ಅನುಷ್ಕಾ ಜೊತೆ ಡ್ಯಾನ್ಸ್ ಮಾಡುವಾಗ ಕೊಹ್ಲಿಗೆ ಸ್ನಾಯು ಸೆಳೆತ? ಜೋಪಾನ ಅಂದ್ರು RCB ಫ್ಯಾನ್ಸ್, ವಿಡಿಯೋ!
ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಜೊತೆ ಜಿಮ್ ನಲ್ಲಿ ಒಂದೇ ಕಾಲಿನಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ಆರ್ ಸಿಬಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಜೊತೆ ಜಿಮ್ ನಲ್ಲಿ ಒಂದೇ ಕಾಲಿನಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ಆರ್ ಸಿಬಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಐಪಿಎಲ್ 16ನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಪಂದ್ಯಗಳಲ್ಲಿ ಸಾಕಷ್ಟು ಅಗ್ರೆಸಿವ್ ಆಗಿ ಕಾಣುವ ವಿರಾಟ್ ಕೊಹ್ಲಿ ಪತ್ನಿ ಜೊತೆ ಡ್ಯಾನ್ಸ್ ಮಾಡುವಾಗ ನೋವಿನಿಂದ ಕುಳಿತುಕ್ಕೊಳ್ಳುತ್ತಾರೆ. ಇದನ್ನು ಕಂಡ ಅಭಿಮಾನಿಗಳು ಜೋಪಾನ್ ಐಪಿಎಲ್ ಟೂರ್ನಿ ಇರುವುದರಿಂದ ಅತಿರೇಕದ ಕೆಲಸ ಮಾಡಬೇಡಿ ಎಂದು ಕೇಳುತ್ತಿದ್ದಾರೆ.
ಅನುಷ್ಕಾ ತಮ್ಮ Instagram ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ದಂಪತಿ ಪಂಜಾಬಿ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಕ್ಯಾಮೆರಾ ಮುಂದೆ ಒಂದು ರೀತಿ ಹೆಜ್ಜೆ ಹಾಕಲು ಪ್ರಾರಂಭಿಸುತ್ತಾರೆ. ಅನುಷ್ಕಾ ಬಿಳಿ ಶರ್ಟ್ ಮತ್ತು ಮಸುಕಾದ ನೀಲಿ ಜೀನ್ಸ್ನಲ್ಲಿ ಕಾಣಿಸಿಕೊಂಡರೆ, ವಿರಾಟ್ ಕಪ್ಪು ಟೀ ಮತ್ತು ಬೂದು ಪ್ಯಾಂಟ್ ಧರಿಸಿದ್ದರು.
ಇಬ್ಬರೂ ಶಕ್ತಿಯುತವಾಗಿ ಒಟ್ಟಿಗೆ ನೃತ್ಯ ಮಾಡಿದ್ದರು. ಆದರೆ ವಿರಾಟ್ ಅವರು ಸ್ನಾಯು ಸೆಳೆತಕ್ಕೆ ಒಳಗಾಗಿದ್ದರಿಂದ ನೃತ್ಯವನ್ನು ಮಧ್ಯದಲ್ಲಿ ನಿಲ್ಲಿಸಿದರು. ಇದನ್ನು ಕಂಡು ಅನುಷ್ಕಾ ನಗುತ್ತಾರೆ. ಈ ವೀಡಿಯೊಗೆ ಡ್ಯಾನ್ಸ್ ಪೆ ಚಾನ್ಸ್ ಎಂಬ ಶೀರ್ಷಿಕೆ ನೀಡಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.
ಇದಕ್ಕೆ ಅಭಿಮಾನಿಗಳು ಓಹ್, ಐಪಿಎಲ್ ಇನ್ನೂ ನಡೆಯುತ್ತಿದೆ ಸಹೋದರ, ದಯವಿಟ್ಟು ಗಾಯದ ಬಗ್ಗೆ ಎಚ್ಚರದಿಂದಿರಿ ಎಂದು ಆತಂಕ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


