ಕ್ರಿಕೆಟ್

IPL 2026: ಡೆಲ್ಲಿ ಕ್ಯಾಪಿಟಲ್ಸ್ ಗೆ 176 ರನ್‌ ಸಾಧಾರಣ ಗುರಿ ನೀಡಿದ RCB

ಇಂಡಿಯನ್ ಪ್ರಿಮಿಯರ್ ಲೀಗ್ (IPL 2026) ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 175 ರನ್ ಪೇರಿಸಿದೆ.

IPL 2026: ಡೆಲ್ಲಿ ಕ್ಯಾಪಿಟಲ್ಸ್ ಗೆ 176 ರನ್‌ ಸಾಧಾರಣ ಗುರಿ ನೀಡಿದ RCB
ಆರ್ ಸಿಬಿ
Published On :

ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್ (IPL 2026) ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 175 ರನ್ ಪೇರಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ RCB ಅತ್ಯುತ್ತಮ ಓಪನಿಂಗ್ ಪಡೆಯಿತು. 15 ಓವರ್ ಮುಕ್ತಾಯಕ್ಕೆ ತಂಡ 4 ವಿಕೆಟ್ ಕಳೆದುಕೊಂಡು 146 ರನ್ ಪೇರಿಸಿತ್ತು. ಆನಂತರ ಬ್ಯಾಟಿಂಗ್ ಮಂಕಾಯಿತು. ಅಂತಿಮವಾಗಿ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಪೇರಿಸಿದ್ದು ಡೆಲ್ಲಿಗೆ ಗೆಲ್ಲಲು 176 ರನ್ ಗುರಿ ನೀಡಿದೆ.

RCB ಪರ ಫಿಲ್ ಸಾಲ್ಟ್ ಅತಿ ಹೆಚ್ಚು ರನ್ ಗಳಿಸಿದರು. ಓಪನರ್ ಸಾಲ್ಟ್ 28 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 63 ರನ್ ಗಳಿಸಿದರು. ಟಿಮ್ ಡೇವಿಡ್ 17 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳೊಂದಿಗೆ 26 ರನ್ ಗಳಿಸಿದರು. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 13 ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಾಯದಿಂದ 19 ರನ್ ಗಳಿಸಿದರು.

ದೇವದತ್ ಪಡಿಕ್ಕಲ್ (13 ಎಸೆತಗಳಲ್ಲಿ 18), ಜಿತೇಶ್ ಶರ್ಮಾ (20 ಎಸೆತಗಳಲ್ಲಿ 14), ಮತ್ತು ನಾಯಕ ರಜತ್ ಪಾಟಿದಾರ್ (4 ಎಸೆತಗಳಲ್ಲಿ 8) ಕೂಡ ಹೆಚ್ಚಿನ ಪರಿಣಾಮ ಬೀರುವಲ್ಲಿ ವಿಫಲರಾದರು. ರೊಮಾರಿಯೊ ಶೆಫರ್ಡ್ ಕೇವಲ ಒಂದು ರನ್ ಗಳಿಸಿದರು. ಕೃನಾಲ್ ಪಾಂಡ್ಯ 10 ಎಸೆತಗಳಲ್ಲಿ 12 ರನ್ ಗಳಿಸಿ ರನೌಟ್ ಆದರು. ಭುವನೇಶ್ವರ್ ಕುಮಾರ್ 2 ಎಸೆತಗಳಲ್ಲಿ 3 ರನ್ ಗಳಿಸಿ ಅಜೇಯರಾಗುಳಿದರು. ದೆಹಲಿ ಪರ ಕುಲದೀಪ್ ಯಾದವ್, ನಾಯಕ ಅಕ್ಷರ್ ಪಟೇಲ್ ಮತ್ತು ಲುಂಗಿ ಎನ್‌ಗಿಡಿ ತಲಾ ಎರಡು ವಿಕೆಟ್ ಪಡೆದರೇ ಮುಖೇಶ್ ಕುಮಾರ್ ಒಂದು ವಿಕೆಟ್ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.