ಕ್ರಿಕೆಟ್

'ಹೊಟ್ಟೆ ಒಳಗೆ ಚಿಟ್ಟೆ ಬಿಟ್ಟಂತಾಗಿದೆ': ಆರ್ ಸಿಬಿ-ಎಸ್ಆರ್ ಹೆಚ್ ಪಂದ್ಯಕ್ಕೂ ಮುನ್ನ ಎಬಿಡಿ ವಿಲ್ಲರ್ಸ್

ಐಪಿಎಲ್-2020 ಟೂರ್ನಿಗೆ ಸೆ.20 ರಿಂದ ಚಾಲನೆ ದೊರೆತಿದ್ದು, ಮೊದಲ ದಿನದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್ XI ತಂಡಗಳು ಸೆಣೆಸಿದ್ದವು. ಈ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಜಯದ ಖಾತೆ ತೆರೆದಿವೆ.

'ಹೊಟ್ಟೆ ಒಳಗೆ ಚಿಟ್ಟೆ ಬಿಟ್ಟಂತಾಗಿದೆ': ಆರ್ ಸಿಬಿ-ಎಸ್ಆರ್ ಹೆಚ್ ಪಂದ್ಯಕ್ಕೂ ಮುನ್ನ ಎಬಿಡಿ ವಿಲ್ಲರ್ಸ್
'ಹೊಟ್ಟೆ ಒಳಗೆ ಚಿಟ್ಟೆ ಬಿಟ್ಟಂತಾಗಿದೆ': ಆರ್ ಸಿಬಿ-ಎಸ್ಆರ್ ಹೆಚ್ ಪಂದ್ಯಕ್ಕೂ ಮುನ್ನ ಎಬಿಡಿ ವಿಲ್ಲರ್ಸ್
Published On :

ಐಪಿಎಲ್-2020 ಟೂರ್ನಿಗೆ ಸೆ.20 ರಿಂದ ಚಾಲನೆ ದೊರೆತಿದ್ದು, ಮೊದಲ ದಿನದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್ XI ತಂಡಗಳು ಸೆಣೆಸಿದ್ದವು. ಈ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಜಯದ ಖಾತೆ ತೆರೆದಿವೆ. 

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ ನಲ್ಲಿ ನಡೆಯಲಿರುವ 2 ನೇ ದಿನದ ಪಂದ್ಯದಲ್ಲಿ ಆರ್ ಸಿಬಿ-ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ಪ್ರಾರಂಭವಾಗುವುದಕ್ಕೆ ಇನ್ನು ಕೆಲವೇ ಗಂಟೆಗಳಿದ್ದು, ಆರ್ ಸಿಬಿ ತಂಡದ ಆಟಗಾರ ಎಬಿಡಿ ವಿಲ್ಲರ್ಸ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಪಂದ್ಯದ ಬಗ್ಗೆ ತುಂಬಾ ಉತ್ಸುಕನಾಗಿದ್ದಾನೆ, ಹೊಟ್ಟೆ ಒಳಗೆ ಚಿಟ್ಟೆ ಬಿಟ್ಟಂಗೆ ಆಗಿದೆ ಎಂದು ಹೇಳಿದ್ದಾರೆ. 

ಸಾಕಷ್ಟು ಶ್ರಮ ಹಾಕಿದ್ದೇವೆ, ಮೊಯೀನ್ ಫಿಂಚ್, ಆಡಂ ಝಾಂಪಾ, ಜೋಶ್ ಫಿಲಿಪ್ ರಂತಹ ಆಟಗಾರರು ನಮ್ಮ ತಂಡಕ್ಕೆ ಬಲ ನೀಡುವವರಾಗಿದ್ದಾರೆ. ಅವರು ತಂಡಕ್ಕಾಗಿ ಆಡುವುದನ್ನು ಎದುರುನೋಡುತ್ತಿದ್ದೇನೆ ಎಂದು ಎಬಿಡಿ ವಿಲ್ಲರ್ಸ್ ಹೇಳಿದ್ದಾರೆ. 

ಇದೇ ವೇಳೆ ತಂಡದ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದು, ನಾವು ಅತ್ಯುತ್ತಮವಾಗಿ ತಯಾರಾಗಿದ್ದೇವೆ, ಹೈದರಾಬಾದ್ ತಂಡವನ್ನು ಎದುರಿಸಲು ಉತ್ತಮ ಸ್ಥಿತಿಯಲ್ಲಿದ್ದೇವೆ, ಮನಸ್ಥಿತಿಯೂ ಚೆನ್ನಾಗಿದೆ. ತಂಡದ ಆಟಗಾರರ ಬ್ಯಾಟಿಂಗ್, ಬೌಲಿಂಗ್ ಕೂಡಾ ಚೆನ್ನಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ. 

ಆರ್ ಸಿಬಿ ತಂಡ: ಪಿಂಚ್​, ಪಡಿಕಲ್​/ಪಾರ್ಥಿವ್, ವಿರಾಟ್ ಕೊಹ್ಲಿ, ಎಬಿಡಿ, ಮೋಯಿನ್​ ಅಲಿ, ಶಿವಂ ದುಬೆ, ಮಾರಿಸ್​, ವಾಷಿಂಗ್ಟನ್​, ಉಮೇಶ್​ ಯಾದವ್​, ನವದೀಪ್​ ಸೈನಿ, ಚಹಾಲ್​ ಆರ್ ಸಿಬಿ ಪರ ಆಡಲಿದ್ದಾರೆ.

2009, 11, 16 ರಲ್ಲಿ ಫೈನಲ್ಸ್ ತಲುಪಿದ್ದ ಆರ್ ಸಿಬಿ ಇನ್ನಷ್ಟೇ ಐಪಿಎಲ್ ಕಪ್ ಗೆಲ್ಲಬೇಕಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.