3 ನೇ ಏಕ ದಿನ ಪಂದ್ಯ: ಆಸ್ಟ್ರೇಲಿಯಾಗೆ 66 ರನ್ ಗಳ ಜಯ, ಭಾರತಕ್ಕೆ ಸರಣಿ
ರಾಜ್ ಕೋಟ್ ನಲ್ಲಿ ನಡೆದ ಆಸ್ಟ್ರೆಲಿಯ- ಭಾರತದ ನಡುವಿನ 3 ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 66 ರನ್ ಗಳ ಜಯ ಗಳಿಸಿದೆ.

ರಾಜ್ ಕೋಟ್: ರಾಜ್ ಕೋಟ್ ನಲ್ಲಿ ನಡೆದ ಆಸ್ಟ್ರೆಲಿಯ- ಭಾರತದ ನಡುವಿನ 3 ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 66 ರನ್ ಗಳ ಜಯ ಗಳಿಸಿದೆ.
ಆದರೆ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದಿರುವ ಭಾರತ ಸರಣಿಯನ್ನು ವಶಪಡಿಸಿಕೊಂಡಿದೆ. ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತಕ್ಕೆ 352 ರನ್ ಕಲೆ ಹಾಕಿತ್ತು. ಆಸ್ಟ್ರೇಲಿಯಾ ನೀಡಿದ ಗುರಿ ಬೆನ್ನಟ್ಟಿದ ಭಾರತಕ್ಕೆ 49.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 286 ರನ್ ಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು.
ಭಾರತದ ಪರ ರೋಹಿತ್ ಶರ್ಮಾ 57 ಎಸೆತಗಳಲ್ಲಿ 81 ರನ್ ಗಳಿಸಿದರಾದರೂ ಏಕಾಂಗಿ ಹೋರಾಟವಾಯಿತು. ವಿರಾಟ್ ಕೊಹ್ಲಿ (61 ಎಸೆತಗಳಲ್ಲಿ 56 ರನ್) ಹಾಗೂ ಶ್ರೇಯಸ್ ಅಯ್ಯರ್ (43 ಎಸೆತಗಳಲ್ಲಿ 48 ರನ್) ಗಳಿಸಿ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದ್ದರು. ಆದರೆ ಮ್ಯಾಕ್ಸ್ ವೆಲ್ ಈ ಜೊತೆಯಾಟವನ್ನು ಮುರಿದ ಪರಿಣಾಮ ಭಾರತದ ಗೆಲುವಿನ ಆಸೆ ಕಮರಿತು.
ನಂತರ ಬಂದ ಬ್ಯಾಟ್ಸ್ಮನ್ ಗಳು ಆಸ್ಟ್ರೇಲಿಯಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೇ ಅಂತಿಮವಾಗಿ ಭಾರತ 286 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


