IPL 2025: ರಿಯಾನ್ ಪರಾಗ್ ಅದ್ಭುತ ಕ್ಯಾಚ್ ಗೆ ದಂಗಾಗಿ ನಿಂತ ಶಿವಂ ದುಬೆ; ಮೌನವಾಗಿ ಕುಳಿತ ಧೋನಿ, ವಿಡಿಯೋ!
ಐಪಿಎಲ್ 2025ರ ಟೂರ್ನಿಯ 11ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ ರಾಯಲ್ಸ್ (RR) ನಡುವೆ ನಡೆಯಿತು.

ಗುವಾಹಟಿ: ಐಪಿಎಲ್ 2025ರ ಟೂರ್ನಿಯ 11ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ ರಾಯಲ್ಸ್ (RR) ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ ನಿಗದಿತ ಓವರ್ ನಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್ ಪೇರಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಸಿಎಸ್ಕೆ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ರಚಿನ್ ರವೀಂದ್ರ ಶೂನ್ಯ ಸುತ್ತಿ ಔಟಾದರೇ, ರಾಹುಲ್ ತ್ರಿಪಾಟಿ ತಂಡದ ಮೊತ್ತ 46 ರನ್ ಇದ್ದಾಗ ಔಟಾದರು. ಇನ್ನು ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಶಿವಂ ದುಬೆ 18 ರನ್ ಗಳಿಸಿದ್ದಾಗ ಹಸರಂಗ ಬೌಲಿಂಗ್ ನಲ್ಲಿ ಔಟಾದರು.
9ನೇ ಓವರ್ ನಲ್ಲಿ ಭರ್ಜರಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ಗೆ ಮುಂದಾದರು. ಆದರೆ ಹಸರಂಗರ ಮೂರನೇ ಎಸೆತವನ್ನು ಬೌಂಡರಿಗಟ್ಟಲು ಮುಂದಾದರು. ಆದರೆ ರಿಯಾನ್ ಪರಾಗ್ ಅದ್ಭುತ ಕ್ಯಾಚ್ ಹಿಡಿದು ದುಬೆ ಪೆವಿಲಿಯನ್ ಸೇರುವಂತೆ ಮಾಡಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Video: SRH-DC ಪಂದ್ಯದ ವೇಳೆ RCB RCB ಘೋಷಣೆ; ತವರು ಪಂದ್ಯಗಳನ್ನು ಹೈದರಾಬಾದ್ನಿಂದ ಬೇರೆಡೆಗೆ ಸ್ಥಳಾಂತರ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


