ಕ್ರಿಕೆಟ್

ಚೆನ್ನೈ ಎದುರು ಅಬ್ಬರಿಸಿದ ಕೆಎಲ್ ರಾಹುಲ್: ಪಂಜಾಬ್ ಗೆ 6 ವಿಕೆಟ್ ಗಳ ಜಯ

ನಾಯಕ ಕೆ.ಎಲ್ ರಾಹುಲ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ಆರು ವಿಕೆಟ್ ಗಳಿಂದ 14ನೇ ಆವೃತ್ತಿಯ ಐಪಿಎಲ್ ನ 53ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದೆ.

ಚೆನ್ನೈ ಎದುರು ಅಬ್ಬರಿಸಿದ ಕೆಎಲ್ ರಾಹುಲ್: ಪಂಜಾಬ್ ಗೆ 6 ವಿಕೆಟ್ ಗಳ ಜಯ
ಕೆಎಲ್ ರಾಹುಲ್
Published On :

ದುಬೈ: ನಾಯಕ ಕೆ.ಎಲ್ ರಾಹುಲ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ಆರು ವಿಕೆಟ್ ಗಳಿಂದ 14ನೇ ಆವೃತ್ತಿಯ ಐಪಿಎಲ್ ನ 53ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದೆ.

ಮೊದಲು ಬ್ಯಾಟ್ ಮಾಡಿದ ಚೆನ್ನೈ 20 ಓವರ್ ಗಳಲ್ಲಿ 6 ವಿಕೆಟ್ ಗೆ 134 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಂಜಾಬ್ 13 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 139 ರನ್ ಕಲೆ ಹಾಕಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಸಿಎಸ್ ಕೆ ಗೆಲುವು ದಾಖಲಿಸಿ ಪೂರ್ಣ ಅಂಕ ಪಡೆಯುವ ಕನಸಿಗೆ ಪೆಟ್ಟು ಬಿದ್ದಿದೆ. 

ಟೂರ್ನಿಯಲ್ಲಿ ಚೆನ್ನೈ ಮತ್ತು ಪಂಜಾಬ್ ತಂಡಗಳು ತಲಾ 14 ಪಂದ್ಯಗಳನ್ನು ಆಡಿವೆ. ಇನ್ನು 9 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಚೆನ್ನೈ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ 6 ಪಂದ್ಯಗಳನ್ನು ಗೆದ್ದಿರುವ ಪಂಜಾಬ್ ತಂಡ 5ನೇ ಸ್ಥಾನದಲ್ಲಿದೆ. 

ಪಂಜಾಬ್ ಪರ ಕೆಎಲ್ ರಾಹುಲ್ ಅಬ್ಬರದ ಬ್ಯಾಟಿಂಗ್ ಮಾಡಿದ್ದು 42 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 7 ಬೌಂಡರಿ ಸೇರಿದಂತೆ 98 ರನ್ ಕಲೆ ಹಾಕಿ ಪಂದ್ಯದ ಗೆಲುವಿನ ಪ್ರಮುಖ ಪಾತ್ರವಹಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.