WPL 2024: RCBಗೆ ಮತ್ತೊಂದು ಸೋಲು, ಕೊನೆಗೂ ಗೆಲುವಿನ ಖಾತೆ ತೆರೆದ ಗುಜರಾತ್ ಜೈಂಟ್ಸ್, ಸೋತರೂ ಅಂಕಪಟ್ಟಿಯಲ್ಲಿ ಬದಲಾವಣೆ ಇಲ್ಲ!
ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಸೋಲು ಕಂಡಿದ್ದು, ಈ ವರೆಗೂ ಟೂರ್ನಿಯಲ್ಲಿ ಗೆಲುವೇ ಕಾಣದ ಗುಜರಾತ್ ತಂಡ ಆರ್ ಸಿಬಿ ವಿರುದ್ಧ 19 ರನ್ ಗಳ ಜಯ ದಾಖಲಿಸಿದೆ.

ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಸೋಲು ಕಂಡಿದ್ದು, ಈ ವರೆಗೂ ಟೂರ್ನಿಯಲ್ಲಿ ಗೆಲುವೇ ಕಾಣದ ಗುಜರಾತ್ ತಂಡ ಆರ್ ಸಿಬಿ ವಿರುದ್ಧ 19 ರನ್ ಗಳ ಜಯ ದಾಖಲಿಸಿದೆ.
ನಾಯಕಿ ಬೆತ್ ಮೂನಿ(85*) ಮತ್ತು ಲಾರಾ ವೊಲ್ವಾರ್ಡ್ಟ್(76) ಅವರ ಆಕರ್ಷಕ ಅರ್ಧಶತಕ ನೆರವಿನಿಂದ ಗುಜರಾತ್ ಜೈಂಟ್ಸ್(Gujarat Giants) ತಂಡ ಬಲಿಷ್ಠ ಆರ್ಸಿಬಿ(Royal Challengers Bangalore) ವಿರುದ್ಧ 19 ರನ್ಗಳ ಗೆಲುವು ಸಾಧಿಸಿದ್ದು, ಇದು ಟೂರ್ನಿಯಲ್ಲಿ ತಂಡದ ಮೊದಲ ಗೆಲುವಾಗಿದೆ.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ಆರಂಭಿಕ ಆಟಗಾರ್ತಿಯರಾದ ಬೆತ್ ಮೂನಿ ಮತ್ತು ಲಾರಾ ವೊಲ್ವಾರ್ಡ್ಟ್ ಅವರ ಆಕ್ರಮಣಕಾರಿ ಬ್ಯಾಟಿಂಗ್ನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 199 ರನ್ ಗಳಿಸಿ ಆರ್ ಸಿಬಿಗೆ ಬೃಹತ್ ಗುರಿ ನೀಡಿತು. ಈ ಮೊತ್ತವನ್ನು ಬೆನ್ನು ಹತ್ತಿದ ಆರ್ ಸಿಬಿ ಒಂದು ಹಂತದ ವರೆಗೆ ದಿಟ್ಟ ರೀತಿಯಲ್ಲಿ ಬೆನ್ನಟ್ಟಿತ್ತು. ಆದರೆ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತ ತಂಡಕ್ಕೆ ದುಬಾರಿಯಾಯಿತು.
ಜಾರ್ಜಿಯಾ ವೇರ್ಹಾಮ್, ಸೋಫಿ ಮೊಲಿನೆಕ್ಸ್ ಮತ್ತು ಸಿಮ್ರಾನ್ ಬಹದ್ದೂರ್ ರನೌಟ್ ತಂಡಕ್ಕೆ ದುಬಾರಿಯಾಗ ತಂಡ ಸೋಲಿನತ್ತ ಸರಿಯುವಂತೆ ಮಾಡಿತು. ಅಂತಿಮವಾಗಿ ಆರ್ ಸಿಬಿ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 180 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಈ ಗೆಲುವಿನ ಮೂಲಕ ಸತತ 4 ಸೋಲಿನಿಂದ ಕಂಗೆಟ್ಟಿದ್ದ ಗುಜರಾತ್ ಜೈಂಟ್ಸ್ ಮೊದಲ ಗೆಲುವಿನ ನಗೆ ಬೀರಿತು.
ಸೋತರೂ ಅಂಕಪಟ್ಟಿಯಲ್ಲಿ ಬದಲಾವಣೆ ಇಲ್ಲ!
ಇನ್ನು ಇಂದಿನ ಪಂದ್ಯವನ್ನು ಸೋತಿರುವ ಆರ್ ಸಿಬಿ ಅಂಕ ಪಟ್ಟಿಯಲ್ಲಿ ತನ್ನ 2ನೇ ಸ್ಥಾನದಲ್ಲೇ ಮುಂದುವರೆದಿದೆ. 6 ಪಂದ್ಯಗಳಲ್ಲಿ 3 ಸೋಲು, 3 ಗೆಲುವಿನೊಂದಿಗೆ 6 ಅಂಕ ಗಳಿಸಿರುವ ಆರ್ ಸಿಬಿ +0.038 ನೆಟ್ ರನ್ ರೇಟ್ ನೊಂದಿಗೆ 2ನೇ ಸ್ಥಾನದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



