ಕ್ರಿಕೆಟ್

IPL 2026: ಆಗ MS Dhoni, ಈಗ ಧ್ರುವ್ ಜುರೆಲ್..; ಅದ್ಭುತ ಸ್ಟಂಪಿಂಗ್ ಮೂಲಕ Green ಪೆವಿಲಿಯನ್ ಗೆ ಅಟ್ಟಿದ RR ವಿಕೆಟ್ ಕೀಪರ್! Video

ಧ್ರುವ್ ಜುರೆಲ್ ಮಿಂಚಿನ ವೇಗದಲ್ಲಿ ಜಿಗಿದು ಬಾಲ್‌ ಹಿಡಿದು ವಿಕೆಟ್‌ಗೆ ಎಸೆಯುತ್ತಲೇ ಬೇಲ್ಸ್ ಎಗರಿತ್ತು. ಈ ವೇಳೆ ರಾಜಸ್ತಾನ ತಂಡ ಅದಾಗಲೇ ಸಂಭ್ರಮ ಆರಂಭಿಸಿತ್ತು.

IPL 2026: ಆಗ MS Dhoni, ಈಗ ಧ್ರುವ್ ಜುರೆಲ್..; ಅದ್ಭುತ ಸ್ಟಂಪಿಂಗ್ ಮೂಲಕ Green ಪೆವಿಲಿಯನ್ ಗೆ ಅಟ್ಟಿದ RR ವಿಕೆಟ್ ಕೀಪರ್! Video
ಧ್ರುವ್ ಜುರೆಲ್ ಅದ್ಭುತ ಸ್ಟಂಪಿಂಗ್
Published On :

ಕೋಲ್ಕತಾ: ಈ ಹಿಂದೆ ನೋ ಲುಕ್ ಸ್ಟಂಪೌಟ್ ಮೂಲಕ ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಇದೀಗ ಅಂತಹುದೇ ಔಟ್ ಮೂಲಕ ಭಾರತದ ಉದಯೋನ್ಮುಖ ವಿಕೆಟ್ ಕೀಪರ್ ಧ್ರುವ್ ಜುರೆಲ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೋಲ್ಕತಾದ ಈಡೆನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಧ್ರುವ್ ಜುರೆಲ್ ಅದ್ಭುತ ಸ್ಟಂಪೌಟ್ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ಬ್ಯಾಟರ್ ಕ್ಯಾಮೆರಾನ್ ಗ್ರೀನ್ ರನ್ನು ಪೆವಿಲಿಯನ್ ಗೆ ಅಟ್ಟಿರುವ ದೃಶ್ಯ ವ್ಯಾಪಕ ವೈರಲ್ ಆಗುತ್ತಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವಿನ ಪಂದ್ಯದಲ್ಲಿ ಕೋಲ್ಕತಾ ಇನ್ನಿಂಗ್ಸ್ ವೇಳೆ 13 ಎಸೆತಗಳಲ್ಲಿ 27 ರನ್ ಗಳಿಸಿದ್ದ ಕ್ಯಾಮರೂನ್ ಗ್ರೀನ್ (Cameron Green) ಅವರನ್ನು ಧ್ರುವ್ ಜುರೆಲ್ (Dhruv Jurel) ಅದ್ಭುತ ಸ್ಟಂಪಿಂಗ್ ಮೂಲಕ ಔಟ್ ಮಾಡಿದರು.

KKR ನ ರನ್ ಚೇಸ್‌ನ ಐದನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಬೌಲಿಂಗ್‌ ನಲ್ಲಿ ಭಾರಿ ಹೊಡೆತಕ್ಕೆ ಮುಂದಾಗಿದ್ದ ಗ್ರೀನ್ ಮುನ್ನುಗ್ಗಿ ಭಾರಿಸಲು ಯತ್ನಿಸಿದರು. ಈ ವೇಳೆ ಗ್ರೀನ್ ರ ಬ್ಯಾಟ್ ಗೆ ವಂಚಿಸಿದ ಚೆಂಡು ನೇರವಾಗಿ ವಿಕೆಟ್ ಕೀಪರ್ ಜುರೆಲ್ ಕೈ ಸೇರಿತು. ಈ ವೇಳೆ ಒಂದು ಕ್ಷಣ ಕೂಡ ತಡಮಾಡದೇ ಜುರೆಲ್ ಚೆಂಡನ್ನು ವಿಕೆಟ್ ನತ್ತ ಎಸೆದರು.

ಧ್ರುವ್ ಜುರೆಲ್ ಮಿಂಚಿನ ವೇಗದಲ್ಲಿ ಜಿಗಿದು ಬಾಲ್‌ ಹಿಡಿದು ವಿಕೆಟ್‌ಗೆ ಎಸೆಯುತ್ತಲೇ ಬೇಲ್ಸ್ ಎಗರಿತ್ತು. ಈ ವೇಳೆ ರಾಜಸ್ತಾನ ತಂಡ ಅದಾಗಲೇ ಸಂಭ್ರಮ ಆರಂಭಿಸಿತ್ತು. ಬಳಿಕ ಥರ್ಡ್‌ ಅಂಪೈರ್ ನಿರ್ಣಯಕ್ಕಾಗಿ ಕ್ಯಾಮರಾನ್‌ ಸ್ವಲ್ಪ ಸಮಯ ಕಾದರು. ಆದರೆ ಅಷ್ಟರಲ್ಲಾಗಲೇ ಥರ್ಡ್‌ ಅಂಪೈರ್‌ ಔಟ್‌ ಎಂದು ಪ್ರಕಟಿಸಿದರು. ಈ ವೇಳೆ ಜುರೆಲ್ ಚಾಣಾಕ್ಷ್ಯತನ ನೋಡಿ ಕ್ಷಣ ಕಾಲ ಕ್ಯಾಮರೂನ್ ಕೂಡ ದಂಗಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.