IPL 2024: ಮಳೆಯಿಂದ GT ವಿರುದ್ಧದ ಪಂದ್ಯ ರದ್ದು, ಪ್ಲೇ ಆಫ್ ಗೆ ಅರ್ಹತೆ ಪಡೆದ ಸನ್ ರೈಸರ್ಸ್!
ಆತಿಥೇಯ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯ ಮಳೆಯಿಂದ ಒಂದು ಎಸೆತವೂ ಇಲ್ಲದೆ ರದ್ದಾಗಿದೆ. ಇದರಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ಪ್ಲೇ ಆಫ್ ಗೆ ಗುರುವಾರ ಅರ್ಹತೆ ಪಡೆಯಿತು.

ಹೈದರಾಬಾದ್: ಆತಿಥೇಯ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯ ಮಳೆಯಿಂದ ಒಂದು ಎಸೆತವೂ ಇಲ್ಲದೆ ರದ್ದಾಗಿದೆ. ಇದರಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ಪ್ಲೇ ಆಫ್ ಗೆ ಗುರುವಾರ ಅರ್ಹತೆ ಪಡೆಯಿತು.
ಪ್ರಸ್ತುತ ಅಂಕಪಟ್ಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಅಗ್ರಸ್ಥಾನ ಪಡೆದುಕೊಂಡಿದ್ದು, ನಂತರ ಮೂರನೇ ಸ್ಥಾನವನ್ನು ಸನ್ ರೈಸರ್ಸ್ ಪಡೆದುಕೊಂಡಿತು. ಜಿಟಿ ವಿರುದ್ಧದ ಪಂದ್ಯ ರದ್ದುಗೊಂಡಿದ್ದರಿಂದ ಒಂದು ಅಂಕವನ್ನು ಪಡೆದುಕೊಂಡ ಸನ್ ರೈಸರ್ಸ್ ಒಂದು ಪಂದ್ಯ ಬಾಕಿಯಿರುವಂತೆಯೇ 15 ಅಂಕಗಳನ್ನು ಗಳಿಸಿತು. ಮೇ 19 ರಂದು ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಎದುರಿಸಲಿದೆ.

2022ರ ಚಾಂಪಿಯನ್ ಹಾಗೂ ಕಳೆದ ಸಾಲಿನ ಗುಜರಾತ್ ಟೈಟನ್ಸ್ ಪ್ಲೇ ಆಫ್ ರೇಸ್ ನಿಂದ ಹೊರಗೆ ಬಿದ್ದಿದೆ. ಅವರು ಹೀಗೆ 14 ಪಂದ್ಯಗಳಿಂದ 12 ಅಂಕಗಳೊಂದಿಗೆ ಸೀಸನ್ ಅಂತ್ಯಗೊಳಿಸಿದರು. ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ (14) ಆರ್ ಸಿಬಿ (12) ಡೆಲ್ಲಿ ಕ್ಯಾಪಿಟಲ್ಸ್ (14) ಮತ್ತು ಲಕ್ನೋ ಸೂಪರ್ ಜೈಂಟ್ಸ್ (12) ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಪೈಪೋಟಿ ನಡೆಸಲಿವೆ.
ಶುಕ್ರವಾರ ಒಂದು ವೇಳೆ ಲಕ್ನೋ ಸೂಪರ್ ಜೈಂಟ್ಸ್ ಮುಂಬೈ ವಿರುದ್ಧ ಗೆದ್ದರೆ 14 ಅಂಕಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಲಿದ್ದಾರೆ. ಆದರೆ, ಸಿಎಸ್ ಕೆ ಆರ್ ಸಿ ವಿರುದ್ಧ ಗೆದ್ದರೆ ಅಥವಾ ಮಳೆಯಿಂದ ಪಂದ್ಯ ರದ್ದುಗೊಂಡರೆ ನಾಲ್ಕನೇ ಸ್ಥಾನಕ್ಕೆ ಏರಲಿದೆ. ಒಂದು ವೇಳೆ ಆರ್ ಸಿಬಿ 18 ರನ್ ಗಳಿಂದ ಅಥವಾ 11 ಎಸೆತ ಇರುವಂತೆಯೇ ಗೆದ್ದರೆ ನೆಟ್ ರನ್ ರೇಟ್ ಆಧಾರದ ಮೇಲೆ 14 ಅಂಕ ಗಳಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



