ಸಿನಿಮಾ ಸುದ್ದಿ

ವಿರಾಟ್ ಕೊಹ್ಲಿಯ ಒಂದೇ‌ ಲೈಕ್‌ನಿಂದ ನಟಿ ಅವನೀತ್ ಕೌರ್‌ಗೆ ಕೋಟಿ ಕೋಟಿ ಲಾಭ!

ವಿರಾಟ್ ಕೊಹ್ಲಿ ಲೈಕ್ ಮಾಡಿದ್ದನ್ನು ತೆಗೆದಿದ್ದರೂ, ಅದರ ಸ್ಕ್ರೀನ್‌ಶಾಟ್ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮೀಮ್ಸ್‌ಗಳು ಹರಿದಾಡುತ್ತಿದ್ದು, ಕೆಲವರು ಅನುಷ್ಕಾ ಶರ್ಮಾ ಅವರನ್ನು ಟ್ಯಾಗ್ ಮಾಡಿದ್ದಾರೆ.

ವಿರಾಟ್ ಕೊಹ್ಲಿಯ ಒಂದೇ‌ ಲೈಕ್‌ನಿಂದ ನಟಿ ಅವನೀತ್ ಕೌರ್‌ಗೆ ಕೋಟಿ ಕೋಟಿ ಲಾಭ!
ವಿರಾಟ್ ಕೊಹ್ಲಿ, ಅವನೀತ್ ಕೌರ್‌
Published On :

ಇತ್ತೀಚೆಗೆ ಅವನೀತ್ ಕೌರ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ವಿರಾಟ್ ಕೊಹ್ಲಿ ಆಕಸ್ಮಿಕವಾಗಿ ಲೈಕ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ವಿರಾಟ್ ಕೊಹ್ಲಿ ಲೈಕ್ ಮಾಡಿದ ಕೇವಲ 48 ಗಂಟೆಗಳಲ್ಲಿ ಅವನೀತ್ ಕೌರ್ ಅವರ ಅನುಯಾಯಿಗಳ ಸಂಖ್ಯೆ ಸುಮಾರು 2 ಮಿಲಿಯನ್ ಹೆಚ್ಚಳವಾಗಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ವಿರಾಟ್ ಕೊಹ್ಲಿ, ಫೋಟೊವನ್ನು ಆಕಸ್ಮಿಕವಾಗಿ ಲೈಕ್ ಮಾಡಿದ್ದು, ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಲೈಕ್ ಮಾಡಿದ್ದಾರೆ ಎನ್ನುವ ಸುದ್ದಿಯ ಬಳಿಕ ಈ ಫೋಟೊ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಲೈಕ್ ಮಾಡಿದ್ದನ್ನು ತೆಗೆದಿದ್ದರೂ, ಅದರ ಸ್ಕ್ರೀನ್‌ಶಾಟ್ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮೀಮ್ಸ್‌ಗಳು ಹರಿದಾಡುತ್ತಿದ್ದು, ಕೆಲವರು ಅನುಷ್ಕಾ ಶರ್ಮಾ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ಘಟನೆಯಿಂದಾಗಿ ಅವನೀತ್ ಅವರ ಪೋಸ್ಟ್ ಮೌಲ್ಯವು ಶೇ 30 ರಷ್ಟು ಏರಿಕೆಯಾಗಿದ್ದು, ಹೊಸ ಬ್ರಾಂಡ್ ಅನುಮೋದನೆಗಳೊಂದಿಗೆ ಅವರ ನಿವ್ವಳ ಮೌಲ್ಯವು ₹ 41 ಕೋಟಿಯನ್ನು ದಾಟಿದೆ.

ವಿರಾಟ್ ಕೊಹ್ಲಿ ಅವರ ಇನ್‌ಸ್ಟಾಗ್ರಾಂ ಖಾತೆಯು ಅವನೀತ್ ಕೌರ್ ಅವರ ಬೋಲ್ಡ್ ಫೋಟೊವನ್ನು ಲೈಕ್ ಮಾಡಿದಾಗ, ಅದು ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ.

#ViratLikedAvneet ಎಂಬ ಟ್ರೆಂಡಿಂಗ್ ಟ್ಯಾಗ್‌ನಿಂದಾಗಿ ಅವರ ಇನ್‌ಸ್ಟಾಗ್ರಾಂ ಫಾಲೋವರ್ಸ್ 30 ಮಿಲಿಯನ್‌ನಿಂದ 31.8 ಮಿಲಿಯನ್‌ಗೆ ಏರಿಕೆಯಾಗಿದೆ. ಡಿಜಿಟಲ್ ಸಂಸ್ಥೆ ಬಜ್‌ಕ್ರಾಫ್ಟ್ ಪ್ರಕಾರ, ಅವನೀತ್ ಅವರ ಪ್ರಾಯೋಜಿತ ಪೋಸ್ಟ್ ದರವು ರಾತ್ರೋರಾತ್ರಿ ₹2 ಲಕ್ಷದಿಂದ ₹2.6 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಬಹಿರಂಗಪಡಿಸಿದೆ.

'ವಿರಾಟ್ ಕೊಹ್ಲಿ ಅವನೀತ್ ಕೌರ್ ಇನ್‌ಸ್ಟಾಗ್ರಾಂ ಲೈಕ್' ಮತ್ತು 'ಅವನೀತ್ ಕೌರ್ ನಿವ್ವಳ ಮೌಲ್ಯ 2025'ನಂತಹ ಹುಡುಕಾಟಗಳು ಗೂಗಲ್‌ನಲ್ಲಿ ಟ್ರೆಂಡ್ ಆಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.