IPL 2025: ಒಂದೇ ಓವರ್ ನಲ್ಲಿ 4 ವಿಕೆಟ್, CSK ವಿರುದ್ಧ Yuzvendra Chahal ಹ್ಯಾಟ್ರಿಕ್ ಸಾಧನೆ!
19ನೇ ಓವರ್ ಎಸೆದ ಚಹಲ್ ಒಂದೇ ಓವರ್ ನಲ್ಲಿ ಹ್ಯಾಟ್ರಿಕ್ ಸಹಿತ 4 ವಿಕೆಟ್ ಪಡೆದು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಓವರ್ ನ ಮೊದಲ ಎಸೆತ ವೈಡ್ ಮಾಡಿದರು. ಚಹಲ್ ಎಸೆದ 2ನೇ ಎಸೆತವನ್ನು ಧೋನಿ ಲಾಂಗ್ ಆನ್ ನತ್ತ ಸಿಕ್ಸರ್ ಭಾರಿಸಿದರು.

ಚೆನ್ನೈ: ಐಪಿಎಲ್ ಟೂರ್ನಿಯ ಇಂದಿನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಸ್ಪಿನ್ನರ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆ ಮೂಲಕ ಚೆನ್ನೈ ಮೊದಲು ಬ್ಯಾಟಿಂಗ್ ಆರಂಭಿಸಿತು. ಆದರೆ ಎಂದಿನಂತೆ ಇಂದೂ ಕೂಡ ಚೆನ್ನೈ ತಂಡ ಆರಂಭಿಕ ಆಘಾತ ಎದುರಿಸಿತು.
ಕೇವಲ 48 ರನ್ ಗಳ ಅಂತರದಲ್ಲಿ ಚೆನ್ನೈ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕ್ರೀಸ್ ಗೆ ಬಂದ ಸ್ಯಾಮ್ ಕರ್ರನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಡಿವಾಲ್ಡ್ ಬ್ರೇವಿಸ್ ಜೊತೆಗೂಡಿದ ಸ್ಯಾಮ್ ಕರ್ರನ್ 4ನೇ ವಿಕೆಟ್ ಗೆ 78 ರನ್ ಗಳ ಜೊತೆಯಾಟ ಆಡಿದರು.
ಈ ಹಂತದಲ್ಲಿ 32 ರನ್ ಗಳಿಸಿದ್ದ ಡಿವಾಲ್ಡ್ ಬ್ರೇವಿಸ್ ಅಜ್ಮತುಲ್ಲಾ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಮತ್ತೊಂದು ತುದಿಯಲ್ಲಿ 88 ರನ್ ಗಳಿಸಿ ಶತಕದತ್ತ ದಾಪುಗಾಲಿರಿಸಿದ್ದ ಸ್ಯಾಮ್ ಕರ್ರನ್ ಮಾರ್ಕೋ ಜೇನ್ಸನ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕ್ರೀಸ್ ಗೆ ಧೋನಿ ಆಕ್ರಮಣಕಾರಿ ಆಟಕ್ಕೆ ಮುಂದಾದರು. ತಾವಾಡಿದ ಮೊದಲ ಎಸೆತವನ್ನೇ ಬೌಂಡರಿಗೆ ಭಾರಿಸಿ ಭರ್ಜರಿ ಬ್ಯಾಟಿಂಗ್ ಸೂಚನೆ ನೀಡಿದರು.

IPL 2025: 'Virat Kohli ನನ್ನ ಸ್ನೇಹಿತನಲ್ಲ.. Just ಸಹಆಟಗಾರ ಅಷ್ಟೇ'; RCB ಸ್ಟಾರ್ ಬ್ಯಾಟರ್ ಸ್ಫೋಟಕ ಹೇಳಿಕೆ!
ಚಹಲ್ ಅದ್ಭುತ ಬೌಲಿಂಗ್, ಒಂದೇ ಓವರ್ ನಲ್ಲಿ 4 ವಿಕೆಟ್
ಇನ್ನು ಈ ಹಂತದಲ್ಲಿ ಅಂದರೆ 19ನೇ ಓವರ್ ಎಸೆದ ಚಹಲ್ ಒಂದೇ ಓವರ್ ನಲ್ಲಿ ಹ್ಯಾಟ್ರಿಕ್ ಸಹಿತ 4 ವಿಕೆಟ್ ಪಡೆದು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಓವರ್ ನ ಮೊದಲ ಎಸೆತ ವೈಡ್ ಮಾಡಿದರು. ಚಹಲ್ ಎಸೆದ 2ನೇ ಎಸೆತವನ್ನು ಧೋನಿ ಲಾಂಗ್ ಆನ್ ನತ್ತ ಸಿಕ್ಸರ್ ಭಾರಿಸಿದರು. ಈ ವೇಳೆ ಅಲ್ಲಿಯೇ ಪೆವಿಲಿಯನ್ ನಲ್ಲಿ ಕುಳಿತಿದ್ದ ರವೀಂದ್ರ ಜಡೇಜಾ ಕ್ಯಾಚ್ ಪಡೆದಿದ್ದು ವಿಶೇಷವಾಗಿತ್ತು. ಇದಾದ ನಂತರದ ಎಸೆತವನ್ನು ಧೋನಿ ಮತ್ತೆ ಸಿಕ್ಸರ್ ಗೆ ಭಾರಿಸಲು ಯತ್ನಿಸಿದರೂ ಚೆಂಡು ನೇರವಾಗಿ ನೇಹಲ್ ವಧೇರಾ ಕೈ ಸೇರಿತು. ಬಳಿಕ ಕ್ರೀಸ್ ಗೆ ಬಂದ ದೀಪಕ್ ಹೂಡ ಚಹಲ್ ಎಸೆತ 3ನೇ ಎಸೆತದಲ್ಲಿ 2 ರನ್ ಪಡೆದರು.
ಹ್ಯಾಟ್ರಿಕ್ ಸಾಧನೆ
ಇದಾದ ಬಳಿಕ ಮೈದಾನದಲ್ಲಿ ನಡೆದದ್ದು ಅಕ್ಷರಶಃ ಚಹಲ್ ಮ್ಯಾಜಿಕ್, ಓವರ್ ನ 4, 5 ಮತ್ತು ಅಂತಿಮ ಎಸೆತಗಳಲ್ಲಿ ಚಹಲ್ ಸತತ ವಿಕೆಟ್ ಗಳನ್ನು ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಮೂರನೇ ಎಸೆತದಲ್ಲಿ ದೀಪಕ್ ಹೂಡಾರನ್ನು ಔಟ್ ಮಾಡಿದ ಚಹಲ್, 5ನೇ ಎಸೆತದಲ್ಲಿ ಅನ್ಶುಲ್ ಕಂಬೋಜ್ ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಂತಿಮ ಎಸೆತದಲ್ಲಿ ನೂರ್ ಅಹ್ಮದ್ ಮಾರ್ಕೇ ಜಾನ್ಸನ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಆ ಮೂಲಕ ಚಹಲ್ ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.
ಅಂದ ಹಾಗೆ ಇದು ಐಪಿಎಲ್ ಇತಿಹಾಸದ 23ನೇ ಹ್ಯಾಟ್ರಿಕ್ ಸಾಧನೆಯಾಗಿದ್ದು, ಹಾಲಿ ಟೂರ್ನಿಯಲ್ಲಿ ಯುಜುವೇಂದ್ರ ಚಹಲ್ ರ ಮೊದಲ ಹ್ಯಾಟ್ರಿಕ್ ಆಗಿದೆ. ಅಂತೆಯೇ 2023ರ ಬಳಿಕ ಐಪಿಎಲ್ ನಲ್ಲಿ ಬಂದ ಮೊದಲ ಹ್ಯಾಟ್ರಿಕ್ ಸಾಧನೆಯಾಗಿದ್ದು, ವೈಯುಕ್ತಿಕವಾಗಿ ಚಹಲ್ ಗೆ 2ನೇ ಹ್ಯಾಟ್ರಿಕ್ ಸಾಧನೆಯಾಗಿದೆ. ಅಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬಂದ ಹ್ಯಾಟ್ರಿಕ್ ಆಗಿದ್ದು, ಅಂತೆಯೇ ಚೆಪಾಕ್ ಕ್ರೀಡಾಂಗಣದಲ್ಲಿ ಬಂದ 2ನೇ ಹ್ಯಾಟ್ರಿಕ್ ವಿಕೆಟ್ ಆಗಿದೆ. ಈ ಹಿಂದೆ ಇದೇ ಚೆಪಾಕ್ ಕ್ರೀಡಾಂಗಣದಲ್ಲಿ 2008ರಲ್ಲಿ ಲಕ್ಷ್ಮಿಪತಿ ಬಾಲಾಜಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


