ಕ್ರಿಕೆಟ್

WPL 2024: ಗುಜರಾತ್ ವಿರುದ್ಧ ಯುಪಿಗೆ 6 ವಿಕೆಟ್ ಗಳ ಜಯ!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಉತ್ತರ ಪ್ರದೇಶ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ನ ಡಬ್ಲ್ಯುಪಿಎಲ್ 2024 ಪಂದ್ಯದಲ್ಲಿ ಗುಜರಾತ್ ವಿರುದ್ಧ ಉತ್ತರ ಪ್ರದೇಶ ತಂಡ 6 ವಿಕೆಟ್ ಗಳ ಜಯ ಗಳಿಸಿದೆ.

WPL 2024: ಗುಜರಾತ್ ವಿರುದ್ಧ ಯುಪಿಗೆ 6 ವಿಕೆಟ್ ಗಳ ಜಯ!
ಡಬ್ಲ್ಯುಪಿಎಲ್ 2024 — online desk
Published On :

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಉತ್ತರ ಪ್ರದೇಶ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ನ ಡಬ್ಲ್ಯುಪಿಎಲ್ 2024 ಪಂದ್ಯದಲ್ಲಿ ಗುಜರಾತ್ ವಿರುದ್ಧ ಉತ್ತರ ಪ್ರದೇಶ ತಂಡ 6 ವಿಕೆಟ್ ಗಳ ಜಯ ಗಳಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಉತ್ತರ ಪ್ರದೇಶ ವಾರಿಯರ್ಸ್ ನಿಗದಿತ 20 ಓವರ್ ಗಳಲ್ಲಿ ಗುಜರಾತ್ ತಂಡವನ್ನು 5 ವಿಕೆಟ್ ನಷ್ಟಕ್ಕೆ 142 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು.

ಗುಜರಾತ್ ಪರ ಲಾರಾ ವೊಲ್ವಾರ್ಡ್ಟ್ 26 ಎಸೆತಗಳಲ್ಲಿ 28 ರನ್ ಗಳಿಸಿದರೆ, ಬೆತ್ ಮೂನಿ (16 ಎಸೆತಗಳಲ್ಲಿ 16 ರನ್) ಹರ್ಲೀನ್ ಡಿಯೋಲ್ (24 ಎಸೆತಗಳಲ್ಲಿ 18 ರನ್) ಫೋಬೆ ಲಿಚ್ಫೀಲ್ಡ್ (26 ಎಸೆತಗಳಲ್ಲಿ 35 ರನ್) ಆಶ್ಲೀಗ್ ಗಾರ್ಡ್ನರ್ (17 ಎಸೆತಗಳಲ್ಲಿ 30 ರನ್) ಗಳಿಸಿದರು.

ಉತ್ತರ ಪ್ರದೇಶ ತಂಡ ಗುಜರಾತ್ ನೀಡಿದ್ದ ಸರಳ ರನ್ ಗುರಿಯನ್ನು ತಲುಪಿತ್ತು. 15.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 143 ರನ್ ಗಳಿಸುವ ಮೂಲಕ ಯುಪಿ ವಾರಿಯರ್ಸ್ ಗೆಲುವು ಸಾಧಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.