ಐಪಿಎಲ್-2020: ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಅಂಪೈರ್ ಗೆ ಕೊಟ್ಬಿಡಿ ಅಂದಿದ್ದೇಕೆ ವಿರೇಂದ್ರ ಸೆಹ್ವಾಗ್?
ಐಪಿಎಲ್-2020 ಟೂರ್ನಿಯ ಸೆ.21 ರ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಿಂಗ್ಸ್ XI ಪಂಜಾಬ್ ತಂಡವನ್ನು ಮಣಿಸಿದ್ದು, ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆಯೇ ವಿರೇಂದ್ರ ಸೆಹ್ವಾಗ್ ಅವರ ಟ್ವೀಟ್ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ.

ಐಪಿಎಲ್-2020 ಟೂರ್ನಿಯ ಸೆ.21 ರ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್- ಕಿಂಗ್ಸ್ XI ಪಂಜಾಬ್ ತಂಡವನ್ನು ಮಣಿಸಿದ್ದು, ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆಯೇ ವಿರೇಂದ್ರ ಸೆಹ್ವಾಗ್ ಅವರ ಟ್ವೀಟ್ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ.
ಸೂಪರ್ ಓವರ್ ನಲ್ಲಿ ದೆಹಲಿ ತಂಡ ಗೆಲ್ಲುವುದಕ್ಕೂ ಮುನ್ನ ಕಿಂಗ್ಸ್ XI ಪಂಜಾಬ್ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ಸಮಬಲ ಸಾಧಿಸಿತ್ತು. ಈ ಬಳಿಕವಷ್ಟೇ ಸೂಪರ್ ಓವರ್ ನಡೆಯಿತು.
ಇದಕ್ಕೂ ಮುನ್ನ ಕೇವಲ ಒಂದು ರನ್ ನಿಂದಾಗಿ ಪಂದ್ಯ ಸಮಬಲ ಸಾಧಿಸಿತ್ತು. ಕಿಂಗ್ಸ್ XI ಪಂಜಾಬ್ ನ ಆಟಗಾರ ಕ್ರಿಸ್ ಜೋರ್ಡಾನ್ ಅವರ ರನ್ ಔಟ್ ವಿಷಯದಲ್ಲಿ ಬಹುದೊಡ್ಡ ಪ್ರಮಾದ ನಡೆದಿತ್ತು. ಬ್ಯಾಟ್ ಕ್ರೀಸ್ ನಲ್ಲಿದ್ದರೂ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು ಪರಿಣಾಮ ಪಂದ್ಯದ ದಿಕ್ಕೇ ಬದಲಾಯಿತು. ಕಿಂಗ್ಸ್ XI ಪಂಜಾಬ್ ನ ಸೋಲಿನ ಬೆನ್ನಲ್ಲೆ ಸೆಹ್ವಾಗ್ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಅಂಪೈರ್ ನ್ನು ಟೀಕಿಸಿದ್ದಾರೆ.
ಈ ಪಂದ್ಯದಲ್ಲಿ ಪಂದ್ಯಪುರುಷೋತ್ತಮ ಪ್ರಶಸ್ತಿ ಆಯ್ಕೆಯನ್ನು ನಾನು ಒಪ್ಪುವುದಿಲ್ಲ. ಮ್ಯಾನ್ ಆಫ್ ದಿ ಮ್ಯಾಚ್ ನೀಡಬೇಕಾದ್ದು ತಪ್ಪು ತೀರ್ಪು ನೀಡಿದ್ದ ಅಂಪೈರ್ ಗೆ ಎಂದು ಸೆಹ್ವಾಗ್ ವ್ಯಂಗ್ಯವಾಗಿ ಟ್ವೀಟ್ ಮಾಡಿ ಅಂಪೈರ್ ನ ತಪ್ಪು ನಿರ್ಧಾರವನ್ನು ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


