ಸೂರ್ಯಾಗೆ ಕೊಕ್?: ಭಾರತ T20 ತಂಡದ ನಾಯಕ ಪಟ್ಟಕ್ಕೆ ಶ್ರೇಯಸ್ ಅಯ್ಯರ್? ಸ್ಥಾನ ಪಡೆಯಲು ರಜತ್ ಪಟಿದಾರ್ ಪೈಪೋಟಿ!
ಶ್ರೇಯಸ್ ಅಯ್ಯರ್ ಅವರನ್ನು ಟಿ20 ಅಂತರರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳಬೇಕೆಂಬ ಬೇಡಿಕೆ ದಿನೇದಿನೇ ಹೆಚ್ಚಾಗುತ್ತಿದೆ. ಅದಕ್ಕೂ ಕಾರಣವಿದೆ. ಶ್ರೇಯಸ್ ಕೇವಲ ಅದ್ಭುತ ಪ್ರದರ್ಶನದಿಂದ ಮಾತ್ರವಲ್ಲ, ಮೈದಾನದ ಒಳಗೂ ಹೊರಗೂ ತೋರಿಸಿರುವ ನಾಯಕತ್ವ ಗುಣಗಳು...

ಬೆಂಗಳೂರು: ಶ್ರೇಯಸ್ ಅಯ್ಯರ್ ಅವರನ್ನು ಟಿ20 ಅಂತರರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳಬೇಕೆಂಬ ಬೇಡಿಕೆ ದಿನೇದಿನೇ ಹೆಚ್ಚಾಗುತ್ತಿದೆ. ಅದಕ್ಕೂ ಕಾರಣವಿದೆ. ಶ್ರೇಯಸ್ ಕೇವಲ ಅದ್ಭುತ ಪ್ರದರ್ಶನದಿಂದ ಮಾತ್ರವಲ್ಲ, ಮೈದಾನದ ಒಳಗೂ ಹೊರಗೂ ತೋರಿಸಿರುವ ನಾಯಕತ್ವ ಗುಣಗಳು ಹಾಗೂ ಅನೇಕ ಅನ್‌ಕ್ಯಾಪ್ಡ್ ಭಾರತೀಯರನ್ನು ಒಳಗೊಂಡ ಯುವ ತಂಡವನ್ನು ಸಮರ್ಥವಾಗಿ ಮುನ್ನಡೆಸಿರುವ ರೀತಿಗೆ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಯಾಗಿದೆ. ಹೀಗಾಗಿ ಟಿ20 ಸ್ವರೂಪದಲ್ಲಿ ಭಾರತದ ಮುಂದಿನ ನಾಯಕನ ಸ್ಥಾನಕ್ಕೆ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿ ಪರಿಗಣಿಸಬಹುದಾಗಿದೆ.
ಮುಂಬೈ ಮೂಲದ ಶ್ರೇಯಸ್ ಈಗ ಮೊದಲ ಆಯ್ಕೆಯ ಸ್ಥಾನದಲ್ಲಿದ್ದು, ಜಿಂಬಾಬ್ವೆ, ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಮುಂದಿನ ಟಿ20 ಸರಣಿಗಳ ತಂಡದಲ್ಲಿ ಅವರ ಹೆಸರು ಕಾಣಿಸಿಕೊಂಡರೂ ಅಚ್ಚರಿಯೇನಲ್ಲ. ಕಳೆದ ಒಂದು ವರ್ಷದಲ್ಲಿ ಎಲ್ಲಾ ಸ್ವರೂಪಗಳನ್ನು ಸೇರಿಸಿ ಕೇವಲ ಆರು ಪಂದ್ಯಗಳಲ್ಲಿ ಮಾತ್ರ ಆಡಿದ್ದರೂ, ಬಿಸಿಸಿಐಯ ಇತ್ತೀಚಿನ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಅವರನ್ನು ಗ್ರೇಡ್ ಬಿ ವಿಭಾಗದಲ್ಲಿ ಸೇರಿಸಿಕೊಂಡಿತ್ತು. ಸದ್ಯ ಬಿಸಿಸಿಐ ಅವರನ್ನು ಎಷ್ಟು ಮಹತ್ವದಿಂದ ನೋಡುತ್ತಿದೆ ಎಂಬುದನ್ನು ತೋರಿಸುತ್ತದೆ.
ಇನ್ನು ಆಡುವ ಹನ್ನೊಂದರ ಬಳಗದಲ್ಲಿ ಸ್ಪರ್ಧಿಸುತ್ತಿರುವವರ ಸಾಲಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕ ರಜತ್ ಪಾಟೀದಾರ ಕೂಡ ಇದ್ದಾರೆ. ಶ್ರೇಯಸ್ ಅವರಂತೆಯೇ, ಪಾಟಿದಾರ್ ಸಹ ಮಧ್ಯಕ್ರಮದ ಆಕ್ರಮಣಕಾರಿ ಬ್ಯಾಟ್ಸ್‌ಮನ್. ಮೊದಲ ಚೆಂಡಿನಿಂದಲೇ ದಾಳಿ ಆರಂಭಿಸುವ ಸಾಮರ್ಥ್ಯ ಹೊಂದಿದ್ದಾರೆ. ಶ್ರೇಯಸ್ ಅವರಂತೆಯೇ ರಜತ್ ಸಹ ಒಂದು ಐಪಿಎಲ್ ತಂಡದ ನಾಯಕ. ಇತ್ತೀಚಿನ ಅಂಕಪಟ್ಟಿಯಲ್ಲಿ ಅವರ ತಂಡಗಳು ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದು, ಈ ಸೀಸನ್‌ನ ನಂತರದ ಹಂತದಲ್ಲಿ ನಡೆಯುವ ಮೊದಲ ಕ್ವಾಲಿಫೈಯರ್‌ನಲ್ಲಿ ಪರಸ್ಪರ ಎದುರಾಗಬಹುದಾದ ಸಾಧ್ಯತೆ ಹೆಚ್ಚು. ಇದು ಕೇವಲ ಇತ್ತೀಚಿನ ಫಾರ್ಮ್‌ನ ಆಧಾರದ ಮೇಲೆ ಮೂಡಿದ ಅಭಿಪ್ರಾಯವಲ್ಲ. 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲ ಐಪಿಎಲ್ ಕಿರೀಟವನ್ನು ತಂದುಕೊಟ್ಟಿರುವ ಸಾಧನೆ. ಆಯ್ಕೆದಾರರ ಗಮನ ಸೆಳೆಯಲು ಇದು ಮಹತ್ವದ ಅಂಶವಾಗಿ ಕಾಣಬಹುದು.

ಇನ್ನು ಟಿ20 ನಾಯಕ ಸೂರ್ಯಕುಮಾರ್ ಯಾದವ್ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇದು ಅವರ ಟೀಂ ಇಂಡಿಯಾದ ನಾಯಕನ ಸ್ಥಾನಕ್ಕೆ ಕುತ್ತು ತರಬಹುದು. ಆದರೆ ವಿಶ್ವಕಪ್ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಒಲಿಂಪಿಕ್ಸ್‌ನಲ್ಲಿ ತಂಡವನ್ನು ಮುನ್ನಡೆಸುವ ಬಯಕೆಯನ್ನೂ ವ್ಯಕ್ತಪಡಿಸಿದ್ದರು. ಆದರೆ, ಆ ನಿರ್ಧಾರಗಳು ಸೂರ್ಯನ ಕೈಯಲ್ಲಿಲ್ಲ. ಮುಂದಿನ ವಿಶ್ವಕಪ್ ವೇಳೆಗೆ ನಾಯಕನಿಗೆ 38 ವರ್ಷಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಕುರಿತು ಬಿಸಿಸಿಐ ಆಯ್ಕೆ ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



