ಕ್ರಿಕೆಟ್

IPL 2025: ಸಾಂಪ್ರದಾಯಿಕ ಎದುರಾಳಿ CSK vs RCB ನಡುವಿನ ಪಂದ್ಯ ಯಾವಾಗ? ಟಿಕೆಟ್ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ...

ಐಪಿಎಲ್ 2025ರ ಆವೃತ್ತಿಯ ಎರಡನೇ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಲಿವೆ. ಭಾನುವಾರ ತವರಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಜಯ ಸಾಧಿಸಿದೆ. ಇತ್ತ ಆರ್‌ಸಿಬಿ ಕೂಡ ಕೆಕೆಆರ್ ವಿರುದ್ಧ ಜಯ ಸಾಧಿಸಿದೆ.

IPL 2025: ಸಾಂಪ್ರದಾಯಿಕ ಎದುರಾಳಿ CSK vs RCB ನಡುವಿನ ಪಂದ್ಯ ಯಾವಾಗ? ಟಿಕೆಟ್ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ...
ವಿರಾಟ್ ಕೊಹ್ಲಿ - ಎಂಎಸ್ ಧೋನಿ
Published On :

ಚೆನ್ನೈ: ಶನಿವಾರ (ಮಾ.22) ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಐಪಿಎಲ್ 2025ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.

ಐಪಿಎಲ್ ಮೆಗಾ ಆವೃತ್ತಿಗೂ ಮುನ್ನ ರಜತ್ ಪಾಟೀದಾರ್, ವಿರಾಟ್ ಕೊಹ್ಲಿ ಮತ್ತು ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದ್ದ ಆರ್‌ಸಿಬಿ ಉಳಿದವರನ್ನು ಬಿಡುಗಡೆ ಮಾಡಿತ್ತು. ಬಳಿಕ ಉತ್ತಮ ತಂಡ ಕಂಟ್ಟಿತ್ತು. ಪದೇ ಪದೆ ಬೌಲಿಂಗ್ ವಿಚಾರದಲ್ಲಿ ಟೀಕೆಗೆ ಗುರಿಯಾಗುತ್ತಿದ್ದ ಆರ್‌ಸಿಬಿ ಈ ಬಾರಿ ಉತ್ತಮ ಬೌಲಿಂಗ್ ಮತ್ತು ಬ್ಯಾಟಿಂಗ್ ಇರುವಂತೆ ನೋಡಿಕೊಂಡಿದ್ದು, ಬಹುತೇಕ ಮಾಜಿ ಕ್ರಿಕೆಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಆರ್‌ಸಿಬಿ ಸಾಂಪ್ರದಾಯಿಕ ಎದುರಾಳಿಯಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಾರ್ಚ್ 28 ರಂದು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಲಿದೆ. ಐಪಿಎಲ್ 2025ರ ಆವೃತ್ತಿಯ ಎರಡನೇ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಲಿವೆ. ಭಾನುವಾರ ತವರಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಜಯ ಸಾಧಿಸಿದೆ. ಇತ್ತ ಆರ್‌ಸಿಬಿ ಕೂಡ ಕೆಕೆಆರ್ ವಿರುದ್ಧ ಜಯ ಸಾಧಿಸಿದೆ.

ಅಭಿಮಾನಿಗಳ ಪಾಲಿಗೆ ರಸದೌತಣ ನೀಡುವ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಪಂದ್ಯ ವೀಕ್ಷಿಸಲು ಶೀಘ್ರದಲ್ಲೇ ಟಿಕೆಟ್ ಮಾರಾಟ ಆರಂಭವಾಗಲಿದೆ. ಮಾರ್ಚ್ 25ರಂದು ಬೆಳಗ್ಗೆ 10.15ಕ್ಕೆ ಟಿಕೆಟ್ ಮಾರಾಟ ಆರಂಭವಾಗಲಿದೆ. chennaisuperkings.com ಮತ್ತು district.in ನಲ್ಲಿ ಟಿಕೆಟ್ ಲಭ್ಯವಿವೆ.

ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯದ ಟಿಕೆಟ್ ಮೌಲ್ಯ 1,700 ರಿಂದ ಆರಂಭವಾಗಲಿದ್ದು, 7,500 ಗರಿಷ್ಠ ಬೆಲೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.