ಟಿ20 ವಿಶ್ವಕಪ್: ಬಡಿದಾಡಿಕೊಳ್ಳುವ ಮಟ್ಟಕ್ಕೆ ಹೋದ ಲಂಕಾ-ಬಾಂಗ್ಲಾ ಆಟಗಾರರು, ವಿಡಿಯೋ ವೈರಲ್!
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಆಟಗಾರರ ನಡುವೆ ಮೈದಾದನಲ್ಲೇ ಮಾತಿನ ಚಕಮಿಕಿ ನಡೆದಿದೆ.

ಶಾರ್ಜಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಆಟಗಾರರ ನಡುವೆ ಮೈದಾದನಲ್ಲೇ ಮಾತಿನ ಚಕಮಿಕಿ ನಡೆದಿದೆ.
ಶಾರ್ಜಾದಲ್ಲಿ ನಡೆದ ಸೂಪರ್ 12 ಹಂತದ ಗ್ರೂಪ್ 1ರ ಪಂದ್ಯದಲ್ಲಿ ಲಂಕಾದ ವೇಗಿ ಲಾಹಿರು ಕುಮಾರ ಹಾಗೂ ಬಾಂಗ್ಲಾದ ಆರಂಭಿಕ ಬ್ಯಾಟರ್ ಲಿಟನ್ ದಾಸ್ ನಡುವೆ ವಾಗ್ವಾದ ನಡೆಯಿತು.
ಲಾಹಿರು ಬೌಲಿಂಗ್ ನಲ್ಲಿ ಲಿಟನ್ ದಾಸ್ ದೊಡ್ಡ ಹೊಡೆತಕ್ಕೆ ಮುಂದಾದರೂ ಆದರೆ ಚೆಂಡು ನೇರವಾಗಿ ದಸುನ್ ಶನಕ ಕೈಗೆ ಸೇರಿತು. ಔಟ್ ಮಾಡಿದ ಜೋಶ್ ನಲ್ಲಿ ಲಾಹಿರು ಲಿಟನ್ ಬಳಿ ತೆರಳಿ ಪದ ಪ್ರಯೋಗ ಮಾಡಿದರು. ಇದರಿಂದ ಸಿಟ್ಟಿಗೆದ್ದ ದಾಸ್ ಪ್ರತ್ಯುತ್ತರ ನೀಡಿದರು. ಇದರಿಂದ ಮೈದಾದನಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನವೇ ಸಹ ಆಟಗಾರರು ಮಧ್ಯ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು.
ಈ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 171 ರನ್ ಗಳ ಗುರಿಯನ್ನು ಲಂಕಾ ಇನ್ನು 7 ಎಸೆತ ಬಾಕಿ ಇರುವಂತೆ 172 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


