ನ್ಯೂಜಿಲೆಂಡ್ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ತಂಡದಿಂದಲೂ ಪಾಕಿಸ್ತಾನ ಪ್ರವಾಸ ರದ್ದು
ಭದ್ರತಾ ಕಾರಣ ನೀಡಿ ಈ ಹಿಂದೆ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿದ ಬೆನ್ನಲ್ಲೇ, ಇದೀಗ ಇಂಗ್ಲೆಂಡ್ ಕೂಡ ಪಾಕ್ ಪ್ರವಾಸ ರದ್ದುಗೊಳಿಸಿ ಮತ್ತೊಂದು ಶಾಕ್ ನೀಡಿದೆ.

ಲಂಡನ್: ಭದ್ರತಾ ಕಾರಣ ನೀಡಿ ಈ ಹಿಂದೆ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿದ ಬೆನ್ನಲ್ಲೇ, ಇದೀಗ ಇಂಗ್ಲೆಂಡ್ ಕೂಡ ಪಾಕ್ ಪ್ರವಾಸ ರದ್ದುಗೊಳಿಸಿ ಮತ್ತೊಂದು ಶಾಕ್ ನೀಡಿದೆ.
ಇಂಗ್ಲೆಂಡ್ ಪುರಷರು ಮತ್ತು ವನಿತೆಯರ ತಂಡಗಳೆರಡರ ಮುಂಬರುವ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರ ಪ್ರಕಟಿಸಿದೆ.
‘ಪಾಕಿಸ್ತಾನಕ್ಕೆ ಪ್ರಯಾಣಿಸುವುದರ ಬಗ್ಗೆ ಆತಂಕ ವ್ಯಕ್ತವಾಗಿರುವುದು ನಮಗೆ ತಿಳಿದಿದೆ. ಕೋವಿಡ್ ಪರಿಸರದಲ್ಲೂ ಈಗಾಗಲೇ ದೀರ್ಘಾವಧಿಯ ಕಾರ್ಯಾಚರಣೆಯನ್ನು ನಿಭಾಯಿಸಿದ ತಂಡಕ್ಕೆ ಮುಂದಿನ ಪ್ರವಾಸವು ಮತ್ತಷ್ಟು ಒತ್ತಡವನ್ನು ನೀಡುತ್ತದೆ ಎಂದು ನಾವು ನಂಬಿದ್ದೇವೆ,’ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಹೇಳಿಕೆಯಲ್ಲಿ ತಿಳಿಸಿದೆ.
ಈ ಹಿಂದಿನ ವೇಳಾಪಟ್ಟಿಯಂತೆ ಅಕ್ಟೋಬರ್ 13 ಮತ್ತು 14 ರಂದು ಪುರುಷರ ತಂಡವು ಎರಡು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡಬೇಕಿತ್ತು. ಮಹಿಳೆಯರ ತಂಡ ಅಕ್ಟೋಬರ್ 17, 19 ಮತ್ತು 21 ರಂದು ಮೂರು ಏಕದಿನ ಪಂದ್ಯಗಳನ್ನು ಆಡಬೇಕಿತ್ತು. ಎಲ್ಲಾ ಪಂದ್ಯಗಳು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಿಗದಿಯಾಗಿದ್ದವು. ಆದರೆ ಈ ಎಲ್ಲ ಪಂದ್ಯಗಳೂ ಭದ್ರತಾ ಕಾರಣದಿಂದಾಗಿ ರದ್ದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


