ಐಪಿಎಲ್-2020: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ನಾಯಕ ಕೊಹ್ಲಿ ವಿಶ್ವ ದಾಖಲೆ!
ಐಪಿಎಲ್-2020 ರ ಆರ್ ಸಿಬಿ- ಡೆಲ್ಲಿ ನಡುವೆ ಅ.06 ರಂದು ನಡೆದ ಪಂದ್ಯದಲ್ಲಿ ಆರ್ ಸಿಬಿ 59 ರನ್ ಗಳ ಸೋಲು ಕಂಡಿದೆ. ಈ ಮೂಲಕ ಈ ಐಪಿಎಲ್ ಆವೃತ್ತಿಯಲ್ಲಿ 2 ನೇ ಸೋಲು ದಾಖಲಿಸಿದೆ.

ಐಪಿಎಲ್-2020 ರ ಆರ್ ಸಿಬಿ- ಡೆಲ್ಲಿ ನಡುವೆ ಅ.06 ರಂದು ನಡೆದ ಪಂದ್ಯದಲ್ಲಿ ಆರ್ ಸಿಬಿ 59 ರನ್ ಗಳ ಸೋಲು ಕಂಡಿದೆ. ಈ ಮೂಲಕ ಈ ಐಪಿಎಲ್ ಆವೃತ್ತಿಯಲ್ಲಿ 2 ನೇ ಸೋಲು ದಾಖಲಿಸಿದೆ.
ಸೋಲಿನ ನಡುವೆಯೂ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ವಿನೂತನ, ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಐಪಿಎಲ್ ಸೀಸನ್ ಪ್ರಾರಂಭವಾದಾಗಿನಿಂದಲೂ ಸಹ ಆರ್ ಬಿಐ ತಂಡಕ್ಕಾಗಿಯೇ ಆಡುತ್ತಿದ್ದು, ಐಪಿಎಲ್ ಪ್ರಾರಂಭವಾದಾಗಿನಿಂದಲೂ ಒಂದೇ ತಂಡಕ್ಕೆ ಆಡುತ್ತಿರುವ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ
ಡೆಲ್ಲಿ ತಂಡದ ವಿರುದ್ಧದ ಪಂದ್ಯದ ಮೂಲಕ ಕೊಹ್ಲಿ ಆರ್ ಸಿಬಿ ಪರ ತಮ್ಮ 197 ಪಂದ್ಯವನ್ನಾಡಿ ಸೋಮರ್‌ಸೆಟ್‌ನ ಜೇಮ್ಸ್ ಹಿಲ್ಡ್ರೆತ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಸರಾಸರಿ 37.77 ರಂತೆ ಕೊಹ್ಲಿ ಈ ವರೆಗೂ ಐಪಿಎಲ್ ನಲ್ಲಿ 5969 ರನ್ ಗಳನ್ನು ದಾಖಲಿಸಿದ್ದು 132 ಸ್ಟ್ರೈಕ್ ರೇಟ್ ನ್ನು ಹೊಂದಿದ್ದಾರೆ. 5 ಶತಕಗಳು, 39 ಅರ್ಧ ಶತಕ ದಾಖಲಿಸಿರುವ ಕೊಹ್ಲಿ ಐಪಿಎಲ್ ನ ಒಂದೇ ಸೀಸನ್ ನಲ್ಲಿ 900 ರನ್ ಗಳನ್ನು ಗಳಿಸಿರುವ ಏಕೈಕ ಆಟಗಾರನಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


