ಆರ್ ಸಿಬಿ ಮುಖ್ಯ ಕೋಚ್ ಆಗಿ ಟೀಂ ಇಂಡಿಯಾ ಮಾಜಿ ಆಟಗಾರ ಸಂಜಯ್ ಬಂಗಾರ್ ನೇಮಕ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಮುಖ್ಯ ಕೋಚ್ ಆಗಿ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಬಂಗರ್ ಅವರು ನೇಮಕಗೊಂಡಿದ್ದಾರೆ.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಮುಖ್ಯ ಕೋಚ್ ಆಗಿ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರು ನೇಮಕಗೊಂಡಿದ್ದಾರೆ.
ಮುಂದಿನ ಎರಡು ಐಪಿಎಲ್ ಸೀಸನ್‌ಗಳಿಗೆ ಮುಖ್ಯ ಕೋಚ್ ಆಗಿ ಬಂಗರ್ ಅವರನ್ನು ಆರ್ ಸಿ ಬಿ ನೇಮಿಸಿದೆ. ಬಂಗಾರ್ ಅವರು ಕಳೆದ ಕೆಲವು ಸೀಜನ್ ಗಳಲ್ಲಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಪಿಎಲ್ - 2021 ಮೊದಲ ಹಂತದಲ್ಲಿ ಆರ್ ಸಿ ಬಿ ಪ್ರಧಾನ ತರಬೇತುದಾರರಾಗಿದ್ದ ಸೈಮನ್ ಕಟಿಚ್ ಅವರು ವೈಯಕ್ತಿಕ ಕಾರಣದಿಂದ ಎರಡನೇ ಹಂತದಿಂದ ದೂರಸರಿದಿದ್ದರು. ಅವರ ಸ್ಥಾನಕ್ಕೆ ಮೈಕ್ ಹೆಸ್ಸನ್ ತಾತ್ಕಾಲಿಕವಾಗಿ ಅಧಿಕಾರ ವಹಿಸಿಕೊಂಡಿದ್ದರು. ಇನ್ನೂ ಮೈಕ್ ಹೆಸ್ಸನ್ ಆ ತಂಡದ ಆಪರೇಷನ್ಸ್ ಡೈರೆಕ್ಟರ್ ಆಗಿ ಮುಂದುವರಿದಿದ್ದಾರೆ.
ಆದರೆ, ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವಕ್ಕೆ ರಾಜೀನಾಮೆ ನೀಡಿರುವುದು ಗೊತ್ತೇ ಇದೆ. ಇದರೊಂದಿಗೆ ಮುಂದಿನ ಆರ್ ಸಿಬಿ ನಾಯಕ ಯಾರು ಎಂಬುದು ಈಗ ಕುತೂಹಲ ಮೂಡಿಸಿದೆ.
ಸಂಜಯ್ ಬಂಗಾರ್ ಅವರು ಆಟಗಾರನಾಗಿದ್ದಕ್ಕಿಂತ ಕೋಚ್ ಆಗಿ ಹೆಚ್ಚು ಗಮನ ಸೆಳೆದಿದ್ದಾರೆ. ಮಹಾರಾಷ್ಟ್ರದವರಾದ 49 ವರ್ಷದ ಸಂಜಯ್ ಬಂಗಾರ್ ಉತ್ತಮ ಆಲ್ರೌಂಡರ್ ಎನಿಸಿದ್ದರು. ಟೀಮ್ ಇಂಡಿಯಾ ಪರ ಅವರು 2001ರಿಂದ 2004ರವರೆಗೆ 12 ಟೆಸ್ಟ್ ಹಾಗು 15 ಏಕದಿನ ಪಂದ್ಯಗಳನ್ನ ಆಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


