ವಿವಾಹವಾದ 8 ವರ್ಷ ನಂತರ ಭಾರತೀಯ ಕ್ರಿಕೆಟರ್ ಶಿಖರ್ ಧವನ್, ಪತ್ನಿ ಆಯಿಷಾ ಮುಖರ್ಜಿ ವಿಚ್ಛೇದನ!
ವಿವಾಹವಾಗಿ 8 ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡದ ಆಟಗಾರ ಶಿಖರ್ ಧವನ್ ಮತ್ತು ಅವರ ಪತ್ನಿ ಆಯಿಷಾ ಮುಖರ್ಜಿ ವಿಚ್ಛೇದನ ಪಡೆದಿದ್ದಾರೆ.

ಮುಂಬೈ: ವಿವಾಹವಾಗಿ 8 ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡದ ಆಟಗಾರ ಶಿಖರ್ ಧವನ್ ಮತ್ತು ಅವರ ಪತ್ನಿ ಆಯಿಷಾ ಮುಖರ್ಜಿ ವಿಚ್ಛೇದನ ಪಡೆದಿದ್ದಾರೆ.
ಮೆಲ್ಬೋರ್ನ್ ಮೂಲದ ಬಾಕ್ಸರ್ ಆಯಿಷಾ ಮುಖರ್ಜಿ ಮತ್ತು ಶಿಖರ್ ಧವನ್ 2012ರಲ್ಲಿ ವಿವಾಹವಾಗಿದ್ದರು. ಆಯಿಷಾಗೆ ಹಿಂದಿನ ಮದುವೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಾಗಿದ್ದು ಶಿಖರ್ ಅವರನ್ನು ವಿವಾಹವಾದ ಬಳಿಕ ಜೋಡಿ ಇಬ್ಬರು ಹೆಣ್ಣು ಮಕ್ಕಳನ್ನೂ ನೋಡಿಕೊಳ್ಳುತ್ತಿದ್ದರು. ನಂತರ ಈ ಜೋಡಿಗೆ ಝೊರವರ್ ಎಂಬ ಗಂಡು ಮಗ ಜನಿಸಿದ್ದ.
ತಮ್ಮ ಆಯಿಷಾ ಮುಖರ್ಜಿ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಸುದ್ದಿಯನ್ನು ಆಯಿಷಾ ಅವರೇ ದೃಢಪಡಿಸಿದ್ದು ಆಕೆಯ ಮೂಲ ಪ್ರೊಫೈಲ್ ಹೆಸರಿನ ಆಯಿಷಾ ಧವನ್ ಸೋಷಿಯಲ್ ಮೀಡಿಯಾ ಸೈಟ್ ನಿಂದ ಡಿಲೀಟ್ ಆಗಿದೆ. ಈ ಸುದ್ದಿಯನ್ನು ಸುದ್ದಿಸಂಸ್ಥೆಗೆ ಮೂಲಗಳು ಕೂಡ ಖಚಿತಪಡಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


