ಕ್ರಿಕೆಟ್

2 ಹೊಸ ಐಪಿಎಲ್ ತಂಡಗಳ ಸೇರ್ಪಡೆ: ಅಹಮದಾಬಾದ್, ಲಖನೌ ತಂಡಗಳ ಹರಾಜಿನಿಂದ 12,960 ಕೋಟಿ ರೂ. ಸಂಗ್ರಹ

ಇವೆರಡೂ ಹೊಸ ಐಪಿಎಲ್ ತಂಡಗಳ ಹರಾಜಿನಿಂದ ಬಿಸಿಸಿಐ 10,000 ಕೋಟಿ ರೂ. ಗಳಿಕೆಯ ಲೆಕ್ಕಾಚಾರದಲ್ಲಿತ್ತು.

2 ಹೊಸ ಐಪಿಎಲ್ ತಂಡಗಳ ಸೇರ್ಪಡೆ: ಅಹಮದಾಬಾದ್, ಲಖನೌ ತಂಡಗಳ ಹರಾಜಿನಿಂದ 12,960 ಕೋಟಿ ರೂ. ಸಂಗ್ರಹ
ಐಪಿಎಲ್ ಟ್ರೋಫಿ
Published On :

ದುಬೈ: ಕೋಲ್ಕತಾ ಮೂಲದ ಆರ್ ಪಿ ಎಸ್ ಜಿ ಉದ್ಯಮ ಸಂಸ್ಥೆಗಳ ಮಾಲೀಕ ಉದ್ಯಮಿ ಸಂಜೀವ್ ಗೋಯೆಂಕಾ ಅವರು ಲಖನೌ ಐಪಿಎಲ್ ತಂಡವನ್ನು ಖರೀದಿಸಿದ್ದಾರೆ. ಈ ಸಂಬಂಧ ಹರಾಜಿನಲ್ಲಿ ಪಾಲ್ಗೊಂಡ ಅವರು 7,090 ಕೋಟಿ ರೂ. ಮೊತ್ತಕ್ಕೆ ತಂಡವನ್ನು ಖರೀದಿಸಿದ್ದಾರೆ. 

ಅಂತಾರಾಷ್ಟ್ರೀಯ ಹೂಡಿಕೆ ಸಂಸ್ಥೆ ಸಿವಿಸಿ ಕ್ಯಾಪಿಟಲ್ ಅಹಮದಾಬಾದ್ ಐಪಿಎಲ್ ತಂಡವನ್ನು 5,600 ಕೋಟಿ ರೂ. ಗಳಿಗೆ ಖರೀದಿಸಿದೆ.

ಇವೆರಡೂ ಹೊಸ ತಂಡಗಳ ಐಪಿಎಲ್ ಹರಾಜಿನಿಂದ ಬಿಸಿಸಿಐ 10,000 ಕೋಟಿ ರೂ. ಗಳಿಕೆಯ ಲೆಕ್ಕಾಚಾರದಲ್ಲಿತ್ತು. ಆದರೆ ಅಚ್ಚರಿಯೆಂಬಂತೆ ಬಿಸಿಸಿಐ ಹಾಕಿಕೊಂಡಿದ್ದ ಗುರಿಯನ್ನೂ ಮೀರಿ 12,960 ಕೋಟಿ ರೂ. ಹರಾಜಿನಿಂದ ಸಂಗ್ರಹವಾಗಿದೆ.

ಸಂಜೀವ್ ಗೋಯೆಂಕಾ ಅವರು ಈ ಹೀಂದೆ ರೈಸಿಂಗ್ ಪುಣೆ ಐಪಿಎಲ್ ತಂಡದ ಮಾಲೀಕರಾಗಿದ್ದರು. ಆ ಹಿನ್ನೆಲೆಯಲ್ಲಿ ಸಂಜೀವ್ ಗೋಯೆಂಕಾ ಹರಾಜು ಗೆಲ್ಲುವ ಮುನ್ಸೂಚನೆಯನ್ನು ಪರಿಣತರು ಈ ಹಿಂದೆಯೇ ವ್ಯಕ್ತಪಡಿಸಿದ್ದರು

Related Article

ದೀಪಾವಳಿಯಲ್ಲಿ ಪಟಾಕಿ ನಿಷೇಧ ಹಿಂದೆ ಬೂಟಾಟಿಕೆ: ವೀರೇಂದ್ರ ಸೆಹ್ವಾಗ್

ಅತಿಯಾದ ಆತ್ಮವಿಶ್ವಾಸ ಬೇಡ: ತಂಡಕ್ಕೆ ಪಾಕ್‌ ನಾಯಕ ಬಾಬರ್ ಆಜಂ ಎಚ್ಚರಿಕೆ

ಬಿಸಿಸಿಐನ ಆ ವ್ಯಕ್ತಿಗೆ 'ಬುದ್ದು' ಪ್ರಶಸ್ತಿ ನೀಡಬೇಕು; ಪಾಕ್ ಜೊತೆ ಟೀಂ ಇಂಡಿಯಾ ಆಡಲೇಬಾರದು: ಸುಬ್ರಮಣಿಯನ್ ಸ್ವಾಮಿ

T20 WC: ಪಾಕ್ ವಿರುದ್ಧದ ಹೀನಾಯ ಸೋಲಿನ ನಂತರ ಟೀಂ ಇಂಡಿಯಾ ನಡೆಗೆ ಐಸಿಸಿ ಶ್ಲಾಘನೆ, ವಿಡಿಯೋ

ಟಿ-20 ವಿಶ್ವಕಪ್; ಕೊಹ್ಲಿ ಪ್ರೆಸ್ ಕಾನ್ಫರೆನ್ಸ್; ಪಾಕ್ ಪತ್ರಕರ್ತನ ಬೆವರಿಳಿಸಿದ ವಿರಾಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.