ಐಪಿಎಲ್ನಲ್ಲಿ ಮೊದಲ ಗೋಲ್ಡನ್ ಡಕ್: 2026ರಲ್ಲಿ 7 ಬಾರಿ ಶೂನ್ಯಕ್ಕೆ ನಿರ್ಗಮಿಸಿ ದಾಖಲೆ ಬರೆದ ಅಭಿಷೇಕ್ ಶರ್ಮಾ!
ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ 16 ಬಾರಿ ಡಕ್ ಔಟ್ ಆಗಿದ್ದಾರೆ. ಮೊದಲ ಎಸೆತದಲ್ಲೇ ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸುವ ಅವರ ಆಕ್ರಮಣಕಾರಿ ವಿಧಾನವನ್ನು ಹಿಂದೆ ವ್ಯಾಪಕವಾಗಿ ಟೀಕಿಸಲಾಗಿದೆ.

ಝೀರೋ ಮತ್ತು ಅಭಿಷೇಕ್ ಶರ್ಮಾಗೂ ಅವಿನಾಭಾವ ನಂಟು ಇರುವಂತೆ ಕಾಣಿಸುತ್ತಿದೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ 2026ರಲ್ಲಿ ಸತತ ಮೂರು ಬಾರಿ ಡಕೌಟ್ ಆದ ನಂತರ, ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2026) ನಲ್ಲಿ ಅಭಿಷೇಕ್ ಶರ್ಮಾ ಮತ್ತೊಂದು ವಿಶಿಷ್ಟ ಸಾಧನೆ ಮಾಡಿದರು. ಸೋಮವಾರ ರಾಜಸ್ಥಾನ ರಾಯಲ್ಸ್ (RR) ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಗೋಲ್ಡನ್ ಡಕ್ ಅನ್ನು ದಾಖಲಿಸಿದರು. ಇದು ಈ ವರ್ಷ ಅವರ 7ನೇ ಡಕೌಟ್ ಆಗಿದೆ.
ಬೇಡದ ದಾಖಲೆ ಬರೆದ ಅಭಿಷೇಕ್ ಶರ್ಮಾ
ಜೋಫ್ರಾ ಆರ್ಚರ್ ತಮ್ಮ ಮೊದಲ ಎಸೆತದಲ್ಲೇ ಅಭಿಷೇಕ್ ಅವರ ವಿಕೆಟ್ ಕಬಳಿಸಿದರು. SRH ಮತ್ತು RR ನಡುವಿನ ಪಂದ್ಯದ ಮೊದಲ ಎಸೆತದಲ್ಲೇ ದೊಡ್ಡ ಹಿಟ್ ಹೊಡೆಯಲು ಹೋದಾಗ ಬೌಂಡರಿ ಲೈನ್ ಬಳಿ ರವಿ ಬಿಷ್ಣೋಯ್ ಕ್ಯಾಚ್ ಹಿಡಿದು ಅಭಿಷೇಕ್ ಅವರನ್ನು ಡಗೌಟ್ ಕಡೆಗೆ ಕಳುಸಿಹಿದರು. ಇದು ಐಪಿಎಲ್ನಲ್ಲಿ ಅವರ ಮೊದಲ ಗೋಲ್ಡನ್ ಡಕ್ ಆಗಿದೆ. ಇದಕ್ಕೂ ಮೊದಲು, ಅವರು ಆರು ಡಕೌಟ್ಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದರು. ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡು, T20 ವಿಶ್ವಕಪ್ನಲ್ಲಿ ಮೂರು, LSG ವಿರುದ್ಧ ಒಂದು ಮತ್ತು ಈಗ RR ವಿರುದ್ಧ ಶೂನ್ಯಕ್ಕೆ ನಿರ್ಗಮಿಸಿದ್ದಾರೆ.
ಒಟ್ಟಾರೆಯಾಗಿ, ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ 16 ಬಾರಿ ಡಕ್ ಔಟ್ ಆಗಿದ್ದಾರೆ. ಮೊದಲ ಎಸೆತದಲ್ಲೇ ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸುವ ಅವರ ಆಕ್ರಮಣಕಾರಿ ವಿಧಾನವನ್ನು ಹಿಂದೆ ವ್ಯಾಪಕವಾಗಿ ಟೀಕಿಸಲಾಗಿದೆ. ಈ ವರ್ಷ ಇಲ್ಲಿಯವರೆಗೆ ಅವರು 4 ಗೋಲ್ಡನ್ ಡಕ್ಗಳಿಗೆ ಔಟಾಗಿದ್ದಾರೆ.
ಟಿ20ಗಳಲ್ಲಿ ಈ ವರ್ಷದಲ್ಲಿ ಅತಿ ಹೆಚ್ಚು ಡಕ್ಗಳು
0 v ನ್ಯೂಜಿಲೆಂಡ್
0 v ನ್ಯೂಜಿಲೆಂಡ್
0 v ಯು.ಎಸ್.ಎ.
0 v ಪಾಕಿಸ್ತಾನ
0 v ನೆದರ್ಲ್ಯಾಂಡ್ಸ್
0 v ಲಕ್ನೋ ಸೂಪರ್ ಜೈಂಟ್ಸ್
0 v ರಾಜಸ್ಥಾನ್ ರಾಯಲ್ಸ್
ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ಡಕೌಟ್ ಆಗುವ ಮೂಲಕ ಅಭಿಷೇಕ್ ಶರ್ಮಾ ಮತ್ತೊಂದು ಅನಗತ್ಯ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. 2026ರಲ್ಲಿ 7 ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ಅವರು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನಂತರ 2018 ರಲ್ಲಿ ರೋಹಿತ್ ಶರ್ಮಾ 6 ಮತ್ತು 2024 ರಲ್ಲಿ ಸಂಜು ಸ್ಯಾಮ್ಸನ್ 6 ಬಾರಿ ಡಕೌಟ್ ಆಗಿದ್ದಾರೆ.
ಚೊಚ್ಚಲ ಪಂದ್ಯದಿಂದಲೇ ಆಕ್ರಮಣಕಾರಿ ಬ್ಯಾಟ್ಸ್ಮನ್ ಎಂದು ಹೆಸರುವಾಸಿಯಾದ ಅಭಿಷೇಕ್, 82 ಐಪಿಎಲ್ ಪಂದ್ಯಗಳಿಂದ 1,945 ರನ್ ಗಳಿಸಿದ್ದು, 165.67 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 2026ರ ಟಿ20 ವಿಶ್ವಕಪ್ಗೂ ಮೊದಲು ಉತ್ತಮ ದಾಖಲೆ ಹೊಂದಿದ್ದರೂ, ಪಂದ್ಯಾವಳಿಯಲ್ಲಿ ಅವರು ಸಂಪೂರ್ಣ ನಿರಾಶೆಗೊಂಡರು. ಸತತ ಮೂರು ಬಾರಿ ಶೂನ್ಯಕ್ಕೆ ಔಟಾದ ನಂತರ, ಅಭಿಷೇಕ್ ಅವರು ಸೂಪರ್ 8 ಟೈನಲ್ಲಿ ಜಿಂಬಾಬ್ವೆ ವಿರುದ್ಧ 55 ರನ್ ಗಳಿಸಿದರು. ಅವರನ್ನು ಫೈನಲ್ ಪಂದ್ಯಕ್ಕೆ ಕೈಬಿಡುವ ಬಗ್ಗೆ ಕೂಗುಗಳು ಕೇಳಿಬಂದಿದ್ದವು. ಆದರೆ ತಂಡದ ಆಡಳಿತ ಮಂಡಳಿ ಅವರಿಗೆ ಬೆಂಬಲ ನೀಡಲು ನಿರ್ಧರಿಸಿತು ಮತ್ತು ಅದು ಫಲ ನೀಡಿತು. ಫೈನಲ್ನಲ್ಲಿ 52 ರನ್ಗಳ ಪ್ರದರ್ಶನ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



