ಅರ್ಧಕ್ಕೆ ನಿಂತ ಸ್ಮೃತಿ ಮಂದಾನ ವಿವಾಹ: ಜಮಿಮಾ ರಾಡ್ರಿಗಸ್ ನಿರ್ಧಾರ ಕೊಂಡಾಡಿದ ಸುನಿಲ್ ಶೆಟ್ಟಿ!
ನವೆಂಬರ್ 23ರಂದು ಪಲಾಶ್ ಮುಚ್ಛಲ್ ಅವರೊಂದಿಗೆ ಆಗಿರಬೇಕಿತ್ತು. ಆದರೆ, ಸ್ಮೃತಿ ತಂದೆಗೆ ವಿವಾಹಕ್ಕೆ ಕೆಲವೇ ಸಮಯದ ಮೊದಲು ಸಂಭವಿಸಿದ ಹೃದಯಾಘಾತದಿಂದಾಗಿ ಮದುವೆ ಮುಂದೂಡಲಾಯಿತು.

ಭಾರತ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಅವರ ಮದುವೆ ನವೆಂಬರ್ 23ರಂದು ಪಲಾಶ್ ಮುಚ್ಛಲ್ ಅವರೊಂದಿಗೆ ಆಗಿರಬೇಕಿತ್ತು. ಆದರೆ ಮದುವೆ ಮುಂದೂಡಲಾಯಿತು. ಇಂಥ ಸಂಕಷ್ಟದ ಸಮಯದಲ್ಲಿ ಕ್ರಿಕೆಟ್‌ಗಿಂತ ಗೆಳತಿ ಸ್ಮೃತಿ ಜತೆಗಿರುವುದು ಮುಖ್ಯ ಎಂಬ ಜಮಿಮಾ ರಾಡ್ರಿಗಸ್ ನಿರ್ಧಾರಕ್ಕೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ನವೆಂಬರ್ 23ರಂದು ಪಲಾಶ್ ಮುಚ್ಛಲ್ ಅವರೊಂದಿಗೆ ಆಗಿರಬೇಕಿತ್ತು. ಆದರೆ, ಸ್ಮೃತಿ ತಂದೆಗೆ ವಿವಾಹಕ್ಕೆ ಕೆಲವೇ ಸಮಯದ ಮೊದಲು ಸಂಭವಿಸಿದ ಹೃದಯಾಘಾತದಿಂದಾಗಿ ಮದುವೆ ಮುಂದೂಡಲಾಯಿತು. ಅದಾದ ನಂತರ ಅನಾರೋಗ್ಯದಿಂದ ಪಲಾಶ್ ಆಸ್ಪತ್ರೆಗೆ ದಾಖಲಾದ ಸುದ್ದಿ ಹೊರಬಿತ್ತು.
ಜೆಮಿಮಾ ರಾಡ್ರಿಗಸ್ ಅವರು WBBLನಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಗೆ ತೆರಳಬೇಕಾಗಿತ್ತು. ಆದರೆ, ಜೆಮಿಮಾ ಅವರು ತನ್ನ ಗೆಳತಿ ಹಾಗೂ ಸಹ ಆಟಗಾರ್ತಿಯಾಗಿರುವ ಮಂದಾನ ಅವರ ಜೊತೆಗಿರಲು ನಿರ್ಧರಿಸಿ, WBBLನಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಜೆಮಿಮಾ ರಾಡ್ರಿಗಸ್ ತೆಗೆದುಕೊಂಡಿರುವ ನಿರ್ಧಾರವನ್ನು ಅನೇಕರು ಪ್ರಶಂಸಿಸಿದ್ದಾರೆ. ಈ ನಡುವೆ ಬಾಲಿವುಡ್ ತಾರಾ ನಟ ಸುನಿಲ್ ಶೆಟ್ಟಿ ಎಕ್ಸ್ ಮೂಲಕ ಪೋಸ್ಟ್ ಮಾಡಿ ಜೆಮಿಮಾ ನಿರ್ಧಾರವನ್ನು ಕೊಂಡಾಡಿದ್ದಾರೆ.
ಬೆಳಿಗ್ಗೆ ಈ ಲೇಖನ ಓದಿದಾಗ ನನ್ನ ಹೃದಯ ತುಂಬಿ ಬಂದಂತೆ ಭಾಸವಾಯಿತು. ಜೆಮಿಮಾ WBBL ಬಿಟ್ಟು ಸ್ಮೃತಿ ಜೊತೆಗಿರಲು ನಿರ್ಧರಿಸಿದ್ದಾರೆ. ಇದು ನಿಜವಾದ ಒಗ್ಗಟ್ಟು. ನಿಜವಾದ ತಂಡದ ಸದಸ್ಯರು ಇದನ್ನೇ ಮಾಡುತ್ತಾರೆ. ಇದೇ ನಿಜವಾದ ಸರಳದೆ, ನಿಖರತೆ ಹಾಗೂ ನೈಜತೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸುನೀಲ್ ಶೆಟ್ಟಿ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



