ಭಾರತ ಸೋಲಿಗೂ ಮುನ್ನ 'ಅಲ್ಲಾಹು ಅಕ್ಬರ್' ಘೋಷಣೆ ಕೂಗುವಂತೆ ಪ್ರೇಕ್ಷಕರತ್ತ ಕೈಬಿಸಿದ ಬಾಂಗ್ಲಾ ನಾಯಕ, ವಿಡಿಯೋ ವೈರಲ್!
ಭಾರತ ತಂಡವು ಗೆಲುವಿನಿಂದ ಕೇವಲ ಒಂದು ವಿಕೆಟ್ ಇರುವಾಗ, ತಮೀಮ್ ಕ್ರೀಡಾಂಗಣದಲ್ಲಿದ್ದ ಬಾಂಗ್ಲಾದೇಶದ ಬೆಂಬಲಿಗರನ್ನು ಹುರಿದುಂಬಿಸಲು ಪ್ರೇರೇಪಿಸಿದರು.

ಬಾಂಗ್ಲಾದೇಶ ಅಂಡರ್-19 ತಂಡ ACC ಪುರುಷರ ಅಂಡರ್-19 ಏಷ್ಯಾ ಕಪ್ 2024ರ ಫೈನಲ್ನಲ್ಲಿ ಭಾರತವನ್ನು ಸೋಲಿಸುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಭಾರತವನ್ನು 59 ರನ್ಗಳಿಂದ ಸೋಲಿಸಿತು.
ಪಂದ್ಯದ ವೇಳೆ ಬಾಂಗ್ಲಾದೇಶ ತಂಡದ ನಾಯಕ ಅಜೀಜುಲ್ ಹಕೀಮ್ ತಮೀಮ್ ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಸ್ತವವಾಗಿ, ಭಾರತ ತಂಡವು ಗೆಲುವಿನಿಂದ ಕೇವಲ ಒಂದು ವಿಕೆಟ್ ಇರುವಾಗ, ತಮೀಮ್ ಕ್ರೀಡಾಂಗಣದಲ್ಲಿದ್ದ ಬಾಂಗ್ಲಾದೇಶದ ಬೆಂಬಲಿಗರನ್ನು ಹುರಿದುಂಬಿಸಲು ಪ್ರೇರೇಪಿಸಿದರು. ಈ ವೇಳೆ ಬಾಂಗ್ಲಾ ಬೆಂಬಲಿಗರು 'ಅಲ್ಲಾಹು ಅಕ್ಬರ್' ಘೋಷಣೆಗಳನ್ನು ಕೂಗಿದ್ದು ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.
ತಮೀಮ್ ಅಭಿಮಾನಿಗಳನ್ನು 'ಅಲ್ಲಾಹು ಅಕ್ಬರ್' ಎಂದು ಕೂಗುವಂತೆ ಪ್ರೋತ್ಸಾಹಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದಾಗಿ ಈ ಘಟನೆ ವಿವಾದಕ್ಕೆ ಕಾರಣವಾಗಿತ್ತು. ಕೆಲವರು ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಪರಿಗಣಿಸಿದ್ದರೆ ಮತ್ತೆ ಕೆಲವರು ಇದನ್ನು ತಮ್ಮ ಬೆಂಬಲಿಗರನ್ನು ತೊಡಗಿಸಿಕೊಳ್ಳಲು ನಾಯಕನ ತಂತ್ರವೆಂದು ಪರಿಗಣಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



