ಕ್ರಿಕೆಟ್

IPL 2025: 'SRH ತಂಡದಲ್ಲಿ ಆತ ಇರಬೇಕಿತ್ತು'; ಆಟಗಾರರ ಹರಾಜಿನಲ್ಲಿ ಕಳೆದುಕೊಂಡಿದ್ದಕ್ಕೆ ಡೇನಿಯಲ್ ವೆಟ್ಟೋರಿ ಬೇಸರ!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೂರನೇ ಗೆಲುವು ಸಾಧಿಸಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಹೆಚ್ಚು ಪ್ರಭಾವ ಬೀರಿದ ಎಡಗೈ ಸ್ಪಿನ್ನರ್‌ ಯಾರೆಂಬ ಬಗ್ಗೆ ಮಾತನಾಡಿದ ವೆಟ್ಟೋರಿ, ಸಾಯಿ ಕಿಶೋರ್ ಎಂದರು.

IPL 2025: 'SRH ತಂಡದಲ್ಲಿ ಆತ ಇರಬೇಕಿತ್ತು'; ಆಟಗಾರರ ಹರಾಜಿನಲ್ಲಿ ಕಳೆದುಕೊಂಡಿದ್ದಕ್ಕೆ ಡೇನಿಯಲ್ ವೆಟ್ಟೋರಿ ಬೇಸರ!
ಡೇನಿಯಲ್ ವೆಟ್ಟೋರಿ
Published On :

ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ (SRH)ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ, ಎಡಗೈ ಸ್ಪಿನ್ನರ್ ಆರ್ ಸಾಯಿ ಕಿಶೋರ್ ಅವರನ್ನು ಶ್ಲಾಘಿಸಿದ್ದಾರೆ. ಆಟಗಾರರ ಹರಾಜಿನಲ್ಲಿ ಆತ ನಮ್ಮ ತಂಡದ ಭಾಗವಾಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೂರನೇ ಗೆಲುವು ಸಾಧಿಸಿದ ನಂತರ ನಡೆದ ಸುದ್ದಿಗೋಷ್ಛಿಯಲ್ಲಿ ಹೆಚ್ಚು ಪ್ರಭಾವ ಬೀರಿದ ಎಡಗೈ ಸ್ಪಿನ್ನರ್‌ ಯಾರೆಂಬ ಬಗ್ಗೆ ಮಾತನಾಡಿದ ವೆಟ್ಟೋರಿ, ಸಾಯಿ ಕಿಶೋರ್ ಎಂದರು.

ನಾನು ಯೋಚಿಸಿದಂತೆ ಮುಂಬೈಗೆ ಮಿಚೆಲ್ ಸ್ಯಾಂಟ್ನರ್ ನಿಸ್ಸಂಶಯವಾಗಿ ಅದ್ಬುತ ಸ್ಪಿನ್ನರಾಗಿದ್ದಾರೆ. ಸಿಎಸ್ ಕೆಗೆ ರವೀಂದ್ರ ಜಡೇಜಾ, ಹರ್ಪ್ರೀತ್ ಬ್ರಾರ್ ಪಂಜಾಬ್ ನಲ್ಲಿ ಕೆಲವು ಅವಕಾಶ ಪಡೆದಿದ್ದಾರೆ. ಉಳಿದವರು ಯಾರು ಎಂದು ನನಗೆ ನೆನಪಿಸಿ? ಎಂದು ಕೇಳಿದ ವೆಟ್ಟೋರಿ, ಸಾಯಿ ಕಿಶೋರ್ ಅತ್ಯುತ್ತಮ ಬೌಲರ್. ಅವರೊಬ್ಬ ಅದ್ಬುತ ಆಟಗಾರ ಎಂದು ಶ್ಲಾಘಿಸಿದರು.

ಆಟಗಾರರ ಹರಾಜಿನಲ್ಲಿ ಆತನಿಗೆ ಬಿಡ್ ಮಾಡಲು ಪ್ರಯತ್ನಿಸಿದ್ದೇವು. ಆತ ತಂಡದಲ್ಲಿ ಇರಬೇಕಾಗಿತ್ತು. ಅವರು ಉತ್ತಮ ಸೀಮಿತ-ಓವರ್‌ಗಳ ಬೌಲರ್‌ನ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ತುಂಬಾ ಧೈರ್ಯಶಾಲಿಯಾಗಿದ್ದಾರೆ, ಅವರು ಚೆಂಡನ್ನು ತಿರುಗಿಸುವ ಸಾಮರ್ಥ್ಯ ಹೊಂದಿದ್ದಾರೆ, ವೇಗವನ್ನು ಬದಲಾಯಿಸುತ್ತಾರೆ. ಉತ್ತಮವಾಗಿ ಬ್ಯಾಟಿಂಗ್ ಕೂಡಾ ಮಾಡುತ್ತಾರೆ ಎಂದು ವೆಟ್ಟೋರಿ ಹೇಳಿದರು.

ಸನ್ ರೈಸರ್ಸ್ ಹೈದರಾಬಾದ್ ಸಾಯಿ ಕಿಶೋರ್ ನನ್ನು ಮೂಲ ಬೆಲೆಗೆ ಅಥವಾ ಇನ್ನೂ ಹೆಚ್ಚಿನ ಬೆಲೆಗೆ ಖರೀದಿಸಲು ಬಯಸಿದ್ದರು. ಪಂಜಾಬ್ ಕಿಂಗ್ಸ್ ಕಿಶೋರ್ ಗೆ ರೂ.90 ಲಕ್ಷಕ್ಕೆ ಬಿಡ್ ಮಾಡಿತ್ತು. ತದನಂತರ ರೂ. 2 ಕೋಟಿಗೆ ಗುಜರಾತ್ ಟೈಟನ್ಸ್ ಅವರನ್ನು ಖರೀದಿಸಿತ್ತು. ಈ ಬಾರಿಯ ಟೂರ್ನಿಯಲ್ಲಿ 12 ವಿಕೆಟ್ ಪಡೆಯುವುದರೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದವರ ಟಾಪ್ ಹತ್ತರ ಪಟ್ಟಿಯಲ್ಲಿ ಸಾಯಿ ಕಿಶೋರ್ 6ನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.