ಇನ್‌ಸ್ಟಾಗ್ರಾಂನಲ್ಲಿ ಜರ್ಮನ್ ಮಾಡೆಲ್ ಫೋಟೊ 'ಲೈಕ್' ಮಾಡಿದ ವಿರಾಟ್ ಕೊಹ್ಲಿ?; 'ಅಲ್ಗಾರಿದಮ್' ಮೀಮ್ಸ್ ಹಾವಳಿ!
'ಲೈಕ್' ಕಂಡುಬಂದ ನಂತರ, ಈ ಸ್ಕ್ರೀನ್‌ಶಾಟ್‌ಗಳು ಕೆಲವೇ ಸೆಕೆಂಡುಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಡಲು ಪ್ರಾರಂಭಿಸಿದವು.
ಭಾರತೀಯ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ಅವರನ್ನು ಮತ್ತೊಮ್ಮೆ 'ಲೈಕ್' ವಿವಾದ ಹಿಂಬಾಲಿಸುತ್ತಿದೆ. 2025ರಲ್ಲಿ, ಕೊಹ್ಲಿ ಭಾರತೀಯ ಮಾಡೆಲ್/ಇನ್‌ಫ್ಲೂಯನ್ಸರ್ ಅವನೀತ್ ಕೌರ್ ಅವರ ಫೋಟೊವನ್ನು ತಪ್ಪಾಗಿ ಲೈಕ್ ಮಾಡಿದ್ದರು. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಇದೀಗ ಜರ್ಮನ್ ಮಾಡೆಲ್ ಲಿಜ್‌ಲಾಜ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೊಹ್ಲಿ ಅವರ ಪ್ರೊಫೈಲ್‌ನಿಂದ ಲೈಕ್ ಮಾಡಲಾಗಿದೆ ಎಂದು ಹೇಳಲಾದ ನಂತರ, ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.
'ಲೈಕ್' ಕಂಡುಬಂದ ನಂತರ, ಈ ಸ್ಕ್ರೀನ್‌ಶಾಟ್‌ಗಳು ಕೆಲವೇ ಸೆಕೆಂಡುಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಡಲು ಪ್ರಾರಂಭಿಸಿದವು. ಈ ಪರಿಸ್ಥಿತಿ ಮತ್ತು ಈ ವಿಷಯದ ಸುತ್ತಲಿನ ಸಂಚಲನವನ್ನು ಇಂಟರ್ನೆಟ್‌ನಲ್ಲಿ ಹಲವರು ಅಪಹಾಸ್ಯ ಮಾಡುತ್ತಿದ್ದಾರೆ.
'ಚೈನ್ ಸೆ ಲೈಕ್ ಭಿ ನಿ ಕರ್ನೇ ದೇತಾ ಯೇ ಸಮಜ್' ಎಂದು ಒಬ್ಬರು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. 'ರಿಲ್ಯಾಕ್ಸ್ ಗಯ್ಸ್, ಇದು ಅಲ್ಗಾರಿದಮ್' ಎಂದು ಮತ್ತೊಬ್ಬರು ಬರೆದಿದ್ದಾರೆ.
ಅವನೀತ್ ಕೌರ್ ಅವರ ಫೋಟೊಗೆ ಲೈಕ್ ಮಾಡಿದ ಸಂದರ್ಭದಲ್ಲಿ ಕೊಹ್ಲಿ, 'ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಅಲ್ಗಾರಿದಮ್ ತಪ್ಪಾಗಿ ಲೈಕ್ ಮಾಡಿರಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಯಾವುದೇ ಅನಗತ್ಯ ವದಂತಿಗಳನ್ನು ಹಬ್ಬಿಸಬಾರುದು ಎಂದು ನಾನು ವಿನಂತಿಸುತ್ತೇನೆ. ನಿಮ್ಮ ತಿಳುವಳಿಕೆಗೆ ಧನ್ಯವಾದಗಳು' ಎಂದು ಹೇಳಿದ್ದರು.
ಇದೀಗ ಕೊಹ್ಲಿ ಮತ್ತೊಂದು ಅಂತಹದ್ದೇ ಹೇಳಿಕೆಯನ್ನು ನೀಡಬೇಕು, ಇದು ಅವರು ಉದ್ದೇಶಪೂರ್ವಕವಾಗಿ ಮಾಡಿದ ಕೆಲಸವಲ್ಲ ಮತ್ತು ಇದು ಮತ್ತೊಂದು 'ಅಲ್ಗಾರಿದಮ್ ತಪ್ಪು' ಎಂದು ಹೇಳಬೇಕೆಂದು ಕೆಲವು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಕೊಹ್ಲಿ ಈ ಆವೃತ್ತಿಯಲ್ಲಿ ಆರ್‌ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ, ಆರಂಭಿಕ ಬ್ಯಾಟ್ಸ್‌ಮನ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದರು. ಅರ್ಧಶತಕಕ್ಕೆ ಕೇವಲ 1 ರನ್ ಬಾಕಿ ಇರುವಾಗ ಔಟಾದರು. ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಸುಲಭ ಗೆಲುವು ಸಾಧಿಸಲು ಅವರ ಕೊಡುಗೆ ಪ್ರಮುಖವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


