ಕ್ರಿಕೆಟ್

ವಿಡಿಯೋ: ಕೆಕೆಆರ್ ಗೆಲುವಿಗೆ ಕಾರಣರಾದ ರಾಹುಲ್ ತ್ರಿಪಾಠಿಗಾಗಿ ತಮ್ಮ ನೆಚ್ಚಿನ ಡೈಲಾಗ್ ಹೊಡೆದ ಶಾರೂಕ್!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ರಾಹುಲ್ ತ್ರಿಪಾಠಿ ಅವರನ್ನು ತಂಡದ ಮಾಲೀಕ, ಬಾಲಿವುಡ್ ನಟ ಶಾರೂಕ್ ಖಾನ್ ಅವರು ತಮ್ಮ ನೆಚ್ಚಿನ ಡೈಲಾಗ್ ಹೇಳುವ ಮೂಲಕ ಶ್ಲಾಘಿಸಿದ್ದಾರೆ.

ವಿಡಿಯೋ: ಕೆಕೆಆರ್ ಗೆಲುವಿಗೆ ಕಾರಣರಾದ ರಾಹುಲ್ ತ್ರಿಪಾಠಿಗಾಗಿ ತಮ್ಮ ನೆಚ್ಚಿನ ಡೈಲಾಗ್ ಹೊಡೆದ ಶಾರೂಕ್!
ಶಾರೂಕ್ ಖಾನ್ - ರಾಹುಲ್ ತ್ರಿಪಾಠಿ
Published On :

ಅಬು ಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ರಾಹುಲ್ ತ್ರಿಪಾಠಿ ಅವರನ್ನು ತಂಡದ ಮಾಲೀಕ, ಬಾಲಿವುಡ್ ನಟ ಶಾರೂಕ್ ಖಾನ್ ಅವರು ತಮ್ಮ ನೆಚ್ಚಿನ ಡೈಲಾಗ್ ಹೇಳುವ ಮೂಲಕ ಶ್ಲಾಘಿಸಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಕೋಲ್ಕತಾ ನೈಟ್‌ ರೈಡರ್ಸ್ 10 ರನ್‌ಗಳಿಂದ ಜಯಗಳಿಸಿದ್ದು, ಆಲ್ ರೌಂಡರ್ ಆಗಿರುವ ರಾಹುಲ್ ತ್ರಿಪಾಠಿ ಅವರು 51 ಎಸೆತಗಳಲ್ಲಿ 81 ರನ್ ದಾಖಲಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಭಾಜನರಾಗಿದ್ದರು.

ರಾಹುಲ್ ತ್ರಿಪಾಠಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯಲು ಹೋದಾಗ ಶಾರೂಕ್ ಖಾನ್ ಅವರು ಗ್ಯಾಲರಿಯಿಂದಲೇ ರಾಹುಲ್, ನಾಮ್ ತೋ ಸುನಾ ಹೋಗಾ ಅನ್ನೋ ಡೈಲಾಗ್ ಹೇಳಿದ್ದರು.

ರಾಹುಲ್ ನಾಮ್ ತೋ ಸುನಾ ಹೋಗಾ ಅನ್ನೋದು ಶಾರೂಕ್ ಅವರ ನೆಚ್ಚಿನ ಡೈಲಾಗ್. 1997ರಲ್ಲಿ ತೆರೆಕಂಡ ದಿಲ್ ತೋ ಪಾಗಲ್ ಹೈ ಸಿನಿಮಾದಲ್ಲಿ ಶಾರೂಕ್ ಇದೇ ಡೈಲಾಗ್ ಹೇಳಿದ್ದರು.

ಅಷ್ಟೇ ಅಲ್ಲ, ರಾಹುಲ್ ಅನ್ನೋ ಹೆಸರು ಶಾರೂಕ್ ಖಾನ್ ಅವರಿಗೆ ಅದೃಷ್ಟದ ಹೆಸರು ಕೂಡ ಹೌದು. ಶಾರೂಕ್ ಸುಮಾರು 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಹುಲ್ ಅನ್ನೋ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ರಾಹುಲ್ ಅನ್ನೋ ಹೆಸರಿನ ಪಾತ್ರದಲ್ಲಿ ನಟಿಸಿದ್ದ ಬಹುತೇಕ ಚಿತ್ರಗಳು ಕೂಡ ಸೂಪರ್ ಹಿಟ್ ಆಗಿವೆ. ಹೀಗಾಗಿ ರಾಹುಲ್ ನಾಮ್ ತೋ ಸುನಾ ಹೋಗಾ ಅಂತ ಹೇಳುವ ಮೂಲಕ ಶಾರೂಕ್ ಖಾನ್ ರಾಹುಲ್ ತ್ರಿಪಾಠಿಯ ಬ್ಯಾಟಿಂಗ್ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.