ಕ್ರಿಕೆಟ್

ಐಪಿಎಲ್ 2023: ಲಕ್ನೋ ವಿರುದ್ಧ ಪಂಜಾಬ್​ಗೆ ಎರಡು ವಿಕೆಟ್ ಗಳ ರೋಚಕ ಜಯ

ಲಖನೌನ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಶನಿವಾರ ನಡೆದ ಐಪಿಎಲ್​ನ 21ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಎರಡು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ.

ಐಪಿಎಲ್ 2023: ಲಕ್ನೋ ವಿರುದ್ಧ ಪಂಜಾಬ್​ಗೆ ಎರಡು ವಿಕೆಟ್ ಗಳ ರೋಚಕ ಜಯ
ಪಂಜಾಬ್ ಕಿಂಗ್ಸ್ ತಂಡದ ಆಟಗಾರರು
Published On :

ಲಖನೌ: ಲಖನೌನ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಶನಿವಾರ ನಡೆದ ಐಪಿಎಲ್​ನ 21ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಎರಡು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ.

ಟಾಸ್ ಸೋತರು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ತಂಡ ನಾಯಕ ರಾಹುಲ್ ಅವರ ಅರ್ಧಶತಕದ ನೆರವಿನಿಂದ ನಿಗಿತ 20 ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 159 ರನ್ ಗಳಿಸಿತು.

ಗೆಲುವಿಗೆ 160 ರನ್ ಗಳ ಗುರಿ ಬೆನ್ನಟ್ಟಿದ ಪಂಜಾಬ್​ ಕಿಂಗ್ಸ್, 19.3 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 161 ರನ್​ ಗಳಿಸುವ ಮೂಲಕ 2 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿತು.

ಪಂಜಾಬ್​ ಪರ ಸಿಕಂದರ್ ರಜಾ ಏಕಾಂಗಿ ಹೋರಾಟ ನಡೆಸಿದರು. ಸಿಕಂದರ್ ರಜಾ 41 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಫೊರ್​ ಮೂಲಕ 57 ರನ್​ ಗಳಿಸಿದರು.

ಲಕ್ನೋ ಪರ ಕೆಎಲ್​ ರಾಹುಲ್​ 56 ಎಸೆತದಲ್ಲಿ 1 ಸಿಕ್ಸ್ ಮತ್ತು 8 ಪೋರ್​ ಮೂಲಕ 74 ರನ್​ ಗಳಿಸಿದರು. ಉಳಿದಂತೆ ಲಕ್ನೋ ಪರ, ಕೈಲ್ ಮೇಯರ್ಸ್ 29 ರನ್, ದೀಪಕ್ ಹೂಡಾ 2 ರನ್, ಕೃನಾಲ್ ಪಾಂಡ್ಯ 18 ರನ್, ಮಾರ್ಕಸ್ ಸ್ಟೋನಿಸ್ 15 ರನ್, ನಿಕೋಲಸ್ ಪೂರನ್ ಶೂನ್ಯ, ಆಯುಷ್ ಬಡೋನಿ 5 ರನ್, ರವಿ ಬಿಷ್ಣೋಯ್​ 3 ರನ್ ಗಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.