ಅವನೀತ್ ಕೌರ್ ಫೋಟೊಗೆ ಲೈಕ್; ವಿರಾಟ್ ಕೊಹ್ಲಿಯನ್ನು ನಿರ್ಲಕ್ಷ್ಯಿಸಿದ್ರಾ ಅನುಷ್ಕಾ ಶರ್ಮಾ? ವಿಡಿಯೋ ವೈರಲ್
ಮಂಗಳವಾರ ಬೆಂಗಳೂರಿನಲ್ಲಿ ನಡೆದ ಭೋಜನ ಕೂಟದಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದರು. ಈ ಸಂಬಂಧ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ನವದೆಹಲಿ: ನಟಿ ಅವನೀತ್ ಕೌರ್ ಫೋಟೊಗೆ ಆಕಸ್ಮಿಕವಾಗಿ ಲೈಕ್ ಮಾಡಿದ ನಂತರ ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದರು. ಅದಾದ ಬಳಿಕ ಇದೇ ಮೊದಲ ಬಾರಿಗೆ ವಿರಾಟ್ ಮತ್ತು ಅನುಷ್ಕಾ ಶರ್ಮಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅನುಷ್ಕಾ ಕೊಹ್ಲಿಯನ್ನು ನಿರ್ಲಕ್ಷ್ಯಿಸಿದರಾ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಮಂಗಳವಾರ ಬೆಂಗಳೂರಿನಲ್ಲಿ ನಡೆದ ಭೋಜನ ಕೂಟದಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದರು. ಈ ಸಂಬಂಧ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಎಲ್ಲ ದಂಪತಿಗೆ ಮಾದರಿ ಎನ್ನುವಂತೆಯೇ ಕಾಣಿಸಿಕೊಳ್ಳುತ್ತಿದ್ದರು. ವಿರಾಟ್ ಕೊಹ್ಲಿಯಂತು ಅನುಷ್ಕಾರನ್ನು ಕಾಳಜಿ ಮಾಡುವ ರೀತಿಗೆ ಬಹುತೇಕರು ಫಿದಾ ಆಗಿದ್ದರು. ಆದರೆ, ಇದೀಗ ವಿಡಿಯೋದಲ್ಲಿ ದಂಪತಿ ಬೆಂಗಳೂರಿನ ರೆಸ್ಟೋರೆಂಟ್‌ಗೆ ಆಗಮಿಸುತ್ತಿರುವುದು ಸೆರೆಯಾಗಿದೆ. ಕಾರ್ ಬಾಗಿಲು ತೆರೆದ ಬಳಿಕ ವಿರಾಟ್ ಕೈ ಚಾಚುತ್ತಾರೆ. ಆಗ ಅನುಷ್ಕಾ ಕೈ ಹಿಡಿದು ಕೆಳಗಿಳಿದು, ವಿರಾಟ್ ಕೊಹ್ಲಿಯನ್ನು ಲೆಕ್ಕಿಸದೆಯೇ ತರಾತುರಿಯಲ್ಲಿ ರೆಸ್ಟೋರೆಂಟ್ ಒಳಗೆ ಹೋಗಿರುವುದು ಕಂಡುಬಂದಿದೆ.
ಈ ಕ್ಲಿಪ್ ಇದೀಗ ವೈರಲ್ ಆಗಿದ್ದು, ಇಂಟರ್ನೆಟ್ ಬಳಕೆದಾರರು ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ. 'ಅನುಷ್ಕಾ ವಿರಾಟ್ ಅವರ ಕೈ ಹಿಡಿದಿಲ್ಲ ಎಂದು ಅಲ್ಗಾರಿದಮ್ ತಪ್ಪಾಗಿ ತೋರಿಸಿದೆ. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು 'ಇನ್ನು ಮುಂದೆ ಕೈ ಹಿಡಿಯುವುದಿಲ್ಲ ಅಥವಾ ನಗು ಇರುವುದಿಲ್ಲ?' ಎಂದು ಕಮೆಂಟ್ ಮಾಡಿದ್ದಾರೆ. ಇಂತಹ ವಿಚಾರಗಳು ಅವರ ಸಂಬಂಧದ ಬಗ್ಗೆ ವದಂತಿಗಳಿಗೆ ಕಾರಣವಾಗಬಹುದು ಎಂದು ಕೆಲವರು ಊಹಿಸಿದ್ದಾರೆ.
ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ಬಾಲಿವುಡ್ ನಟಿ ಅವನೀತ್ ಕೌರ್ ಅವರ ಫೋಟೊಗೆ ವಿರಾಟ್ ಕೊಹ್ಲಿ ಆಕಸ್ಮಿಕವಾಗಿ ಲೈಕ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಕೊಹ್ಲಿ ಲೈಕ್ ಮಾಡಿದ ಕೇವಲ 48 ಗಂಟೆಗಳಲ್ಲಿ ಅವನೀತ್ ಕೌರ್ ಅವರ ಅನುಯಾಯಿಗಳ ಸಂಖ್ಯೆ ಸುಮಾರು 2 ಮಿಲಿಯನ್ ಹೆಚ್ಚಳವಾಗಿತ್ತು.
ಅದಾದ ಬಳಿಕ ಲೈಕ್ ತೆಗೆದು ಸ್ಪಷ್ಟನೆ ಕೊಟ್ಟಿದ್ದ ವಿರಾಟ್ ಕೊಹ್ಲಿ, 'ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಅಲ್ಗಾರಿದಮ್ ತಪ್ಪಾಗಿ ಲೈಕ್ ಮಾಡಿರಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಅನಗತ್ಯ ಊಹೆಗಳನ್ನು ಮಾಡಬಾರದೆಂದು ನಾನು ವಿನಂತಿಸುತ್ತೇನೆ. ನಿಮ್ಮ ತಿಳಿವಳಿಕೆಗೆ ಧನ್ಯವಾದಗಳು' ಎಂದಿದ್ದರು.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2017ರ ಡಿಸೆಂಬರ್‌ನಲ್ಲಿ ವಿವಾಹವಾದರು. ಅವರಿಗೆ ವಮಿಕಾ ಮತ್ತು ಅಕಾಯ್ ಎಂಬ ಇಬ್ಬರು ಮಕ್ಕಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



