ಐಪಿಎಲ್ 2020: ಬಯೋ ಬಬಲ್ ನಲ್ಲಿ ಮಾನಸಿಕವಾಗಿ ಕಠಿಣರಾಗಿರಬೇಕು; ಪ್ರತಿ ಆಟಗಾರನಿಗೂ ಧನ್ಯವಾದ ಹೇಳಿದ ಸೌರವ್ ಗಂಗೂಲಿ
ಐಪಿಎಲ್ 13ನೇ ಆವೃತ್ತಿ ಭರ್ಜರಿ ಯಶಸ್ಸನ್ನು ಸಾಧಿಸಿದ ಬೆನ್ನಲ್ಲೇ ಆಟಗಾರರ ಶ್ರಮಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಧನ್ಯವಾದ ಹೇಳಿದ್ದಾರೆ.

ದುಬೈ: ಐಪಿಎಲ್ 13ನೇ ಆವೃತ್ತಿ ಭರ್ಜರಿ ಯಶಸ್ಸನ್ನು ಸಾಧಿಸಿದ ಬೆನ್ನಲ್ಲೇ ಆಟಗಾರರ ಶ್ರಮಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಧನ್ಯವಾದ ಹೇಳಿದ್ದಾರೆ.
ಕೊರೊನಾ ವೈಸರ್‌ನ ಆತಂಕದ ಮಧ್ಯೆ ಸಾಕಷ್ಟು ಸವಾಲುಗಳ ಮಧ್ಯೆ ಯುಎಇನಲ್ಲಿ ಈ ಬಾರಿಯ ಟೂರ್ನಿಯನ್ನು ಆಯೋಜಿಸಲಾಗಿತ್ತು. ಪ್ರೇಕ್ಷಕರ ಅನುಪಸ್ಥಿತಿಯಲ್ಲೂ ಈ ಟೂರ್ನಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯಶಸ್ಸಿನ ಸಂತಸವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವ್ಯಕ್ತಪಡಿಸಿದ್ದಾರೆ.
ಬುಧವಾರ ಟೂರ್ನಿಯ ಯಶಸ್ಸಿನ ಬಗ್ಗೆ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದು, ಈ ಬಾರಿಯ ಐಪಿಎಲ್ ಟೂರ್ನಿ ನಡೆಯಲು ಸಾಧ್ಯವಾಗಿಸಿದ ಎಲ್ಲಾ ಫ್ರಾಂಚೈಸಿಗಳ ಪ್ರತಿಯೊಬ್ಬ ಆಟಗಾರನಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
"ಬಿಸಿಸಿಐನ ಪದಾಧಿಕಾರಿಗಳ ಪರವಾಗಿ ಹಾಗೂ ವೈಯಕ್ತಿಕವಾಗಿ ಪ್ರತೀ ತಂಡದ ಎಲ್ಲಾ ಆಟಗಾರರಿಗೂ ಧನ್ಯವಾದಗಳು. ಕಠಿಣ ಬಯೋಬಬಲ್ ಮಧ್ಯೆಯೂ ಈ ಟೂರ್ನಿ ಯಶಸ್ವಿಯಾಗಿ ನಡೆಯುವುದನ್ನು ಸಾಧ್ಯವಾಗಿಸಿದ್ದೀರಿ. ನಿಜಕ್ಕೂ ಮಾನಸಿಕವಾಗಿ ಇದು ಕಠಿಣ. ಆದರೆ ನಿಮ್ಮ ಬದ್ಧತೆ ಭಾರತೀಯ ಕ್ರಿಕೆಟ್ ಏನು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


