IPL 2025: 'ನಾನು 3 ವರ್ಷಗಳಿಂದ...'; ಸಾರಾ ಜೊತೆಗಿನ Relationship ಕುರಿತು ಕೊನೆಗೂ ಮೌನ ಮುರಿದ Shubman Gill
ಸಾರಾ ತೆಂಡೂಲ್ಕರ್ ಅವರಲ್ಲದೆ, ರಿದ್ಧಿಮಾ ಪಂಡಿತ್, ಅನನ್ಯಾ ಪಾಂಡೆ, ಸೋನಮ್ ಬಾಜ್ವಾ ಮತ್ತು ಅವನೀತ್ ಕೌರ್ ಸೇರಿದಂತೆ ಅನೇಕ ನಟಿಯರೊಂದಿಗೆ ಶುಭಮನ್ ಗಿಲ್ ಅವರ ಹೆಸರು ಆಗಾಗ ಕೇಳಿಬರುತ್ತಿದೆ.

ಮುಂಬೈ: ಐಪಿಎಲ್ ಟೂರ್ನಿಯಲ್ಲಿ ತೊಡಗಿಕೊಂಡಿರುವ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭ್ ಮನ್ ಗಿಲ್ ಕೊನೆಗೂ ತಮ್ಮ ಪ್ರೀತಿಯ ಕುರಿತು ಮೌನ ಮುರಿದಿದ್ದು, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ (Shubman Gill) ಕ್ರಿಕೆಟ್ ಜೊತೆಗೆ ತಮ್ಮ ವೈಯಕ್ತಿಕ ಜೀವನದ ವಿಚಾರದಲ್ಲೂ ಪದೇ ಪದೇ ಸುದ್ದಿಗೆ ಗ್ರಾಸವಾಗುತ್ತಿದ್ದು, ಸಾರಾ ತೆಂಡೂಲ್ಕರ್ ಅವರಲ್ಲದೆ, ರಿದ್ಧಿಮಾ ಪಂಡಿತ್, ಅನನ್ಯಾ ಪಾಂಡೆ, ಸೋನಮ್ ಬಾಜ್ವಾ ಮತ್ತು ಅವನೀತ್ ಕೌರ್ ಸೇರಿದಂತೆ ಅನೇಕ ನಟಿಯರೊಂದಿಗೆ ಶುಭಮನ್ ಗಿಲ್ ಅವರ ಹೆಸರು ಆಗಾಗ ಕೇಳಿಬರುತ್ತಿದೆ.
ಕಳೆದ ಹಲವಾರು ವರ್ಷಗಳಿಂದ ಗಿಲ್ ಅವರ ಹೆಸರು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಅವರೊಂದಿಗೆ ತಳುಕು ಹಾಕಿಕೊಂಡು ಬಂದಿದೆ. ಆದರೆ ಇಬ್ಬರೂ ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

IPL 2025: 'SRH ತಂಡದಲ್ಲಿ ಆತ ಇರಬೇಕಿತ್ತು'; ಆಟಗಾರರ ಹರಾಜಿನಲ್ಲಿ ಕಳೆದುಕೊಂಡಿದ್ದಕ್ಕೆ ಡೇನಿಯಲ್ ವೆಟ್ಟೋರಿ ಬೇಸರ!
ಈ ಹಿಂದೆ ಟೀಂ ಇಂಡಿಯಾ ಮುಂಬೈನಲ್ಲಿ ಆಡಿದ್ದ ಸಾಕಷ್ಟು ಪಂದ್ಯಗಳಿಗೆ ಸಾರಾ ತೆಂಡೂಲ್ಕರ್ ಬಂದಿದ್ದರು. ಆಗಲೂ ಸಾರಾ ಶುಭ್ ಮನ್ ಗಿಲ್ ಗಾಗಿಯೇ ಮೈದಾನಕ್ಕೆ ಆಗಮಿಸಿದ್ದಾರೆ ಎಂದು ವದಂತಿ ಹಬ್ಬಿಸಲಾಗಿತ್ತು. ಇದೀಗ ಈ ಇಬ್ಬರೂ ದೂರಾಗಿದ್ದಾರೆ ಎಂಬ ಹೊಸ ವದಂತಿ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಇಬ್ಬರೂ ಇನ್ ಸ್ಟಾಗ್ರಾಮ್ ನಲ್ಲಿ ಪರಸ್ಪರ ಅನ್ ಫಾಲೋ ಮಾಡಿಕೊಂಡಿದ್ದಾರೆ.
ಮೌನ ಮುರಿದ ಗಿಲ್
ಇದೆಲ್ಲದರ ನಡುವೆ, ಶುಭ್ಮನ್ ಗಿಲ್ ಊಹಾಪೋಹಗಳ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. 'ನಾನು 3 ವರ್ಷಗಳಿಗೂ ಹೆಚ್ಚು ಸಮಯದಿಂದ ಒಂಟಿಯಾಗಿದ್ದೇನೆ. ಆದಾಗ್ಯೂ ನನ್ನ ಹೆಸರನ್ನು ಬೇರೆ ಬೇರೆ ಹುಡುಗಿಯರೊಂದಿಗೆ ತಳುಕು ಹಾಕುತ್ತಾ ವದಂತಿ ಸೃಷ್ಟಿಸಿರುತ್ತಾರೆ. ಅಷ್ಟಕ್ಕೂ ನನ್ನೊಂದಿಗೆ ಯಾರ ಹೆಸರನ್ನು ತಳುಕು ಹಾಕಿರುತ್ತಾರೋ ಅವರನ್ನು ನಾನು ಎಂದಿಗೂ ನೋಡಿಲ್ಲ ಅಥವಾ ಭೇಟಿಯೂ ಆಗಿಲ್ಲ' ಎಂದಿದ್ದಾರೆ. ಈ ಹೇಳಿಕೆಯೊಂದಿಗೆ ಶುಭ್ಮನ್ ಗಿಲ್ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿದ್ದು, ಪ್ರಸ್ತುತ ಅವರು ಒಂಟಿಯಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


