಅಜೇಯ ಓಟವನ್ನು ಮುಂದುವರಿಸಿದ್ದು, ಭಾನುವಾರ ಮುಲ್ಲನ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು 54 ರನ್‌ಗಳಿಂದ ಸೋಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಿಬಿಕೆಎಸ್ ಆರಂಭದಲ್ಲಿಯೇ ಪ್ರಭ್ಸಿಮ್ರನ್ ಸಿಂಗ್ ಅವರ ವಿಕೆಟ್ ಕಳೆದುಕೊಂಡಿತು. ನಂತರ ಪ್ರಿಯಾಂಶ್ ಆರ್ಯ (93) ಮತ್ತು ಕೂಪರ್ ಕೊನೊಲಿ (87) 182 ರನ್‌ಗಳ ಭರ್ಜರಿ ಜೊತೆಯಾಟವು, ಎಲ್‌ಎಸ್‌ಜಿ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಂಡಿತು. ಆತಿಥೇಯರು 20ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಬರೋಬ್ಬರಿ 254 ರನ್ ಕಲೆಹಾಕಿದರು. ಇದಕ್ಕೆ ಉತ್ತರವಾಗಿ, ಲಕ್ನೋ ಸೂಪರ್ ಜೈಂಟ್ಸ್ ಹೋರಾಟ ನೀಡಲು ಪ್ರಯತ್ನಿಸಿತಾದರೂ ಐದು ವಿಕೆಟ್ ಕಳೆದುಕೊಂಡು ಕೇವಲ 200 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ 54 ರನ್‌ಗಳಿಂದ ಸೋತಿತು.
ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಮಾತನಾಡಿದ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್, ಈ ಆವೃತ್ತಿಯಲ್ಲಿ ಆಡುತ್ತಿರುವ ಆಕ್ರಮಣಕಾರಿ ಕ್ರಿಕೆಟ್‌ಗಾಗಿ ಪಂಜಾಬ್ ಕಿಂಗ್ಸ್ ಅನ್ನು ಶ್ಲಾಘಿಸಿದರು.
'ಖಂಡಿತವಾಗಿಯೂ, ನಾವು ನಮ್ಮ ತಂಡವನ್ನು ನಂಬುತ್ತೇವೆ. ಆದರೆ ಅದೇ ಸಮಯದಲ್ಲಿ, ಎದುರಾಳಿಗಳು ಚೆನ್ನಾಗಿ ಆಡುತ್ತಿರುವಾಗ, ಪಂಜಾಬ್ ಕಿಂಗ್ಸ್ ತಂಡವು ಉತ್ತಮ, ಕಠಿಣ ಕ್ರಿಕೆಟ್ ಆಡಿದ್ದಕ್ಕಾಗಿ ನೀವು ಅವರಿಗೂ ಕ್ರೆಡಿಟ್ ನೀಡಬೇಕು' ಎಂದು ಪಂತ್ ಹೇಳಿದರು.
LSG ತಂಡವು ಭಾರಿ ಸೋಲನ್ನು ಅನುಭವಿಸುತ್ತಿದ್ದಂತೆ, ಪಂತ್ ಅವರ ಹಳೆಯ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡು, ವೈರಲ್ ಆಗಿದೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ LSG ಪಂತ್ ಅವರನ್ನು ₹27 ಕೋಟಿಗೆ ಖರೀದಿಸಿದ ನಂತರ ಸಂದರ್ಶನವೊಂದರಲ್ಲಿ, ಅವರು ಯಾವ ಒಂದು ತಂಡಕ್ಕೆ ಬಿಕರಿಯಾಗಲು ಬಯಸುವುದಿಲ್ಲ ಎಂದು ಕೇಳಲಾಯಿತು.
'ನಾನು ಹೋಗಲು ಇಷ್ಟಪಡದ ಒಂದೇ ಒಂದು ತಂಡವಿದೆ. ಅದು ಪಂಜಾಬ್. ಅವರ ಬಳಿ ಗರಿಷ್ಠ ಹಣವಿತ್ತು ಮತ್ತು ಬೇರೆ ಯಾವುದೇ ತಂಡ ಅವರನ್ನು ಮೀರಿಸುತ್ತಿರಲಿಲ್ಲವಾದ್ದರಿಂದ ನನಗೆ ಭಯವಾಗಿತ್ತು. ಅವರು ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿಕೊಂಡಾಗ, ಅವರು ನನ್ನ ಹಿಂದೆ ಹೋಗುವುದಿಲ್ಲ ಎಂದು ನನಗೆ ಸ್ವಲ್ಪ ಸಮಾಧಾನವಾಯಿತು' ಎಂದು ಪಂತ್ ಆ ಸಮಯದಲ್ಲಿ ಹೇಳಿದ್ದರು.
ಈಮಧ್ಯೆ, ಡ್ರೆಸ್ಸಿಂಗ್ ಕೋಣೆಯೊಳಗೆ ನಡೆದ ಹಗುರವಾದ ಸಿಕ್ಸ್ ಹೊಡೆಯುವ ಸ್ಪರ್ಧೆಯು ಪಂಜಾಬ್‌ನ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಪ್ರಮುಖ ಕಾರಣವಾಗಿದೆ ಎಂದು ಪಿಬಿಕೆಎಸ್ ನಾಯಕ ಶ್ರೇಯಸ್ ಅಯ್ಯರ್ ಬಹಿರಂಗಪಡಿಸಿದರು. ಐಪಿಎಲ್ 2026ರಲ್ಲಿ ತಮ್ಮ ಪ್ರಾಬಲ್ಯವನ್ನು ವಿಸ್ತರಿಸುವ ಮೂಲಕ ಟೇಬಲ್-ಟಾಪರ್ ಆಗಿರುವ ಪಂಜಾಬ್ ಈ ಆವೃತ್ತಿಯಲ್ಲಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



