ಕ್ರಿಕೆಟ್

ಭಾರತ- ದಕ್ಷಿಣ ಆಫ್ರಿಕಾ ಪಂದ್ಯ ರದ್ದು ಹಿನ್ನೆಲೆ ಟಿಕೆಟ್ ಪಡೆದಿದ್ದವರಿಗೆ ಶೇ.50 ರಷ್ಟು ಹಣ ವಾಪಸ್!

ನೆನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಪಂದ್ಯ ಮಳೆಯ ಕಾರಣದಿಂದಾಗಿ ರದ್ದುಗೊಂಡ ಹಿನ್ನೆಲೆಯಲ್ಲಿ ಪಂದ್ಯ ವೀಕ್ಷಿಸಲು ಟಿಕೆಟ್ ಪಡೆದವರಿಗೆ ಶೇ.50 ರಷ್ಟು ಹಣ ವಾಪಸ್ ಸಿಗಲಿದೆ.

ಭಾರತ- ದಕ್ಷಿಣ ಆಫ್ರಿಕಾ ಪಂದ್ಯ ರದ್ದು ಹಿನ್ನೆಲೆ ಟಿಕೆಟ್ ಪಡೆದಿದ್ದವರಿಗೆ ಶೇ.50 ರಷ್ಟು ಹಣ ವಾಪಸ್!
ಚಿನ್ನಸ್ವಾಮಿ ಕ್ರೀಡಾಂಗಣ
Published On :

ಬೆಂಗಳೂರು: ನೆನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಪಂದ್ಯ ಮಳೆಯ ಕಾರಣದಿಂದಾಗಿ ರದ್ದುಗೊಂಡ ಹಿನ್ನೆಲೆಯಲ್ಲಿ ಪಂದ್ಯ ವೀಕ್ಷಿಸಲು ಟಿಕೆಟ್ ಪಡೆದವರಿಗೆ ಶೇ.50 ರಷ್ಟು ಹಣ ವಾಪಸ್ ಸಿಗಲಿದೆ. 

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (ಕೆಎಸ್ ಸಿಎ) ಈ ನಿರ್ಧಾರವನ್ನು ಘೋಷಿಸಿದೆ. 3.3 ಓವರ್ ಗಳ ಪಂದ್ಯದ ವೇಳೆಗೆ ಮಳೆಯ ಪರಿಣಾಮ ಪಂದ್ಯ ರದ್ದುಗೊಂಡಿತ್ತು. 5 ಪಂದ್ಯಗಳ ಸರಣಿ ಇದಾಗಿದ್ದು, ನೆನ್ನೆಯ ಪಂದ್ಯ ಅತ್ಯಂತ ಕುತೂಹಲ ಮೂಡಿಸಿತ್ತು. ಮಳೆಯ ಕಾರಣ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಉಭಯ ತಂಡಗಳಿಗೂ ಅಂಕ ದೊರೆತು 2-2 ಅಂಕಗಳೊಂದಿಗೆ ಎರಡೂ ತಂಡಗಳಿಗೆ ಸಮಾನ ಅಂಕ ದೊರೆತಿದೆ.

ಷರತ್ತು ಮತ್ತು ನಿಬಂಧನೆಗಳ ಪ್ರಕಾರ ಕೇವಲ ಒಂದು ಎಸೆತ ಪೂರ್ಣಗೊಂಡು ಪಂದ್ಯ ರದ್ದಾದರೂ ಹಣ ವಾಪಸ್ ನೀಡಲು ಸಾಧ್ಯವಿಲ್ಲ. ಆದರೆ ಕೆಎಸ್ ಸಿಎ ಕ್ರೀಡಾಪ್ರೇಮಿಗಳಿಗೆ ಖರೀದಿಸಿದ್ದ ಟಿಕೆಟ್ ಗಳಿಗೆ ಶೇ.50 ರಷ್ಟು ಹಣ ವಾಪಸ್ ನೀಡಲು ನಿರ್ಧರಿಸಿದೆ ಎಂದು ಹೇಳಿದೆ.

ಮರುಪಾವತಿಗೆ ಸಂಬಂಧಿಸಿದ ವಿಧಾನಗಳು ದಿನಾಂಕವನ್ನು ಶೀಘ್ರವೇ ಘೋಷಣೆ ಮಾಡಲಾಗುತ್ತದೆ, ಹಣ ವಾಪಸ್ ಪಡೆಯುವುದಕ್ಕಾಗಿ ಮೂಲ ಟಿಕೆಟ್ ಗಳನ್ನು ಹಾಗೆಯೇ ಇರಿಸಿಕೊಂಡಿರಬೇಕು ಎಂದು ಕೆಎಸ್ ಸಿಎ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.