ಹೈದರಾಬಾದ್: ಫಾರಿನ್ ಬ್ಯೂಟಿ ಜೊತೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಯಶಸ್ವಿ ಜೈಸ್ವಾಲ್! ಡೇಟಿಂಗ್ ಮಾಡ್ತಿದ್ದಾರಾ? Video
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಹಾಗೂ ಪಾಪರಾಜಿಗಳು ರಾಜಸ್ಥಾನ ರಾಯಲ್ಸ್ ತಂಡದೊಂದಿಗೆ ಮ್ಯಾಡಿ ಹ್ಯಾಮಿಲ್ಟನ್ ಅವರನ್ನು ನೋಡಿದ್ದಾರೆ.

ಹೈದರಾಬಾದ್: ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧದ IPL ಪಂದ್ಯಕ್ಕಾಗಿ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಫಾರಿನ್ ಬ್ಯೂಟಿ ಜೊತೆ ಕ್ಯಾಮರಾಗಳ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ.
ಹೌದು. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಹಾಗೂ ಪಾಪರಾಜಿಗಳು ರಾಜಸ್ಥಾನ ರಾಯಲ್ಸ್ ತಂಡದೊಂದಿಗೆ ಮ್ಯಾಡಿ ಹ್ಯಾಮಿಲ್ಟನ್ ಅವರನ್ನು ನೋಡಿದ್ದಾರೆ. ಇದು ಇವರಿಬ್ಬರ ನಡುವಿನ ದೀರ್ಘಕಾಲದ ಡೇಟಿಂಗ್ ವದಂತಿಗಳಿಗೆ ರೆಕ್ಕೆಪುಕ್ಕ ನೀಡಿದೆ.
ಮ್ಯಾಡಿ ಹ್ಯಾಮಿಲ್ಟನ್ ಯಾರು?
ಡೇಟಿಂಗ್ ವದಂತಿ ಕುರಿತು ಇಲ್ಲಿಯವರೆಗೂ ಇಬ್ಬರೂ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಯಶಸ್ವಿ ಜೈಸ್ವಾಲ್ ಜೊತೆಗೆ ಈ ಫಾರಿನ್ ಬ್ಯೂಟಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾ ಬಂದಿದ್ದಾರೆ.
ಹಿನ್ನೆಲೆ: ಮ್ಯಾಡಿ ಯುಕೆ ವಿದ್ಯಾರ್ಥಿ ಎಂದು ವರದಿಯಾಗಿದೆ. 2024 ರ ಇಂಗ್ಲೆಂಡ್ ವಿರುದ್ಧದ ಭಾರತದ ಟೆಸ್ಟ್ ಸರಣಿಯ ಸಮಯದಲ್ಲಿ ಅವರು ಮೊದಲಿಗೆ ರಾಷ್ಟ್ರದ ಗಮನ ಸೆಳೆದಿದ್ದರು. ಹೈದರಾಬಾದ್ನ ಸ್ಟ್ಯಾಂಡ್ನಲ್ಲಿ ಭಾರತೀಯ ಜೆರ್ಸಿ ಧರಿಸಿ ಯಶಸ್ವಿ ಜೈಸ್ವಾಲ್ ಅವರನ್ನು ಹುರಿದುಂಬಿಸುತ್ತಿದದ್ದು ಕಂಡುಬಂದಿತು.
ಅಲ್ಲಿಂದಾಚೆಗೆ ರಾಜಸ್ಥಾನ ರಾಯಲ್ಸ್ ಪಂದ್ಯಗಳಲ್ಲಿ ಮ್ಯಾಡಿ ಪರಿಚಿತ ಮುಖವಾಗಿದ್ದಾರೆ. ಆಗಾಗ್ಗೆ ತಂಡದ ಗುಲಾಬಿ ಮತ್ತು ನೀಲಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಮ್ಯಾಡಿ ಅವರ ಸಹೋದರ ಹೆನ್ರಿ ಹ್ಯಾಮಿಲ್ಟನ್ ಮೂಲಕ ಈ ಜೋಡಿ ಮೊದಲಿಗೆ ಭೇಟಿಯಾಗಿದ್ದು, ಯುವ ಭಾರತೀಯ ಓಪನರ್ ಜೈಸ್ವಾಲ್ ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ ಎಂದು ವರದಿಗಳು ಹೇಳಿವೆ.
ಹೈದರಾಬಾದ್ ಆಗಮನ ಯಾಕೆ ಟ್ರೆಂಡಿಂಗ್ ಆಗಿದೆ?
ಕಳೆದ ಎರಡು ವರ್ಷಗಳ ಹಿಂದೆ ಮ್ಯಾಡಿ ಹೈದರಾಬಾದಿನಲ್ಲಿಯೇ ಮಾಧ್ಯಮಗಳ ಕಣ್ಣಿಗೆ ಸಿಕ್ಕಿಬಿದ್ದಿದ್ದರು.ಐಪಿಎಲ್ ಸೀಸನ್ ಸಂದರ್ಭದಲ್ಲಿ ಜೈಸ್ವಾಲ್ ಜೊತೆಗೆ ಪ್ರಯಾಣಿಸುತ್ತಿದ್ದರು. ಆಗಾಗ್ಗೆ ಆಕೆಯ ಹೈದರಾಬಾದ್ ಆಗಮನ ಟ್ರೆಂಡಿಂಗ್ ಆಗಿದೆ.
RCB ವಿರುದ್ಧ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್; ವಿರಾಟ್ ಕೊಹ್ಲಿ ನಡೆಗೆ ಅಭಿಮಾನಿಗಳು ಫಿದಾ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


