ಭಾರತ- ನ್ಯೂಜಿಲ್ಯಾಂಡ್ ಟೆಸ್ಟ್ ಮೊದಲ ದಿನ: ಭಾರತದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 258; ಚೊಚ್ಚಲ ಪಂದ್ಯದಲ್ಲಿ ಐಯ್ಯರ್ ಅರ್ಧಶತಕ
ರವೀಂದ್ರ ಜಡೇಜಾ (50) ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಶ್ರೇಯಸ್ ಐಯ್ಯರ್ (75) ರನ್ ಗಳ ನೆರವಿನಿಂದ ಭಾರತ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.

ಗ್ರೀನ್ ಪಾರ್ಕ್ ಸ್ಟೇಡಿಯಂ: ರವೀಂದ್ರ ಜಡೇಜಾ (50) ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಶ್ರೇಯಸ್ ಐಯ್ಯರ್ (75) ರನ್ ಗಳ ನೆರವಿನಿಂದ ಭಾರತ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಭಾರತ- ನ್ಯೂಜಿಲ್ಯಾಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನಾಂತ್ಯಕ್ಕೆ 4 ವಿಕೆಟ್ ಗಳ ನಷ್ಟಕ್ಕೆ 258 ರನ್ ಗಳನ್ನು ಗಳಿಸಿದೆ. ರವೀಂದ್ರ ಜಡೇಜಾ- ಶ್ರೇಯಸ್ ಐಯ್ಯರ್ 5 ನೇ ವಿಕೆಟ್ ಗೆ 113 ರನ್ ಗಳ ಅದ್ಭುತ ಜೊತೆಯಾಟ ಕಟ್ಟಿದರು.
ಟಾಸ್ ಗೆದ್ದ ಅಜಿಂಕ್ಯಾ ರೆಹಾನೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ವೇಗಿ ಕೈಲ್ ಜೇಮಿಸನ್ ಅವರ ಬೌಲಿಂಗ್ ಚಳಕಕ್ಕೆ ಮಯಾಂಕ್ ಅಗರ್ವಾಲ್ (13 ರನ್) ವಿಕೆಟ್ ಒಪ್ಪಿಸಿದ ಪರಿಣಾಮ ಭಾರತ ಆರಂಭಿಕ ಆಘಾತ ಎದುರಿಸಿತು. ಊಟದ ವಿರಾಮದ ವೇಳೆಗೆ ಭಾರತ ಒಂದು ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿತ್ತು.
ಆದರೆ ಎರಡನೇ ವಿಕೆಟ್ ಗೆ ಜೊತೆಯಾದ ಚೇತೇಶ್ವರ್ ಪೂಜಾರ, ಶುಭ್ ಮನ್ ಗಿಲ್ 61 ರನ್ ಗಳ ಜೊತೆಯಾಟ ಆಡಿದರೂ ಹೆಚ್ಚು ಕಾಲ ಈ ಜೊತೆಯಾಟ ಉಳಿಯಲಿಲ್ಲ. ನ್ಯೂಜಿಲ್ಯಾಂಡ್ ಪರ ವೇಗಿ ವೇಗಿ ಕೈಲ್ ಜೇಮಿಸನ್ ಭಾರತೀಯ ಬ್ಯಾಟ್ಸ್ ಮನ್ ಗಳನ್ನು ನಿಯಂತ್ರಿಸುವ ಮೂಲಕ ತಂಡದ ಪರ ಉತ್ತಮ ಬೌಲರ್ ಎನಿಸಿದರು.
ಸದ್ಯ ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ ಕ್ರೀಜ್ ಕಾಯ್ದುಕೊಂಡಿದ್ದು, ನಾಳಿನ 2ನೇ ದಿನದಾಟವನ್ನು ಆರಂಭಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


