ಭಾರತ-ನ್ಯೂಜಿಲ್ಯಾಂಡ್ ಡಬ್ಲ್ಯುಟಿಸಿ ಫೈನಲ್ ಗೆ 4000 ಅಭಿಮಾನಿಗಳು ಭಾಗವಹಿಸಲು ಅನುಮತಿ
ಭಾರತ- ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ 4000 ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಲಿದೆ ಎಂದು ಹೆಮ್ಸ್ಪಿಯರ್ ಕಂಟ್ರಿ ಕ್ಲಬ್ ನ ಮುಖ್ಯಸ್ಥರಾದ ರಾಡ್ ಬ್ರಾನ್ಸ್ಗ್ರೋವ್ ಹೇಳಿದ್ದಾರೆ.

ಸೌತಾಂಪ್ಟನ್: ಭಾರತ- ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ 4000 ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಲಿದೆ ಎಂದು ಹೆಮ್ಸ್ಪಿಯರ್ ಕಂಟ್ರಿ ಕ್ಲಬ್ ನ ಮುಖ್ಯಸ್ಥರಾದ ರಾಡ್ ಬ್ರಾನ್ಸ್ಗ್ರೋವ್ ಹೇಳಿದ್ದಾರೆ.
ಬ್ರಿಟನ್ ನಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಿಸಿದೆ, ಇತ್ತೀಚೆಗಷ್ಟೇ ಲೀಸೆಸ್ಟರ್ಶೈರ್-ಹ್ಯಾಂಪ್ಶೈರ್ ನಡುವೆ ನಡೆದ ಕೌಂಟಿ ಗೇಮ್ ಪಂದ್ಯದಲ್ಲಿ 1,500 ಮಂದಿ ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅನುಮತಿ ನೀಡಲಾಗಿತ್ತು. ಜೂ.18 ರಂದು ನಡೆಯಲಿರುವ ಡಬ್ಲ್ಯುಟಿಸಿ ಫೈನಲ್ ಪಂದ್ಯ ಏಗಾಸ್ ಬೌಲ್ ನಲ್ಲಿ ನಡೆಯಲಿದೆ.
"2019 ರ ಸೆಪ್ಟೆಂಬರ್ ನಿಂದ ಇದೇ ಮೊದಲ ಬಾರಿಗೆ ಇಂದಿನಿಂದ ನಾವು ನಾಲ್ಕು ದಿನಗಳ ಕೌಂಟಿ ಗೇಮ್ ನ್ನು ಪ್ರಾರಂಭಿಸುತ್ತಿದ್ದೇವೆ, ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಇಂಗ್ಲೆಂಡ್ ನಲ್ಲಿ ಅಭಿಮಾನಿಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಹ್ಯಾಂಪ್ಶೈರ್ ಕೌಂಟಿ ಕ್ಲಬ್ ನ ಮುಖ್ಯಸ್ಥರಾದ ರಾಡ್ ಬ್ರಾನ್ಸ್ಗ್ರೋವ್ ಹೇಳಿದ್ದಾರೆ.
ಇಂಗ್ಲೆಂಡ್ ಹಾಗೂ ವ್ಹೇಲ್ಸ್ ಕ್ರಿಕೆಟ್ ಮಂಡಳಿ ಹಾಗೂ ಐಸಿಸಿ ಎಲ್ಲರೂ ಎದುರು ನೋಡುತ್ತಿರುವ ಪಂದ್ಯ ವೀಕ್ಷಣೆಗೆ 4000 ಮಂದಿಗೆ ಅವಕಾಶ ನೀಡಲಾಗುತ್ತಿದೆ ಎಂದು ಬ್ರಾನ್ಸ್ ಗ್ರೋವ್ ಮಾಹಿತಿ ನೀಡಿದೆ.
ಶೇ.50 ರಷ್ಟನ್ನು ಐಸಿಸಿ ತನ್ನ ಸ್ಪಾನ್ಸರ್ ಹಾಗೂ ಇತರ ಪಾಲುದಾರರಿಗೆ ನೀಡುತ್ತದೆ. ಉಳಿದ 2000 ಟಿಕೆಟ್ ಗಳನ್ನು ಮಾರಾಟ ಮಾಡಲಿವೆ" ಎಂದು ಬ್ರಾನ್ಸ್ ಗ್ರೋವ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


