ಸ್ವಿಂಗ್ ಬೌಲಿಂಗ್‌ಗೆ ಹೊಸ ತಂತ್ರ ಸೂಚಿಸಿದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್
ಕೋವಿಡ್-19 ಹತೋಟಿಗೆ ಬಂದ ಬಳಿಕ ಪುನರಾರಂಭವಾಗುವ ಕ್ರಿಕೆಟ್ ಟೂರ್ನಿಗಳಲ್ಲಿ ಚೆಂಡಿಗೆ ಹೊಳಪು ನೀಡಲು ಎಂಜಲು ಸವರುವುದು ಅಥವಾ ಚೆಂಡು ವಿರೂಪಗೊಳಿಸುವುದಕ್ಕೆ ಪರ್ಯಾಯವಾಗಿ ಇನ್ನೇನು ಮಾಡಬಹುದು.

ಮೆಲ್ಬೋರ್ನ್: ಕೋವಿಡ್-19 ಹತೋಟಿಗೆ ಬಂದ ಬಳಿಕ ಪುನರಾರಂಭವಾಗುವ ಕ್ರಿಕೆಟ್ ಟೂರ್ನಿಗಳಲ್ಲಿ ಚೆಂಡಿಗೆ ಹೊಳಪು ನೀಡಲು ಎಂಜಲು ಸವರುವುದು ಅಥವಾ ಚೆಂಡು ವಿರೂಪಗೊಳಿಸುವುದಕ್ಕೆ ಪರ್ಯಾಯವಾಗಿ ಇನ್ನೇನು ಮಾಡಬಹುದು ಎಂಬ ಪ್ರಶ್ನೆಗೆ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅದ್ವಿತೀಯ ಉತ್ತರದೊಂದಿಗೆ ಮುಂದೆ ಬಂದಿದ್ದಾರೆ.
ಅವರ ಪ್ರಕಾರ, ಬೌಲಿಂಗ್ ವೇಳೆ ಚೆಂಡನ್ನು ಸ್ವಿಂಗ್ ಮಾಡುವುದಕ್ಕಾಗಿ ಅದಕ್ಕೆ ಎಂಜಲು ಸವರುವ ಅಥವಾ ಅದನ್ನು ವಿರೂಪಗೊಳಿಸುವ ಬದಲು ಅದನ್ನು ತಯಾರು ಮಾಡುವಾಗಲೇ ಅದರ ಒಂದು ಬದಿ ಭಾರವಾಗಿರುವಂತೆ ನೋಡಿಕೊಳ್ಳಬೇಕಿದೆ.
ಒಂದು ಬದಿ ಭಾರವಾಗಿದ್ದರೆ, ಚೆಂಡು ತನ್ನಿಂತಾನಾಗಿಯೇ ಸ್ವಿಂಗ್ ಆಗುತ್ತದೆ. ಈ ರೀತಿಯ ಚೆಂಡುಗಳನ್ನು ಬಳಸುವುದರಿಂದ ವೇಗದ ಬೌಲರ್‌ಗಳು ಸಪಾಟೆ ಪಿಚ್‌ಗಳಲ್ಲೂ ಸ್ವಿಂಗ್ ಮಾಡಬಹುದು. ಹೊಸ ಪದ್ಧತಿಯಿಂದ ಚೆಂಡು ವಿರೂಪಗೊಳಿಸುವ ಪದ್ಧತಿಯನ್ನು ಶಾಶ್ವತವಾಗಿ ನಿರ್ಮೂಲ ಮಾಡಬಹುದು ಎಂಬುದು ಲೆಗ್‌ಸ್ಪಿನ್ ಮಾಂತ್ರಿಕನ ಅಭಿಪ್ರಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


