ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗುವ ಕನಸು ಕಾಣುತ್ತಿರುವ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್!
ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೊಯೇಬ್ ಅಖ್ತರ್ ಟೀಮ್ ಇಂಡಿಯಾಗೆ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಲು ರೆಡಿ ಎಂದು ಹೇಳಿಕೊಂಡಿದ್ದಾರೆ.

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗವ ಕನಸು ಕಾಣುತ್ತಿದ್ದಾರೆ.
ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೊಯೇಬ್ ಅಖ್ತರ್ ಟೀಮ್ ಇಂಡಿಯಾಗೆ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಲು ರೆಡಿ ಎಂದು ಹೇಳಿಕೊಂಡಿದ್ದಾರೆ. ವೇಗದ ಬೌಲಿಂಗ್ ಬಗ್ಗೆ ತಮ್ಮಲ್ಲಿ ಇರುವ ತಮ್ಮ ಜ್ಞಾನವನ್ನು ಹಂಚಿಕೊಂಡರೆ ಕ್ರೀಡೆಯ ಅಭಿವೃದ್ಧಿಗೆ ನೆರವಾಗಲಿದೆ ಎಂದು ಜನಪ್ರಿಯ ಸೋಷಿಯಲ್ ಮೀಡಿಯಾ ವೇದಿಕೆ ಹೆಲೋ ಅಪ್ಲಿಕೇಷನ್‌ನ ಲೈವ್ ವಿಡಿಯೋದಲ್ಲಿ ಹೇಳಿದ್ದಾರೆ.
ವೇಗದ ಬೌಲಿಂಗ್ ಕುರಿತಾಗಿ ತಮ್ಮೊಳಗಿನ ಜ್ಞಾನವನ್ನು ಹಂಚಿಕೊಳ್ಳಲು ತಾವು ಸದಾ ಮುಕ್ತವಾಗಿದ್ದು, ಭಾರತೀಯ ಬೌಲರ್‌ಗಳಿಗೆ ಕೋಚಿಂಗ್ ಮಾಡಿದರೆ ಸಂತಸವಾಗಲಿದೆ ಎಂದು ತಮ್ಮೊಳಗಿನ ಇಂಗಿತ ಹೊರಹಾಕಿದ್ದಾರೆ.
"ಖಂಡಿತಾ, ನನ್ನ ಕೆಲಸವೇ ಜ್ಞಾನವನ್ನು ಬೇರೆಯವರೊಂದಿಗ ಹಂಚಿಕೊಳ್ಳುವುದು. ಈ ಜ್ಞಾನವನ್ನು ನಾನು ಸಂಪಾದಿಸಿದ್ದೇನೆ ಎಂದ ಮೇಲೆ ಅದನ್ನು ಹಂಚಿಕೊಳ್ಳುವುದು ಕೂಡ ನನ್ನ ಜವಾಬ್ದಾರಿ. ನನ್ನಿಂದ ಈಗಿರುವ ಬೌಲರ್‌ಗಳಿಗಿಂತಲೂ ಹೆಚ್ಚು ವೇಗವಾಗಿ ಬೌಲಿಂಗ್ ಮಾಡುವ ಮತ್ತು ಆಕ್ರಮಣಕಾರಿ ಸ್ವಭಾವದ ವೇಗಿಗಳನ್ನು ತರುವುದು ಸಾಧ್ಯ. ಬ್ಯಾಟ್ಸ್‌ಮನ್‌ಗಳ ಎದುರು ಈ ವೇಗಿಗಳ ಅಬ್ಬರ ಕಂಡು ಎಲ್ಲರು ಆನಂದಿಸಬಲ್ಲರು ಎಂದಿದ್ದಾರೆ.
ಅಂದಹಾಗೆ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ಮತ್ತು ಉಮೇಶ್ ಯಾದವ್ ಅವರನ್ನು ಒಳಗೊಂಡ ಟೀಮ್ ಇಂಡಿಯಾ ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಬಲಿಷ್ಠ ಬೌಲಿಂಗ್ ವಿಭಾಗವನ್ನು ಹೊಂದಿರುವ ತಂಡವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


