ಕ್ರಿಕೆಟ್

ಆಸೀಸ್‌ ವಿರುದ್ಧದ ಟಿ20 ಸರಣಿಗೆ ನಟರಾಜನ್‌ ಭಾರತ ತಂಡದ ವಿಶೇಷ ಅಸ್ತ್ರ: ವಿವಿಎಸ್‌ ಲಕ್ಷ್ಮಣ್

ಆಸ್ಟ್ರೇಲಿಯಾ ಪ್ರವಾಸಕ್ಕೆ ಪ್ರಕಟಿಸಿದ ಟೀಮ್‌ ಇಂಡಿಯಾಗೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿತ್ತು. ಹೀಗಾಗಿ ತಂಡ ಆಸೀಸ್‌ ಪ್ರವಾಸಕ್ಕೆ ವಿಮಾನ ಹತ್ತುವ ಮೊದಲು ಪರಿಷ್ಕೃತ ತಂಡವನ್ನು ಪ್ರಕಟಿಸಲಾಯಿತು.

ಆಸೀಸ್‌ ವಿರುದ್ಧದ ಟಿ20 ಸರಣಿಗೆ ನಟರಾಜನ್‌ ಭಾರತ ತಂಡದ ವಿಶೇಷ ಅಸ್ತ್ರ: ವಿವಿಎಸ್‌ ಲಕ್ಷ್ಮಣ್
ವಿವಿಎಸ್ ಲಕ್ಷ್ಮಣ್
Published On :

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸಕ್ಕೆ ಪ್ರಕಟಿಸಿದ ಟೀಮ್‌ ಇಂಡಿಯಾಗೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿತ್ತು. ಹೀಗಾಗಿ ತಂಡ ಆಸೀಸ್‌ ಪ್ರವಾಸಕ್ಕೆ ವಿಮಾನ ಹತ್ತುವ ಮೊದಲು ಪರಿಷ್ಕೃತ ತಂಡವನ್ನು ಪ್ರಕಟಿಸಲಾಯಿತು.

ಇನ್ನು ಭಾರತ ತಂಡಗಳಲ್ಲಿ ಇಬ್ಬರು ಯುವ ವೇಗಿಗಳಿಗೆ ಸ್ಥಾನ ಸಿಕ್ಕಿದೆ. ಟೆಸ್ಟ್‌ ಕ್ರಿಕೆಟ್‌ಗೆ ಮೊಹಮ್ಮದ್‌ ಸಿರಾಜ್‌ ಅವರ ಆಯ್ಕೆ ಅಚ್ಚರಿ ತಂದರೆ, ಮತ್ತೊಂದೆಡೆ ಮಾಂತ್ರಿಕ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಗಾಯಗೊಂಡಿದ್ದ ಕಾರಣ ಅವರ ಸ್ಥಾನದಲ್ಲಿ ಎಡಗೈ ವೇಗದ ಬೌಲರ್‌ ಟಿ ನಟರಾಜನ್‌ಗೆ ಟೀಮ್‌ ಇಂಡಿಯಾ ಟಿ20 ತಂಡದ ಟಿಕೆಟ್‌ ಲಭ್ಯವಾಗಿತ್ತು.

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆಡಿದ ತಮಿಳುನಾಡಿನ ಯುವ ಎಡಗೈ ವೇಗಿ ತಮ್ಮ ಅದ್ಭುತ ಯಾರ್ಕರ್‌ಗಳು ಮತ್ತು ಮಾರಕ ಬೌನ್ಸರ್‌ಗಳು ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿ ಎಲ್ಲರ ಗಮನ ಸೆಳೆದಿದ್ದರು. ಅವರ ಈ ಮನಮೋಹಕ ಪ್ರದರ್ಶನದ ಫಲವೇ ಇದೀಗ ಭಾರತ ತಂಡದ ಪರ ಆಡುವ ಅವಕಾಶ ತಂದುಕೊಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.