ಕ್ರಿಕೆಟ್

IPL 2025: ಚೆಪಾಕ್‌ ಪಿಚ್ RCB ಗೆ ದೊಡ್ಡ ಸವಾಲು; ಶೇನ್ ವ್ಯಾಟ್ಸನ್ ನೀಡಿದ ಸಲಹೆ ಏನು?

ಕೆಕೆಆರ್ ವಿರುದ್ಧ ಉತ್ತಮ ಗೆಲುವು ಸಾಧಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಸಿಎಸ್ ಕೆ ಎದುರಿಸಲಿರುವ ಆರ್ ಸಿಬಿಗೆ ಚೆಪಾಕ್ ಪಿಚ್ ದೊಡ್ಡ ಸವಾಲಾಗಿದೆ.

IPL 2025: ಚೆಪಾಕ್‌ ಪಿಚ್ RCB ಗೆ ದೊಡ್ಡ ಸವಾಲು; ಶೇನ್ ವ್ಯಾಟ್ಸನ್ ನೀಡಿದ ಸಲಹೆ ಏನು?
ಆರ್ ಸಿಬಿ, ಶೇನ್ ವ್ಯಾಟ್ಸನ್ ಸಾಂದರ್ಭಿಕ ಚಿತ್ರ
Published On :

ಚೆನ್ನೈ: ಶುಕ್ರವಾರ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಎರಡನೇ ಐಪಿಎಲ್ ಪಂದ್ಯದಲ್ಲಿ ಚೆಪಾಕ್ ಪಿಚ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು( RCB)ಗೆ ದೊಡ್ಡ ಸವಾಲು ಆಗುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಹೇಳಿದ್ದಾರೆ.

ಕೆಕೆಆರ್ ವಿರುದ್ಧ ಉತ್ತಮ ಗೆಲುವು ಸಾಧಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಸಿಎಸ್ ಕೆ ಎದುರಿಸಲಿರುವ ಆರ್ ಸಿಬಿಗೆ ಚೆಪಾಕ್ ಪಿಚ್ ದೊಡ್ಡ ಸವಾಲಾಗಿದೆ. ಅದರಲ್ಲೂ ವಿಶೇಷವಾಗಿ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಗಳ ಗುಣಮಟ್ಟವನ್ನು ನೋಡಿದರೆ, ಆರ್ ಸಿಬಿ ಪಿಚ್ ಗೆ ತಕ್ಕಂತೆ ತಮ್ಮ ತಂಡವನ್ನು ಸರಿಹೊಂದಿಸಬೇಕಾಗಿದೆ. ತಪ್ಪು ಮಾಡಬೇಡಿ. ಚೆಪಾಕ್ ಒಂದು ಕೋಟೆಯಾಗಿದೆ" ಎಂದು ಜಿಯೋಸ್ಟಾರ್ ಗೆ ವ್ಯಾಟ್ಸನ್ ಹೇಳಿದ್ದಾರೆ.

IPL ನಲ್ಲಿ ಸಿಎಸ್ ಕೆ ಹಾಗೂ ಆರ್ ಸಿಬಿ ಎರಡಕ್ಕೂ ಆಡಿರುವ ವ್ಯಾಟ್ಸನ್, ಚೆನ್ನೈ ಸ್ಪಿನ್ನರ್ ಗಳ ಗುಣಮಟ್ಟವನ್ನು ಉಲ್ಲೇಖಿಸಿದ್ದು, ತವರು ನೆಲದಲ್ಲಿ ಅವರ ಪ್ರಾಬಲ್ಯಕ್ಕೆ ಕಾರಣವಿರಬಹುದು ಎಂದಿದ್ದಾರೆ. ಚೆನ್ನೈ ಪಿಚ್ ಗೆ ತಕ್ಕಂತೆ ಇಡೀ ಸಿಎಸ್ ಕೆ ತಂಡ ಅತ್ಯುತ್ತಮವಾಗಿ ರೂಪುಗೊಂಡಿದೆ.

MI ವಿರುದ್ಧದ ತಮ್ಮ ಆರಂಭಿಕ ಪಂದ್ಯದಲ್ಲಿ ಮೂವರು ಸ್ಪಿನ್ನರ್‌ಗಳಾದ ಅಶ್ವಿನ್, ಜಡೇಜಾ ಮತ್ತು ನೂರ್ ಅಹ್ಮದ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ನೂರು ಅಹ್ಮದ್ ತನ್ನ ಮೊದಲ ಪಂದ್ಯದಲ್ಲಿಯೇ ಪ್ರಭಾವಿ ಬೌಲಿಂಗ್ ಪ್ರದರ್ಶನ ಮೂಲಕ ಸಿಎಸ್ ಕೆ ತಂಡದ ಆತ್ಮವಿಶ್ವಾಸವನ್ನು ವೃದ್ದಿಸಿದರು ಎಂದು ವ್ಯಾಟ್ಸನ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.