ಕ್ರಿಕೆಟ್ವಿಡಿಯೋ: ಕೆಕೆಆರ್ ಗೆಲುವಿಗೆ ಕಾರಣರಾದ ರಾಹುಲ್ ತ್ರಿಪಾಠಿಗಾಗಿ ತಮ್ಮ ನೆಚ್ಚಿನ ಡೈಲಾಗ್ ಹೊಡೆದ ಶಾರೂಕ್!
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ರಾಹುಲ್ ತ್ರಿಪಾಠಿ ಅವರನ್ನು ತಂಡದ ಮಾಲೀಕ, ಬಾಲಿವುಡ್ ನಟ ಶಾರೂಕ್ ಖಾನ್ ಅವರು ತಮ್ಮ ನೆಚ್ಚಿನ ಡೈಲಾಗ್ ಹೇಳುವ ಮೂಲಕ ಶ್ಲಾಘಿಸಿದ್ದಾರೆ.