IPL 2025 final Match: ಬೆಂಗಳೂರಿನಲ್ಲಿ live screening; ಎಲ್ಲೆಲ್ಲಿ ಆಯೋಜನೆ?
ಈ ಸ್ಥಳಗಳಲ್ಲಿ ಹೆಚ್ಚಿನವು ದೊಡ್ಡ ಪರದೆ ಹೊಂದಿದ್ದು, ಐಪಿಎಲ್ ವಿಷಯಾಧಾರಿತ ವಿವಿಧ ಬಗೆಯ ಮೆನುಗಳು, ಆಹಾರ ಮತ್ತು ಪಾನೀಯಗಳು ಇರುತ್ತವೆ.

ಬೆಂಗಳೂರು: ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ರಾತ್ರಿ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸಿ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿಹಿಡಿಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿಯಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಉದ್ಯಾನಗರಿ ಸಜ್ಜಾಗುತ್ತಿದೆ.
ಬೆಂಗಳೂರಿನಲ್ಲಿರುವ ಅಭಿಮಾನಿಗಳು ಲೈವ್ ಆಗಿ ಪಂದ್ಯ ವೀಕ್ಷಿಸಲು ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ರಾತ್ರಿ 7-30ಕ್ಕೆ ಪಂದ್ಯ ಆರಂಭದೊಂದಿಗೆ ನಗರದಾದ್ಯಂತ ಬಾರ್‌ಗಳು, ಕೆಫೆಗಳು ಮತ್ತು ಮೇಲ್ಛಾವಣಿಗಳು ಅಭಿಮಾನಿಗಳಿಗೆ ಮಿನಿ ಸ್ಟೇಡಿಯಂಗಳಾಗಿ ಪರಿವರ್ತನೆಯಾಗುವುದರಿಂದ ಬೆಂಗಳೂರಿನ ಶಕ್ತಿ (POWER) ಮಾರ್ದನಿಸುವ ನಿರೀಕ್ಷಿಯಿದೆ.
ಆರ್ ಸಿಬಿ ಅಭಿಮಾನಿಗಳಿಗಾಗಿ ನಗರದ ಹಲವಾರು ಕಡೆಗಳಲ್ಲಿ live screening ಆಯೋಜಿಸಲಾಗಿದೆ.
ಈ ಸ್ಥಳಗಳಲ್ಲಿ ಹೆಚ್ಚಿನವು ದೊಡ್ಡ ಪರದೆ ಹೊಂದಿದ್ದು, ಐಪಿಎಲ್ ವಿಷಯಾಧಾರಿತ ವಿವಿಧ ಬಗೆಯ ಮೆನುಗಳು, ಆಹಾರ ಮತ್ತು ಪಾನೀಯಗಳು ಇರುತ್ತವೆ. ಹರ್ಷೋದ್ಗಾರ, ಘೋಷಣೆಗಳೊಂದಿಗೆ ಇಲ್ಲಿ ಅಭಿಮಾನಿಗಳು ಎಂಜಾಯ್ ಮಾಡಬಹುದಾಗಿದೆ.
ಫೈನಲ್ ಹಿನ್ನೆಲೆಯಲ್ಲಿ ಈ ಸ್ಥಳಗಳೆಲ್ಲಾ ಈಗಾಗಲೇ ಭರ್ತಿಯಾಗಿವೆ. ಮೆಟ್ರೋ, ಬಿಎಂಟಿಸಿ ಬಸ್ ಗಳು ಮತ್ತು ಕ್ಯಾಬ್ ಸೇವೆಗಳು ಸುಲಭವಾಗಿ ದೊರೆಯುವಂತಹ ಕಡೆಗಳಲ್ಲಿ ಈ ವ್ಯವಸ್ಥೆಯನ್ನು ಹೆಚ್ಚಾಗಿ ಮಾಡಲಾಗುತ್ತದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



