ಬಿಸಿಸಿಐ ಯಡವಟ್ಟು!: ವಿಶ್ವಕಪ್ ಫೈನಲ್ಸ್ ಗೆ ಕಪಿಲ್ ದೇವ್ ಗೆ ಆಹ್ವಾನವೇ ಇಲ್ಲ!?
ಅಹ್ಮದಾಬಾದ್ ನಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ವಿಶ್ವಕಪ್ ಫೈನಲ್ಸ್ ಪಂದ್ಯ ನಡೆಯುತ್ತಿದ್ದು, ಭಾರತ ಆಸ್ಟ್ರೇಲಿಯಾಗೆ 241 ರನ್ ಗಳ ಗುರಿ ನೀಡಿದೆ.

ನವದೆಹಲಿ: ಅಹ್ಮದಾಬಾದ್ ನಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ವಿಶ್ವಕಪ್ ಫೈನಲ್ಸ್ ಪಂದ್ಯ ನಡೆಯುತ್ತಿದ್ದು, ಭಾರತ ಆಸ್ಟ್ರೇಲಿಯಾಗೆ 241 ರನ್ ಗಳ ಗುರಿ ನೀಡಿದೆ.
ಮೂರನೇ ವಿಶ್ವಕಪ್ ನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿರುವ ಭಾರತದ ಕ್ರಿಕೆಟ್ ಮಂಡಳಿ ದೊಡ್ಡ ಯಡವಟ್ಟು ಮಾಡಿರುವುದು ವರದಿಯಾಗಿದೆ.
ಮೊದಲ ಬಾರಿಗೆ ವಿಶ್ವಕಪ್ ನ್ನು ಗೆದ್ದ ಭಾರತ ತಂಡದ ನಾಯಕನಾಗಿದ್ದ ಕಪಿಲ್ ದೇವ್ ಗೆ ಈ ಪಂದ್ಯಕ್ಕೆ ಆಹ್ವಾನ ನೀಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಪಂದ್ಯ ಆರಂಭಕ್ಕೂ ಮುನ್ನ ಎಬಿಪಿ ನ್ಯೂಸ್ ಜೊತೆ ಮಾತನಾಡಿದ್ದ ಕಪಿಲ್ ದೇವ್, ತಮ್ಮನ್ನು ಫೈನಲ್ಸ್ ಪಂದ್ಯಕ್ಕಾಗಿ ಅಹ್ಮದಾಬಾದ್ ಗೆ ಆಹ್ವಾನಿಸಿಲ್ಲ ಎಂದು ಹೇಳಿದ್ದಾರೆ.
ನೀವು ನನ್ನನ್ನು ಆಹ್ವಾನಿಸಿದ್ದೀರಿ ನಾನು ಬಂದಿದ್ದೀನಿ, ಅವರು ನನ್ನನ್ನು ಆಹ್ವಾನಿಸಿಲ್ಲ ನಾನು ಹೋಗಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ.
ನನಗೆ 1983 ರ ವಿಶ್ವಕಪ್ ಆಡಿದ್ದ ಇಡೀ ತಂಡದ ಸದಸ್ಯರೊಂದಿಗೆ ಫೈನಲ್ಸ್ ಪಂದ್ಯ ವೀಕ್ಷಿಸಲು ಬಯಸಿದ್ದೆ. ಆದರೆ ಅಲ್ಲಿ ಬಹಳಷ್ಟು ಜವಾಬ್ದಾರಿಗಳಿರುತ್ತವೆ ಕೆಲವೊಮ್ಮೆ ಜನರು ಮರೆಯುತ್ತಾರೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಹೇಳಿದ್ದಾರೆ. ವಿಶ್ವಕಪ್ ನ ಅನೇಕ ವಿಜೇತ ತಂಡಗಳ ಮಾಜಿ ನಾಯಕರು ಈ ಪಂದ್ಯವನ್ನು ವೀಕ್ಷಿಸಲು ನೆರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


