ಕ್ರಿಕೆಟ್

IPL 2025: CSK ವಿರುದ್ಧ ಅಬ್ಬರಿಸಿದ ವಿರಾಟ್ ಕೊಹ್ಲಿ; ಹಲವು ದಾಖಲೆಗಳು ಪುಡಿ ಪುಡಿ! Video

33 ಎಸತೆಗಳಲ್ಲಿ 62 ರನ್ ಗಳಿಸಿದ ಕೊಹ್ಲಿ, ಖಲೀಲ್ ಅಹ್ಮದ್ ಅವರ ಶಾರ್ಟ್ ಬಾಲ್ ಅನ್ನು 85 ಮೀಟರ್ ಸಿಕ್ಸರ್ ಬಾರಿಸುವ ಮೂಲಕ ಆರ್‌ಸಿಬಿ ಪರ 304 ಸಿಕ್ಸರ್‌ಗಳನ್ನ ಸಿಡಿಸಿದರು.

IPL 2025: CSK ವಿರುದ್ಧ ಅಬ್ಬರಿಸಿದ ವಿರಾಟ್ ಕೊಹ್ಲಿ; ಹಲವು ದಾಖಲೆಗಳು ಪುಡಿ ಪುಡಿ! Video
ವಿರಾಟ್ ಕೊಹ್ಲಿ
Published On :

ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಐಪಿಎಲ್ 2025 ಪಂದ್ಯದಲ್ಲಿ ಆರ್ ಸಿಬಿ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ತವರು ನೆಲದಲ್ಲಿ ಹಲವು ಹೊಸ ದಾಖಲೆ ಬರೆದರು.

33 ಎಸತೆಗಳಲ್ಲಿ 62 ರನ್ ಗಳಿಸಿದ ಕೊಹ್ಲಿ, ಖಲೀಲ್ ಅಹ್ಮದ್ ಅವರ ಶಾರ್ಟ್ ಬಾಲ್ ಅನ್ನು 85 ಮೀಟರ್ ಸಿಕ್ಸರ್ ಬಾರಿಸುವ ಮೂಲಕ ಆರ್‌ಸಿಬಿ ಪರ 304 ಸಿಕ್ಸರ್‌ಗಳನ್ನ ಸಿಡಿಸಿದರು. ಈ ಮೂಲಕ ವಿರಾಟ್ ಕೊಹ್ಲಿ ಟಿ20ಯಲ್ಲಿ ತಂಡವೊಂದರ ಪರ 300 ಸಿಕ್ಸರ್‌ ಬಾರಿಸಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಾಜಿ ಕ್ರಿಕೆಟಿಗ ಕ್ರಿಸ್‌ಗೇಲ್‌ 263 ಸಿಕ್ಸರ್‌ ಸಿಡಿಸಿ ಈ ಸಾಧನೆ ಮಾಡಿದ 2ನೇ ಆಟಗಾರನಾದ್ರೆ, ರೋಹಿತ್‌ ಶರ್ಮಾ (ಮುಂಬೈ ಇಂಡಿಯನ್ಸ್‌) 262 ಸಿಕ್ಸರ್‌ ಮೂಲಕ 3ನೇ ಸ್ಥಾನದಲ್ಲಿದ್ದರೆ ಕೀರನ್‌ ಪೋಲಾರ್ಡ್‌ (ಮುಂಬೈ) 258 ಸಿಕ್ಸರ್‌ ಮೂಲಕ 4ನೇ ಸ್ಥಾನ ಮತ್ತು ಎಂ.ಎಸ್‌ ಧೋನಿ (ಸಿಎಸ್‌ಕೆ) 257 ಸಿಕ್ಸರ್‌ ಸಿಡಿಸಿ 5ನೇ ಸ್ಥಾನಗಳಲ್ಲಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಸಿಕ್ಸರ್: ವಿರಾಟ್ ಕೊಹ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ-20ಯಲ್ಲಿ 150 ಸಿಕ್ಸರ್ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಕೊಹ್ಲಿ ಪಾತ್ರರಾದರು. ವಿರಾಟ್ ಕೊಹ್ಲಿ ಈ ಕ್ರೀಡಾಂಗಣದಲ್ಲಿ 154 ಸಿಕ್ಸರ್ ಬಾರಿಸಿದ್ದಾರೆ.

CSK ವಿರುದ್ಧ ಐದು ಸಿಕ್ಸರ್: 33 ಬಾಲ್ ಗಳಲ್ಲಿ 62 ರನ್ ಗಳಿಸಿದ ವಿರಾಟ್ ಕೊಹ್ಲಿ ಐದು ಸಿಕ್ಸರ್ ಹೊಡೆದರು. ಐಪಿಎಲ್ ಟೂರ್ನಿಯಲ್ಲಿ CSK ವಿರುದ್ಧ ಕೊಹ್ಲಿ ಐದು ಸಿಕ್ಸರ್ ಹೊಡೆದದ್ದು ಇದು ಎರಡನೇ ಬಾರಿ. 2014ರಲ್ಲಿ ಚೆನ್ನೈ ವಿರುದ್ಧ 5 ಸಿಕ್ಸರ್ ಹೊಡೆದಿದ್ದರು.

ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಅಗ್ರಸ್ಥಾನ: ಅಲ್ಲದೇ ಈ ಆವೃತ್ತಿಯಲ್ಲಿ ಸ್ಫೋಟಕ ಪ್ರದರ್ಶನ ನೀಡುತ್ತಿರುವ ಕಿಂಗ್‌ ಕೊಹ್ಲಿ 505 ರನ್‌ ಗಳಿಸಿ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಗುಜರಾತ್ ಟೈಟನ್ಸ್ ನ ಸಾಯಿ ಸುದರ್ಶನ್ 504 ರನ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ಮುಂಬೈ ಇಂಡಿಯನ್ಸ್ ನ ಸೂರ್ಯ ಕುಮಾರ್ ಯಾದದವ್ 475 ರನ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಐಪಿಎಲ್‌ನಲ್ಲಿ 8ನೇ ಬಾರಿಗೆ 500ಕ್ಕೂ ಹೆಚ್ಚು ರನ್‌ ಗಳಿಸಿದ ಮೊದಲಿಗನಾಗಿದ್ದಾರೆ. 7 ಬಾರಿ 500ಕ್ಕೂ ಹೆಚ್ಚು ರನ್‌ ಗಳಿಸಿದ ಡೇವಿಡ್‌ ವಾರ್ನರ್‌ 2ನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.