ಕೊಹ್ಲಿ ಹೊರತುಪಡಿಸಿ, ಫಾರ್ಮ್ ಗೆ ಮರಳಲು RCB ಬ್ಯಾಟರ್ ಗಳು ಹೆಣಗಾಟ: ಆಂಡಿ ಫ್ಲವರ್
ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಫಾರ್ಮ್ ಹೊರತಾಗಿಯೂ, ಇತರ ಆರ್ ಸಿಬಿ ಬ್ಯಾಟರ್‌ಗಳು "ಫಾರ್ಮ್ ಮತ್ತು ಆತ್ಮವಿಶ್ವಾಸ" ಕ್ಕಾಗಿ ಹೆಣಗಾಡುತ್ತಿದ್ದಾರೆ ಎಂದು ತಮ್ಮ ತಂಡದ ನಾಲ್ಕನೇ ಸೋಲಿನ ನಂತರ ಮುಖ್ಯ ಕೋಚ್ ಆಂಡಿ ಫ್ಲವರ್ ಹೇಳಿದ್ದಾರೆ.

ಜೈಪುರ: ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಫಾರ್ಮ್ ಹೊರತಾಗಿಯೂ, ಇತರ ಆರ್ ಸಿಬಿ ಬ್ಯಾಟರ್‌ಗಳು "ಫಾರ್ಮ್ ಮತ್ತು ಆತ್ಮವಿಶ್ವಾಸ" ಕ್ಕಾಗಿ ಹೆಣಗಾಡುತ್ತಿದ್ದಾರೆ ಎಂದು ತಮ್ಮ ತಂಡದ ನಾಲ್ಕನೇ ಸೋಲಿನ ನಂತರ ಮುಖ್ಯ ಕೋಚ್ ಆಂಡಿ ಫ್ಲವರ್ ಹೇಳಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಕೊಹ್ಲಿ (113) ಅಮೋಘ ಶತಕವನ್ನು ಬಾರಿಸಿದರು ಆದರೆ ಆರ್‌ಸಿಬಿ ಮೂರು ವಿಕೆಟ್‌ಗೆ 183 ರನ್ ಗಳಿಸಲು ಸಾಧ್ಯವಾಗಲಿಲ್ಲ, ಈ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ಸುಲಭವಾಗಿ ದಾಟಿತು. ಜೋಸ್ ಬಟ್ಲರ್ 58 ಎಸೆತಗಳಲ್ಲಿ 100 ರನ್ ಗಳಿಸಿದರು.
ಪಂದ್ಯ ಮುಗಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂಡಿ ಫ್ಲವರ್,"ನಾವು ಐವರಲ್ಲಿ ಒಬ್ಬರಾಗಿದ್ದೇವೆ ಮತ್ತು ಯಾವುದೇ ತಂಡವು ಆ ಸ್ಥಾನದಲ್ಲಿ ಬರಲು ಬಯಸಲ್ಲ. ಹೌದು, ನಮ್ಮ ಬ್ಯಾಟಿಂಗ್‌ನಲ್ಲಿ ಕೆಲವು ಸಮಸ್ಯೆಗಳಿವೆ. ವಿರಾಟ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ, ಇತರ ಬ್ಯಾಟರ್ ಗಳು ಫಾರ್ಮ್ ಮತ್ತು ಆತ್ಮವಿಶ್ವಾಸಕ್ಕಾಗಿ ಹೆಣಗಾಡುತ್ತಿದ್ದಾರೆ ಎಂದು ಫ್ಲವರ್ ಹೇಳಿದರು.
ಬ್ಯಾಟರ್ ಗಳಲ್ಲಿ ಆತ್ಮವಿಶ್ವಾಸ ತುಂಬಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಈ ಸ್ಪರ್ಧೆಯಲ್ಲಿ ನೀವು ನೋಡಿದಂತೆ, ಸ್ಕೋರ್‌ಗಳು ಮತ್ತು ತಂಡಗಳ ಆಕ್ರಮಣಶೀಲತೆಯು ಕೇವಲ ಒಂದು ರೀತಿಯಲ್ಲಿ ಮಾತ್ರ ಹೋಗುತ್ತಿದೆ. ಹಾಗಾಗಿ ಎದುರಾಳಿಗಳನ್ನು ಒತ್ತಡಕ್ಕೆ ಸಿಲುಕಿಸಲು, ಆರ್ ಸಿಬಿ ಆಟಗಾರರು ಫಾರ್ಮ್ ಗೆ ಮರಳುವ ಅಗತ್ಯಲಿದೆ. ನಾವು ಇನ್ನೂ ಆ ಫಾರ್ಮ್ ಕಂಡುಕೊಂಡಿಲ್ಲ ಎಂದರು.
ಕೊಹ್ಲಿ 72 ಎಸೆತಗಳಲ್ಲಿ ಅಜೇಯ 12 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದರು ಆದರೆ ನಾಯಕ ಫಾಫ್ ಡು ಪ್ಲೆಸಿಸ್ (33 ಎಸೆತಗಳಲ್ಲಿ 44 ಹೊರತುಪಡಿಸಿ ಇತರ ಬ್ಯಾಟರ್‌ಗಳಿಂದ ಯಾವುದೇ ಬೆಂಬಲ ಸಿಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




